ಮೂಲ ಕೃಷಿ ಪದ್ಧತಿ ದೂರವಾಗುತ್ತಿದೆ – ಮಹಾಂತಯ್ಯ ಗಚ್ಚಿನಮಠ

Must Read

ಹುನಗುಂದ –  ಅಗತ್ಯ ತಂತ್ರಜ್ಞಾನ ಬಳಕೆಯೊಂದಿಗೆ ಯುವಕರು ಓದಿನ, ಜೊತೆ ಪೂರ್ವಜರ ಕೃಷಿ ಪದ್ಧತಿ ಮೂಲ ಒಕ್ಕಲುತನದ ಮರು ಜೀವಕ್ಕೆ ಹೆಚ್ಚು ಹೊತ್ತು ನೀಡಬೇಕೆಂದು ಸೌಂದರ್ಯ ಸೌಹಾರ್ದಯುತ ಕೃಷಿ ಪರಂಪರೆಯ ಗಚ್ಚಿನ ಮಠದ ವೇದಮೂರ್ತಿ ಮಹಾಂತಯ್ಯ ಗಚ್ಚಿನ ಮಠ ಹೇಳಿದರು

ಪಟ್ಟಣದ ಗಚ್ಚಿನಮಠದಲ್ಲಿ ನಾಡಿಗೆ ಹೆಸರಾದ ರೈತ ಮತ್ತು ಎತ್ತು ರಾಸುಗಳ ಹಬ್ಬ ಕಾರ ಹುಣ್ಣಿಮೆಯ ನಿಮಿತ್ತ ನಡೆಸಿದ ಕೃಷಿ ಪರಿಕರಿಗಳ ವಿಶೇಷ ಪೂಜಾ ಸಮಾರಂಭದಲ್ಲಿ ಅವರು ಮಾತನಾಡಿದರು

ದೇಶಕ್ಕೆ ಅನ್ನ ನೀಡುವ ರೈತನಿಗೆ ಮತ್ತು ವರ್ಷವಿಡಿ ದುಡಿದು ಬೆಳೆದ ಫಸಲಿಗೆ ಬೆಲೆ ಇರದೆ ದಲ್ಲಾಳಿಗಳ ಪಾಲಾಗುತ್ತಿದೆ ಮತ್ತು ಕೃಷಿ  ನೀತಿ ಸರಿಯಾಗಿ ಇಲ್ಲದಿರುವುದಕ್ಕೆ ಮೂಲ ಕೃಷಿ ಪದ್ಧತಿ ದೂರವಾಗುತ್ತಿದೆ ರೈತನ ಉಳಿವಿಗೆ ಸೂಕ್ತ ಕೃಷಿ ನೀತಿ ಒದಗಿಸದಿದ್ದರೆ ಸೋತು ನೆಲಕಚ್ಚುವ ರೈತ ಮತ್ತು ಕೃಷಿ ಪದ್ಧತಿ ಹಿಂದೆ ಸರಿಯುವುದರಲ್ಲಿ ಸಂಶಯವೇ ಇಲ್ಲ ಸರ್ಕಾರ ಹೆಚ್ಚು ಗಮನಹರಿಸಿ ಸಾಕಷ್ಟು ಕೃಷಿ ಚಟುವಟಿಕೆಗಳನ್ನು ತಟ್ಟಿ ಉತ್ತೇಜನ ನೀಡಿ ಯುವಕರನ್ನು ಪ್ರೋತ್ಸಾಹಿಸಿದಾಗ ಮೂಲ ಕೃಷಿ ಚೇತರಿಕೆ ಆಗುತ್ತದೆ ಎಂದರು,

ರೈತ ನಾಗಪ್ಪ ತ್ಯಪ್ಪಿ ಕೃಷ್ಣ ಜಾಲಿಹಾಳ ಮಾತನಾಡಿದರು ಮುತ್ತಣ್ಣ ಹವಾಲ್ದಾರ್ ಪರಮೇಶ ಬಾಗವಾಡಗಿ ವೀರೇಶ ಕುರ್ತುಕೋಟಿ ಮಲ್ಲನಗೌಡ ಪಾಟೀಲ ವೆಂಕಟರಮಣಿ ಶಿವಪ್ಪ ಸುಂಕಾಪೂರ ಹಾಜರಿದ್ದರು

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group