“ತಿಳಿನೀರು” ಕವನ ಸಂಕಲನ ಲೋಕಾರ್ಪಣೆ

Must Read

ಅಥಣಿ – ದಿ.೩೦ ರಂದು ದಿವಂಗತ ಪ್ರಭಾಕರ ಬಿಳ್ಳೂರ ಅವರ “ತಿಳಿನೀರು” ಕವನ ಸಂಕಲನವನ್ನು ಸಾಹಿತ್ಯ ಆಸಕ್ತಿ ಉಳ್ಳ ವಕೀಲರಾದ ಐ.ಐ. ಚೌಲಗಿ ಅವರು ಲೋಕಾರ್ಪಣೆ ಮಾಡಿದರು.

ಅವರು ತಮ್ಮ ಹಿತ ನುಡಿಯಲ್ಲಿ, ಪ್ರಭಾಕರ ಬಿಳ್ಳೂರ ಅವರು ನಮ್ಮ ಗಡಿನಾಡಿನ ಹಿರಿಯ ಕವಿ, ಹೆಮ್ಮೆಯ ನಾಟಕಕಾರ ,ಒಳ್ಳೆಯ ಕಥೆಗಾರ ಎಂದು ಬಣ್ಣಿಸಿದರು. “ತಿಳಿನೀರು” ಕವನ ಸಂಕಲನವು 1972 ರಲ್ಲಿ ಮೊದಲ ಬಾರಿಗೆ ಚಂದ್ರ ಗಂಗಾ ಜ್ಞಾನಪೀಠ ಶೇಡಬಾಳ ಇವರ ಪ್ರಕಾಶನದಲ್ಲಿ ಪ್ರಕಾಶನ ಕಂಡಿತ್ತು. ಇದಕ್ಕೆ ಸ್ವತಃ ಮಿರ್ಜಿ ಅಣ್ಣಾರಾಯರು ಮುನ್ನುಡಿಯನ್ನೂ ಬರೆದಿದ್ದರು. ಈಗ ಸುಮಾರು 50 ವರ್ಷಗಳ ನಂತರ ಪ್ರಭಾಕರ ಬಿಳ್ಳೂರ ಅವರ ಮಗನಾದ ದೀಪಕ ಬಿಳ್ಳೂರ ಅವರು ಎರಡನೆಯ ಬಾರಿ ಮುದ್ರಣ ಮಾಡಿ ಕರುನಾಡ ಕವಿ ಪ್ರಿಯರಿಗೆ ಅರ್ಪಣೆ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆ ಹಾಗೂ ಸಂತೋಷದ ವಿಷಯ.

ಈ ಎರಡನೆಯ ಮುದ್ರಣವು “ಪೂಜ್ಯ ಮಾತಾಜಿ ಪ್ರಕಾಶನ “- ಅಥಣಿ ಇವರ ಪ್ರಕಾಶನದಿಂದ ಪ್ರಕಟಗೊಂಡಿದೆ. ಕವನಸಂಕಲನದಲ್ಲಿ 41 ಕವನಗಳಿದ್ದು ಧಾರ್ಮಿಕ-ಸಾಮಾಜಿಕ -ಇತಿಹಾಸ ಹಾಗೂ ರಾಜಕಾರಣದ ಪ್ರಸಂಗಗಳನ್ನು ಕನ್ನಡಿ ಹಿಡಿದಂತಿವೆ ಎಂದರು.

ಕಾರ್ಯಕ್ರಮದಲ್ಲಿ ಚಂದ್ರಶೇಖರ ಬಿಳ್ಳೂರ ಹಾಗೂ ವಿಜಯಲಕ್ಷ್ಮಿ ಚೌಲಗಿ ಕೂಡ ಉಪಸ್ಥಿತರಿದ್ದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group