Homeಸುದ್ದಿಗಳುಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗುವದು ನಿಲ್ಲಲಿ - ಮಹಾಂತಯ್ಯ ಹಿರೇಮಠ

ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗುವದು ನಿಲ್ಲಲಿ – ಮಹಾಂತಯ್ಯ ಹಿರೇಮಠ

ಸಿಂದಗಿ: ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ಪೂಜಾ ಮನೋಭಾವ ಮೂಲಕ ಅವರಿಗೆ ಕುಟುಂಬದಲ್ಲಿ ಹೆಚ್ಚು ಗೌರವ ಇದೆ ಎಂದು ಮಹಾಂತಯ್ಯ ಶಿ ಹಿರೇಮಠ ಹೇಳಿದರು.

ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಹಿರೇಮಠದ ಪರಿವಾರದವರು ಹಮ್ಮಿಕೊಂಡ ಶ್ರೀ ದೇವಿ ಪುರಾಣ ಪ್ರವಚನ ಮಂಗಲೋತ್ಸವದಲ್ಲಿ 1008 ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಶೃದ್ಧಾ ಭಕ್ತಿಯಿಂದ ಶ್ರೀದೇವಿಯನ್ನು ಮನದಲ್ಲಿ ಪ್ರತಿ ನಿತ್ಯ ಪೂಜಿಸಿ ಗೌರವಿಸವುದರಿಂದ ಬಂದ ಕಷ್ಟಗಳು ದೂರವಾಗುತ್ತವೆ ಎಂಬುವುದು ಹಿರೇಮಠದ ಗುರು ಹಿರಿಯರು ಆಶೆಯಂತೆ ಅವರ ಕುಟುಂಬದವರು ಶ್ರೀದೇವಿಯ ಪುರಾಣ ಆಲಿಸುವ ಮೂಲಕ ಉತ್ತಮ ಕಾರ್ಯ ಮಾಡುವುದರಿಂದ ಸರ್ವರಿಗೂ ಶ್ರೀದೇವಿ ಒಳಿತನ್ನು ಮಾಡಲಿ ಎಂದರು.

ಇಂದು ಮಹಿಳೆಯರು ನಿತ್ಯ ದೂರದರ್ಶನದಲ್ಲಿ ಮೂಡಿ ಬರುತ್ತಿರುವ ಧಾರಾವಾಹಿಗಳಲ್ಲಿ ಬರುವ ಪಾಶ್ಚಾತ್ಯ ಸಂಸ್ಕೃತಿ ಅನುಕರಣೆಯನ್ನು ಕೈ ಬಿಟ್ಟು ನಾವು ನಮ್ಮ ಭಾರತೀಯ ಸಂಸ್ಕೃತಿಯನ್ನು ಮೆಚ್ಚುವ ಮೂಲಕ ಸಾತ್ವಿಕ ಜೀವನ ನಡೆಸಬೇಕು.ನಮ್ಮ ಗುರು ಹಿರಿಯರು ಹಾಕಿ ಕೊಟ್ಟಿರುವ ಸನ್ಮಾರ್ಗದಲ್ಲಿ ನಡೆಯುವ ಮುಖಾಂತರ ಧರ್ಮ ಆಚಾರ ವಿಚಾರ ಸಂಪ್ರದಾಯ ಧಾರ್ಮಿಕ ಪದ್ದತಿಗಳನ್ನು ಆಚರಣೆ ಮಾಡುವದರಿಂದ ನಮ್ಮ ವ್ಯಕ್ತಿತ್ವ ವಿಕಾಸನಗೊಳ್ಳುತ್ತದೆ .ಸಮಾಜದಲ್ಲಿ ಒಂದೇ ಕುಟುಂಬದ ಸದಸ್ಯರು ರೂಪದಲ್ಲಿ ಸಮಾಜದಲ್ಲಿ ಸಮಾನತೆ ಸಹೋದರತೆಯಿಂದ ಸುಂದರ ಬದುಕು ಕಟ್ಟಿಕೊಂಡು ನುಡಿದಂತೆ ನಡೆಯ ಬೇಕು ಎಂದರು.

ಹಿರೇಮಠದಲ್ಲಿ ಶ್ರೀದೇವಿಯ ಆರಾಧನೆಗಾಗಿ ಒಂಭತ್ತು ದಿನಗಳ ಕಾಲ ಶ್ರೀದೇವಿ ಮೂರ್ತಿಗೆ ಶೃದ್ಧಾ ಭಕ್ತಿಯಿಂದ ಪೂಜಿಸಿ ಶ್ರೀ ದೇವಿಯ ಮಹಿಮೆ ಪುರಾಣವನ್ನು ವೇದಮೂರ್ತಿ ಶಾಂತಯ್ಯ ಗುರಲಿಂಗಯ್ಯ ಹಿರೇಮಠ ಹೇಳಿದರು.

ಕಾರ್ಯಕ್ರಮದಲ್ಲಿ ಚಿಕ್ಕಸಿಂದಗಿ, ಸಿಂದಗಿ, ಬ್ಯಾಕೋಡ, ಗೋಲಗೇರಿ, ಡಂಬಳ, ಮೈಲೇಶ್ವರ, ಬಂದಾಳ, ಬೂದಿಹಾಳ, ಇಂಗಳೇಶ್ವರ, ದಿಂಡವಾರ, ಬಂಟನೂರ, ಕೋರಳ್ಳಿ, ತಾಳಿಕೋಟಿ, ಮುದ್ದೇಬಿಹಾಳ, ತುಂಬಗಿ, ಅಲ್ಲಾಪೂರದ ಸರ್ವ ಭಕ್ತರು ಭಾಗವಹಿಸಿ ಮುತೈದೆಯರಿಗೆ ಉಡಿತುಂಬಿ ತದನಂತರ ಮಹಾ ಪ್ರಸಾದ ನೇರವೇರಿತು. ಅಂದು ಸಂಜೆ ಶ್ರೀ ರೇಣುಕಾ ಯಲ್ಲಮ್ಮ ನಾಟಕ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಶಂಕ್ರಯ್ಯ ಹಿರೇಮಠ, ಪಂಚಯ್ಯ, ಹಿರೇಮಠ, ಶಿವಯ್ಯ ಹಿರೇಮಠ, ಸೋಮಯ್ಯ ಹಿರೇಮಠ, ದಾನಯ್ಯ ಎಂ ಹಿರೇಮಠ, ಈರಯ್ಯ ಹಿರೇಮಠ, ದಾನಯ್ಯ ಹಿರೇಮಠ,ಶ್ರೀಶೈಲಯ್ಯ ಹಿರೇಮಠ, ಗಂಗಯ್ಯ ಶಿ ಹಿರೇಮಠ,‌ ಗುರಲಿಂಗಯ್ಯ ಹಿರೇಮಠ, ರಾಜೇಂದ್ರಯ್ಯ ಹಿರೇಮಠ, ಬಸಲಿಂಗಯ್ಯ ಹಿರೇಮಠ,ಗುಂಡಯ್ಯ ಹಿರೇಮಠ, ರಾಘವೇಂದ್ರಯ್ಯ ಹಿರೇಮಠ,ಮಳೇಂದ್ರಯ್ಯ ಹಿರೇಮಠ, ದಾನಯ್ಯ ಶ ಹಿರೇಮಠ,ಶ್ರೀಶೈಲಯ್ಯ ಗು ಹಿರೇಮಠ, ಗುರಲಿಂಗಯ್ಯ ಮ ಹಿರೇಮಠ,ಗುರುಸಂಗಯ್ಯ ಹಿರೇಮಠ, ಶಿವುಕುಮಾರ ಹಿರೇಮಠ,ಈರಯ್ಯ ಸಾರಂಗಮಠ, ಸಂಗಯ್ಯ ಶಿ ಹಿರೇಮಠ, ಮಲ್ಲಯ್ಯ ಬ ಹಿರೇಮಠ,ಚಿಕ್ಕಸಿಂದಗಿ ಗ್ರಾಮದ ಸರ್ವ ಭಕ್ತರು ಭಾಗವಹಿಸಿದ್ದರು.


ವರದಿ: ಪಂಡಿತ್ ಯಂಪೂರೆ, ಸಿಂದಗಿ

RELATED ARTICLES

Most Popular

error: Content is protected !!
Join WhatsApp Group