ವಿದ್ಯಾರ್ಥಿ ಜೀವನ ಬಂಗಾರವಾಗಬೇಕಾದರೆ ಶ್ರಮ ಪಡಬೇಕು

Must Read

ಸಿಂದಗಿ: ವಿದ್ಯಾರ್ಥಿ ಜೀವನ, ಬಂಗಾರದ ಜೀವನ. ಬಂಗಾರದಂತಹ ಜೀವನವಾಗಬೇಕಾದರೆ ನೀವು ವಿದ್ಯಾರ್ಥಿ ಜೀವನದಲ್ಲಿ ಕಷ್ಟ ಪಡಬೇಕು. ನಿರಂತರ ಪ್ರಯತ್ನ, ಬಿಡದ ಛಲಗಳಿಂದ ಏನೆಲ್ಲ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇಂತಹ ಸಾಧನೆ ಮಾಡಿದ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ನಿಮ್ಮಿಂದ ಮತ್ತಷ್ಟು ಉತ್ತಮ ಸಾಧನೆ ಮಾಡುವ ಶಕ್ತಿ ಆ ದೇವರು ನಿಮಗೆ ನೀಡಲಿ ಎಂದು ಫಾದರ್ ಆಲ್ವಿನ್ ಡಿಸೋಜಾ ಅವರು ಹೇಳಿದರು.

ಪಟ್ಟಣದ ಲೊಯೋಲ ಶಾಲೆಯಲ್ಲಿ ಕ್ರಿಸ್ಮಸ್ ಹಾಗೂ ಹಳೆಯ ವಿದ್ಯಾರ್ಥಿಗಳ ಸಹಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕ್ರಿಸ್ಮಸ್ ಹಬ್ಬವು ಶಾಂತಿ ಪ್ರೀತಿ ಹಾಗೂ ಕ್ಷಮೆಯ ಸಂದೇಶಗಳನ್ನು ಬೀರುವ ಹಬ್ಬವಾಗಿದೆ. ನಾವೆಲ್ಲರೂ ಜೀಸಸ್ ಅವರ ಈ ತತ್ವಗಳನ್ನು ಅಳವಡಿಸಿಕೊಂಡು ಶಾಂತಿಯ ಸಮಾಜ ನಿರ್ಮಾಣದಲ್ಲಿ ಪಾಲ್ಗೊಳ್ಳೋಣ  ಎಂದರು.

ಸಿಸ್ಟರ್ ಕುಸುಮ ಅವರು ಮಾತನಾಡಿ, ಪ್ರಪಂಚದಾದ್ಯಂತ, ಕ್ರಿಸ್‍ಮಸ್ ಹೆಚ್ಚು ಇಷ್ಟಪಡುವ ಹಬ್ಬವಾಗಿದೆ ಮತ್ತು ಒಳ್ಳೆಯ ಕಾರಣವಿದೆ. ಎಲ್ಲಾ ನಂತರ, ಕ್ಯಾರೋಲ್‍ಗಳನ್ನು ಕೇಳಲು, ರುಚಿಕರವಾದ ಗುಡಿಗಳನ್ನು ಆನಂದಿಸಲು ಮತ್ತು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲು ಯಾರು ಇಷ್ಟಪಡುವುದಿಲ್ಲ? ಹಬ್ಬವು ದಾನದೊಂದಿಗೆ ಸಂಬಂಧಿಸಿದೆ, ಸಂತೋಷವನ್ನು ಹರಡುತ್ತದೆ ಮತ್ತು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುತ್ತದೆ. ದಿನದ ವಿಶೇಷತೆ ಎಂದರೆ ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್‍ಮಸ್ ಹಬ್ಬವನ್ನಾಗಿ ಪ್ರತಿವರ್ಷ ಆಚರಿಸುವುದು. ಇದಲ್ಲದೇ ಪರಸ್ಪರ ಕ್ರಿಸ್ಮಸ್ ಕಾರ್ಡ್, ಉಡುಗೊರೆ ನೀಡುವುದು, ಚರ್ಚ್​ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವುದು ಜೊತೆಗೆ ಮನೆಯನ್ನು ಕ್ರಿಸ್​ಮಸ್​ ಟ್ರೀ ಹಾಗೂ ಹೂವುಗಳಿಂದ ಆಲಂಕರಿಸುವುದಾಗಿದೆ. ಸಂಬಂಧಿಕರು, ಸ್ನೇಹಿತರೆಲ್ಲಾ ಒಟ್ಟಾಗಿ ಸೇರಿ ವಿಶೇಷ ಆಹಾರಗಳೊಂದಿಗೆ ಸಂಭ್ರವಿಸುವುದಾಗಿದೆ ಎಂದು ತಿಳಿಸಿದರು.

ಹಳೆಯ ವಿದ್ಯಾರ್ಥಿನಿ ಕುಮಾರಿ ಬೃಂದಾ ಮಾತನಾಡಿ, ಲೊಯೋಲ ಶಾಲೆಯು ಉತ್ತಮ ಶಾಲಾ ವಾತಾವರಣ ಹಾಗೂ ಶಾಲಾ ಮೈದಾನವನ್ನು ಹೊಂದಿರುವುದರ ಜೊತೆಗೆ ಉತ್ತಮ ಸಿಬ್ಬಂದಿಯನ್ನು ಹೊಂದಿದೆ.

ಇಲ್ಲಿನ ಶಿಕ್ಷಕರು ನಮಗೆ ಜ್ಞಾನ ನೀಡುವುದರ ಜೊತೆಗೆ ಉತ್ತಮ ಸಂಸ್ಕಾರ ನೀಡುವಂತಹ ಉದಾತ್ತ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು,

ಇನ್ನೋರ್ವ ವಿದ್ಯಾರ್ಥಿ ಕುಮಾರಿ ತಸ್ಕಿನ್ ಯಾಳಗಿ ಮಾತನಾಡಿ  ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಸಹಕಾರಿಯಾಗುವಂತಹ ಉತ್ತಮ ವಾತಾವರಣ ಶಾಲೆಯಲ್ಲಿದೆ ಎಂದು ಬಣ್ಣಿಸಿದರು.

ಶಾಲಾ ಪ್ರಾಂಶುಪಾಲರಾದ  ಫಾದರ್ ಲ್ಯಾನ್ಸಿ ಫನಾರ್ಂಡಿಸ್ ಇವರು, ಉತ್ತಮ ಗೀತೆಯನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸುವುದರ ಜೊತೆಗೆ ಉತ್ತಮ ಸಂದೇಶವನ್ನು ನೀಡಿದರು.

ಉಪ ಪ್ರಾಂಶುಪಾಲೆ ಸಿಸ್ಟರ್ ಗ್ರೇಸಿ ಹಾಗೂ ಪೋಷಕ ಶಿಕ್ಷಕರ ಸಭೆ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದ ಸಂಚಾಲಕ ಸಿದ್ದಪ್ಪ ಎಂ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಶಿಕ್ಷಕ ಸಿದ್ದಪ್ಪ ಎಂ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಜೆನಿಫರ್ ಪ್ರಾರ್ಥಿಸಿದರು. ಬಸವಲಿಂಗ ಶಿಕ್ಷಕ ಸ್ವಾಗತಿಸಿದರು. ಫಾತಿಮಾ ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು,

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group