ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷರು, ಮಾಜಿ ಸಚಿವರು, ಹಿರಿಯ ರಾಜಕಾರಣಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶಿವಾನಂದ ಎಚ್.ಕೌಜಲಗಿ ಅವರ 82 ನೆಯ ಹುಟ್ಟುಹಬ್ಬದ ನಿಮಿತ್ತ ಸನ್ಮಾನಿಸಿ ಶುಭಾಶಯ ಕೋರಲಾಯಿತು.
ಪೂಜ್ಯ ಶ್ರೀ ವೀರಯ್ಯ ಸ್ವಾಮಿಗಳು, ಮರ್ಚಂಟ್ಸ್ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಶೈಲ ಶರಣಪ್ಪನವರ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ಕನ್ನಡ ಜಾನಪದ ಪರಿಷತ್ತಿನ ತಾಲೂಕಾ ಅಧ್ಯಕ್ಷರಾದ ಚಂದ್ರಶೇಖರ ಕೊಪ್ಪದ, ಬೂದಿಹಾಳ ಸರಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಎನ್.ಆರ್ ಠಕ್ಕಾಯಿ, ಹಿರಿಯ ರಾಜಕಾರಣಿ ರಮೇಶ ಹುಲ್ಲೆನ್ನವರ, ಸವದತ್ತಿ ತಾಲೂಕಾ ಪಂಚಾಯತಿ ಮಾಜಿ ಸದಸ್ಯ ಶ್ರೀಕಾಂತ ಸುಂಕದ, ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷರಾದ ಮಹಾಂತೇಶ ರೇಶ್ಮಿ, ಉಪಾಧ್ಯಕ್ಷ ಉಮೇಶ ಹಿರೇಮಠ, ಪದಾಧಿಕಾರಿಗಳಾದ ಮಹಾಂತೇಶ ಅಕ್ಕಿ, ಸಂಜೀವ ಬಾರಿಗಿಡದ, ಶಿವಕುಮಾರ ಹಂಪಣ್ಣವರ, ವರ್ತಕರಾದ ವೀರಭದ್ರಪ್ಪ ಕೊಪ್ಪದ, ನಾಗರಾಜ ಪಾಟೀಲ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.