ಸಿಂದಗಿ – 2024-25 ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನದ ಅಡಿಯಲ್ಲಿ ಸಿಂದಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸಿಂದಗಿ ನಗರದ ಬಸವೇಶ್ವರ ವೃತ್ತದಿಂದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದವರೆಗೆ ರಸ್ತೆಯ ಎರಡು ಬದಿಯಲ್ಲಿ ಫುಟಪಾತ್ ಪೇವರ್ಸ್ ಹಾಗೂ ಫುಟಪಾತ್ ಸೈಡ್ ಗ್ರಿಲ್ ಅಳವಡಿಸುವ ರೂ. ೧ ಕೋಟಿ ಕಾಮಗಾರಿಗೆ ಪುರಸಭೆ ಅಧ್ಯಕ್ಷರಾದ ಡಾ. ಶಾಂತವೀರ ಮನಗೂಳಿ ರವರು ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
ಇದೆ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಹಣಮಂತ ಸುಣಗಾರ, ಸದಸ್ಯರ ಪ್ರತಿನಿದಿಯಾದ ಶರಣಪ್ಪ ಸುಲ್ಪಿ, ನಾಮ ನಿರ್ದೇಶನ ಸದಸ್ಯರಾದ ಸಾಯಬಣ್ಣ ಪುರದಾಳ, ಚನ್ನಪ್ಪ ಗೋಣಿ ಸೇರಿದಂತೆ ಚಂದ್ರಶೇಖರ ಮನಗೂಳಿ, ರಜತ ತಾಂಬೆ ಸೇರಿದಂತೆ ಇತರರು ಉಪಸ್ಥಿತರಿದ್ದರು.