spot_img
spot_img

ಮಾತೋಶ್ರೀ ಮುರಿಗೆಮ್ಮ ತಿಪ್ಪಣ್ಣ ಸುಣಗಾರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

Must Read

spot_img
- Advertisement -

ಸಿಂದಗಿ – ಪ್ರಜೆಗಳೇ ಪ್ರಭುಗಳಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತೋರಿಸಲು ಹಾಗೂ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವ ದಿಸೆಯಲ್ಲಿ ಶಾಲಾ ಸಂಸತ್ತಿನ ರಚನೆ ಮಾಡಿ ಪ್ರಾಯೋಗಿಕವಾಗಿ ಪ್ರದರ್ಶನ ಮಾಡಲಾಯಿತು.

ಪಟ್ಟಣದ ಮಾತೋಶ್ರೀ ಮುರಿಗೆಮ್ಮ ತಿಪ್ಪಣ್ಣ ಸುಣಗಾರ ಸರ್ಕಾರಿ ಪ್ರೌಢಶಾಲೆಯಲ್ಲಿ 2021-22 ನೇ ಸಾಲಿನ ಶಾಲಾ ಸಂಸತ್ ಚುನಾವಣೆಯಲ್ಲಿ ನೈಜ ಮತದಾನ ಮಾಡಿ, ನೆಚ್ಚಿನ ನಾಯಕನನ್ನು ಆಯ್ಕೆ ಮಾಡಲು ಮಕ್ಕಳ ಹಿಂಡು ಸಾಲು ಸಾಲಾಗಿ ನಿಂತಿತ್ತು. ಶೇ.100 ರಷ್ಟು ಶಾಂತಿಯುತ ಮತದಾನ, ಕೆಲವೇ ಸ್ಥಾನಗಳಿಗೆ ಹಲವು ಸ್ಪರ್ಧಾಕಾಂಕ್ಷಿಗಳು. ಎರಡಗೈ ತೋರು ಬೆರಳಿಗೆ ಹಾಕಿದ ಶಾಯಿ, ಎರಡು ದಿನದ ನಂತರ ಫಲಿತಾಂಶ ಘೋಷಣೆ. ಇದು ಶಾಲಾ ಮಂತ್ರಿಮಂಡಲ ರಚನೆಗಾಗಿ ಮುಖ್ಯಗುರುಗಳ ನೇತೃತ್ವದಲ್ಲಿ ಶಿಕ್ಷಕರು ಆಯ್ಕೆ ಮಾಡಿಕೊಂಡ ವಿಧಾನ. ಮತದಾನ ಕೊಠಡಿಯಲ್ಲಿ, ಪ್ರತಿಯೊಬ್ಬರಿಗೂ ಎರಡೆರಡು ಬ್ಯಾಲೆಟ್ ಪೇಪರ್ ನೀಡುತ್ತ ಮತ ಚಲಾವಣೆಗೆ ಅನುವು ಮಾಡಿಕೊಡಲಾಗಿತ್ತು. ಮತ ಹಾಕಿದ ಮಕ್ಕಳ ಎಡಗೈ ತೋರು ಬೆರಳಿಗೆ ಶಾಯಿ ಹಾಕಿ ಅದರ ಮಹತ್ವ ಏನು ಎಂಬುದರ ಬಗ್ಗೆ ಅರಿವು ಮೂಡಿಸಲಾಯಿತು ಮತದಾನದ ನಂತರ ಮತ ಪೆಟ್ಟಿಗೆಯನ್ನು ಸ್ಟ್ರಾಂಗ್ ರೂಂಗೆ ತೆಗೆದುಕೊಂಡು ಭದ್ರವಾಗಿ ಸೀಲ್ ಮಾಡಲಾಯಿತು. ಇದನ್ನು ಕೂಡ ವಿಡಿಯೋ ಮಾಡಿ ಮಕ್ಕಳಿಗೆ ಅವ್ಯವಹಾರವಾಗದಂತೆ ತೋರಿಸಲಾಯಿತು.

ಈ ನಡುವಿನ ಸಮಯದಲ್ಲಿ ಶಿಕ್ಷಕರು ಮಕ್ಕಳಿಗೆ ಬೇರೆ ಬೇರೆ ದೇಶಗಳ ಚುನಾವಣಾ ವ್ಯವಸ್ಥೆ, ಜನಪ್ರತಿನಿಧಿಗಳಾಗುವವರ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು.

- Advertisement -

ಶಾಲಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ 10ನೇ ವರ್ಗದ ವಿದ್ಯಾರ್ಥಿಗಳಾದ ಕುಮಾರ್ ಆಕಾಶ್ ಪರಶುರಾಮ್ ನಾಟಿಕರ್, ಕುಮಾರ್ ಪ್ರವೀಣ್ ವೀರೇಶ್ ವಡಗೇರಿ, ಕುಮಾರಿ ಶಾಹಿನ್ ಅಬ್ಬಾಸಲಿ ನದಾಫ್ ಹಾಗೂ ಕುಮಾರಿ ವೈಶಾಲಿ ಅಶೋಕ್ ದಂಡಿನ್ ಸ್ಪರ್ಧಿಸಿ ಚುನಾವಣೆಯಲ್ಲಿ ವಿಜಯಶಾಲಿಯಾದ ಮೇಲೆ ನಾವುಗಳು ನಮ್ಮ ಶಾಲೆಯ ಹೆಸರನ್ನು ಬೆಳಗಿಸಲು ತನುಮನದಿಂದ ಪ್ರಯತ್ನಿಸುತ್ತೇವೆ ಎಂದು ಹೇಳಿದರು. ಅದೇ ರೀತಿಯಲ್ಲಿ 8,9,10ನೇ ತರಗತಿಯ ವರ್ಗ ಪ್ರತಿನಿಧಿ ಹುದ್ದೆಗೆ ಸ್ಪರ್ಧಿಸಿದ ವಿದ್ಯಾರ್ಥಿಗಳು ನಾವು ಜಯಶಾಲಿಯಾದ ಮೇಲೆ ಶಿಕ್ಷಕರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿ ಕೊಂಡರು.

ಚುನಾವಣಾ ನಂತರದ ದಿನ ಎಜೆಂಟ ರ ಎದುರು ಸ್ಟ್ರಾಂಗ್ ರೂಂ ತೆರೆದು ಸೀಲ್ ಓಪನ್ ಮಾಡಿ ಮತ ಎಣಿಕೆ ಮುಗಿಸಿ ಫಲಿತಾಂಶ ಘೊಷಣೆ ಮಾಡಿದ ನಂತರ ಮಕ್ಕಳಿಗೆ ನೆಚ್ಚಿನ ನಾಯಕನನ್ನು ಆರಿಸಿದ ತೃಪ್ತಿ ಅಷ್ಟಿಷ್ಟಲ್ಲ.

ಈ ಎಲ್ಲ ದೃಶ್ಯಗಳು ಯಾವುದೋ ಅಣಕು ಚುನಾವಣೆಯಲ್ಲ, ಶಾಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ನಾಯಕರನ್ನು ಆರಿಸಿಕೊಳ್ಳಲು ನಡೆಸಿದ ಅಪ್ಪಟ ಜನತಾಂತ್ರಿಕತೆಯ ವ್ಯವಸ್ಥೆಯಾಗಿತ್ತು ನಂತರದ ದಿನ ಮಾಡಿದ ಫಲಿತಾಂಶ ಘೋಷಣೆ ರೋಮಾಂಚನವಾಗಿಸಿತು. ವಿಜಯಶಾಲಿಯಾದ ಮಕ್ಕಳಿಗೆ ಖಾದಿ ಟೋಪಿ ಹಾಕಿ ತಮಗೆ ಹಂಚಿಕೆಯಾದ ಹುದ್ದೆಗಳನ್ನು ಕಾಯಾ ವಾಚಾ ಮನಸ್ಸಿನಿಂದ ನಿರ್ವಹಿಸುತ್ತೇವೆ ಎಂದು ಮಕ್ಕಳಿಗೆ ಪ್ರಮಾಣ ವಚನವನ್ನು ಶಿವಾನಂದ ಅವಟಿ ಅವರು ಬೋಧಿಸಿದರು.

- Advertisement -

ಚುನಾವಣೆಯಲ್ಲಿ ಅಧ್ಯಕ್ಷಾಧಿಕಾರಿಗಳಾಗಿ ಸ್ಥಳೀಯ ಪ್ರಾಥಮಿಕ ಶಾಲೆಯ ಪದೋನ್ನತಿ ಮುಖ್ಯಗುರುಗಳಾದ ಶರಣಬಸು ಲಂಗೋಟಿ ಅವರು ಹಾಗೂ ಸಹಾಯಕ ಚುನಾವಣಾಧಿಕಾರಿಗಳಾಗಿ ಶಾಲೆಯ ಶಿಕ್ಷಕರಾದ ಎಸ್ ಎಸ್ ಅವಟಿ, ಶರಣಪ್ಪ ಕೇಸರಿ, ಶ್ರೀಮತಿ ಗೀತಾ ಅಥಣಿ, ಶ್ರೀಮತಿ ವಿ.ಕೆ ಕುಲಕರ್ಣಿ, ಶ್ರೀಮತಿ ಶೋಭಾ ಕೊಳೇಕರ್ ಮತ್ತು ಅತಿಥಿ ಶಿಕ್ಷಕರಾದ ತೋಟಪ್ಪ ಪೂಜಾರಿ ಅವರು ಕಾರ್ಯನಿರ್ವಹಿಸಿದರು.

ಭಾರತ ವಿಶ್ವದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಮ್ಮೆಗೆ ಭಾಜನವಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಪ್ರತಿಯೊಬ್ಬ ಭಾರತೀಯ ಅರಿತುಕೊಳ್ಳಬೇಕಾದದ್ದು ಅವಶ್ಯ. ಈ ನಿಟ್ಟಿನಲ್ಲಿ ಶಾಲಾ ಮಕ್ಕಳು ಕೂಡ ಸಣ್ಣ ವಯಸ್ಸಿನಲ್ಲಿಯೇ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುತ್ತ ಪ್ರಜಾಪ್ರಭುತ್ವದ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಆಶಯ ಈ ಚಟುವಟಿಕೆಗಳ ಹಿಂದಿದೆ.

ಪ್ರತಿ ವರ್ಷ ಶಾಲೆಯ ಆರಂಭದ ದಾಖಲಾತಿ ಪ್ರಕ್ರಿಯೆಗಳು ಮುಗಿದ ತಕ್ಷಣ ಶಾಲಾ ಸಂಸತ್ತಿನ ರಚನೆ ಮಾಡಲಾಗುತ್ತದೆ. ಚುನಾವಣೆ ಅಧಿಸೂಚನೆ ಹೊರಡಿಸುವುದರೊಂದಿಗೆ ಶಾಲಾ ಸಂಸತ್ತಿನ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತದೆ. ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ನಾಮಪತ್ರ ವಾಪಸ್ ಪಡೆಯುವುದು, ಪ್ರಚಾರ ಕಾರ್ಯ, ಚುನಾವಣೆ ದಿನಾಂಕ, ಮತ ಎಣಿಕೆ, ಫಲಿತಾಂಶ ಘೊಷಣೆ, ಪ್ರಮಾಣ ವಿತರಣೆ, ಪ್ರಮಾಣ ವಚನ ಸ್ವೀಕಾರ ಹೀಗೆ ಎಲ್ಲವೂ ಸಂಸತ್ತಿನ ಮಾದರಿಯಲ್ಲಿಯೇ ನಡೆಯುತ್ತದೆ. ಇದಕ್ಕೆ ಪೂರಕವಾಗಿ ಶಿಕ್ಷಕರು ಒಂದಷ್ಟು ಸಿದ್ಧತೆ ಮಾಡಿಕೊಳ್ಳುತ್ತೇವೆ. ಆದ್ದರಿಂದ ಈ ಪ್ರಕ್ರಿಯೆ ಶಾಲೆಯಲ್ಲಿ ಯಶಸ್ವಿಯಾಗುತ್ತಿದೆ. ಎಂದು ಶಿವಾನಂದ ಶಹಾಪೂರ ಮುಖ್ಯಗುರುಗಳು ಎಲ್ಲರನ್ನೂ ಉದ್ದೇಶಿಸಿ ಹೇಳಿದರು

ಶಾಲೆಯ ಅಗತ್ಯಕ್ಕೆ ತಕ್ಕಂತೆ ಅಂದರೆ ಪ್ರಧಾನಮಂತ್ರಿ, ಗ್ರಂಥಾಲಯ, ಶಿಕ್ಷಣ, ಕ್ರೀಡಾ, ಸಾಂಸ್ಕೃತಿಕ ಹಾಗೂ ಪ್ರವಾಸ, ಆಹಾರ, ಸ್ವಚ್ಛತಾ, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ/ಸಚಿವೆ ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು.

ಚುನಾವಣಾ ವೆಚ್ಚ ನಿರ್ವಹಿಸಲು ಮುಖ್ಯಗುರುಗಳಿಗೆ ಕಷ್ಟವಾದರೂ ಹುಮ್ಮಸ್ಸಿನಿಂದ ಮಾಡುತ್ತೇವೆ. ಮತದಾರರಿಗೆ ಆಸೆ, ಆಮಿಷಗಳನ್ನು ಒಡ್ಡಬಾರದು. ಬೆದರಿಕೆ ಹಾಕಬಾರದು. ಪರಸ್ಪರ ಟೀಕೆ ಮಾಡಿಕೊಳ್ಳಬಾರದು. ಚುನಾವಣೆ ಭ್ರಷ್ಟಾಚಾರ ರಹಿತವಾಗಿರಬೇಕು ಎಂಬ ಮೌಲ್ಯವನ್ನು ಸರಿಯಾಗಿ ಬಿತ್ತಲು ನಮ್ಮಂತ ಶಿಕ್ಷಕರಿಗೆ ಇದು ಸುವರ್ಣ ಅವಕಾಶ. ಹಣವಲ್ಲದಿದ್ದರೂ ಚಾಕೋಲೇಟ್, ಜ್ಯೂಸ್, ಐಸ್ಕ್ರೀಮ್ ತರಹದ ಹಂಚಿಕೆ ಇರಬಾರದು. ಸ್ಪರ್ಧೆ ಚುನಾವಣೆಗಷ್ಟೇ ಸಿಮಿತವಾಗಬೇಕು ಎಂಬ ನಿಯಮಗಳನ್ನು ಮಕ್ಕಳಿಗೆ ತಿಳಿಸಿ ಇಂಗ್ಲಿಷ್ ಶಿಕ್ಷಕರಾದ ಶಿವಾನಂದ ಅವಟಿ ಅವರು ಹೇಳಿದರು

ಚುನಾವಣಾ ಪ್ರಕ್ರಿಯೆ ಮುಗಿದ ಮೇಲೆ, ಶಾಲಾ ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಿ. ಅದರಲ್ಲಿ ಸ್ಥಳೀಯ ಮುಖಂಡರಿಂದ ಪ್ರತಿಜ್ಞಾವಿಧಿ ಬೋಧಿಸಿ ನೂತನ ಪ್ರತಿನಿಧಿಗಳ ಸಂತಸ ನೊಡುವ ತವಕ ಶಾಲಾ ಶಿಕ್ಷಕರದಾಗಿತ್ತು ಆಯ್ಕೆಯಾದವರಿಗೆ ವಿವಿಧ ಖಾತೆಗಳನ್ನು ಹಂಚಿ ಸಚಿವ ಸಂಪುಟದ ರಚನೆ ಮಾಡುತ್ತೇವೆ

ಆಯ್ಕೆಯಾದ ಶಾಲಾ ಸಂಸತ್ತಿನ ಪ್ರತಿನಿಧಿಗಳು ಶಾಲೆಯ ಶಿಸ್ತು, ಹೊಸದರ ಅಳವಡಿಕೆ ಮೊದಲಾದ ಪ್ರಮುಖ ವಿಚಾರಗಳಲ್ಲಿ ತಮ್ಮ ಅಭಿಪ್ರಾಯ ಅಥವಾ ವಿರೋಧ ಮಂಡಿಸಲು ಮುಕ್ತ ಅವಕಾಶ ನೀಡಲಾಗುತ್ತದೆ. ಅವರು ಶಾಲೆಗೆ ಸಂಬಂಧಿಸಿದಂತೆ ಸಲಹೆ-ಸೂಚನೆಗಳನ್ನುಗಳನ್ನು ನೀಡಬಹುದು. ಅಧಿಕಾರಾವಧಿಯ ಒಂದು ವರ್ಷದಲ್ಲಿ ಶಾಲೆಯ ಎಲ್ಲ ಚಟುವಟಿಕೆಯಲ್ಲಿ ಅವರು ವಿದ್ಯಾರ್ಥಿ ಸಮೂಹವನ್ನು ಪ್ರತಿನಿಧಿಸುತ್ತಾರೆ ಎಂಬುದರ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತದೆ. ಶಾಲಾ ಸಂಸತ್ತು ಪ್ರತಿ ತಿಂಗಳು ಒಂದು ನಿಗದಿಯಾದ ದಿನದಂದು, ಗ್ರಂಥಾಲಯ ಅಥವಾ ಸಭಾಂಗಣದಲಿ, ಮುಖ್ಯಗುರುಗಳು ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ, ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸುವುದು ಸೂಕ್ತ. ಸಭೆಯಲ್ಲಿ ಮಕ್ಕಳು ಮತ್ತು ಶಾಲೆಯ ಸಮಸ್ಯೆಗಳ ಬಗೆಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆಯಾ ಇಲಾಖೆ ಸಚಿವರು ತಮ್ಮ ಪ್ರಗತಿ ತಿಳಿಸುತ್ತಾರೆ. ಆಗಬೇಕಾದ ಅಭಿವೃದ್ಧಿ ಕೆಲಸಗಳ ಕುರಿತು ಚರ್ಚೆ ನಡೆಸಿದಲ್ಲಿ ಆ ಶಾಲೆಯು ಅಭಿವೃದ್ಧಿ ಚಿತ್ರಣ ಬದಲಾಗುತ್ತದೆ ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ಶಾಲೆಯಲ್ಲಿ ನಡೆವ ಕಾರ್ಯಕ್ರಮಗಳ ಜವಾಬ್ದಾರಿ, ರಾಷ್ಟ್ರೀಯ ಹಬ್ಬಗಳಲ್ಲಿ ಮುಂದಾಳತ್ವ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗಳನ್ನು ವಿದ್ಯಾರ್ಥಿಗಳೇ ನಿರ್ವಹಿಸುವಂತಾಗುತ್ತಾರೆ. ಪ್ರಾರ್ಥನಾ ಸಭೆ ನಿರ್ವಹಣೆ, ಸ್ವಚ್ಛತೆ, ಶಿಸ್ತು ಕಾಪಾಡುವಿಕೆ, ಪರಿಸರ ಸಂರಕ್ಷಣೆ, ಶಾಲಾ ಕೈತೋಟವನ್ನೂ ಸ್ವತಂತ್ರವಾಗಿ ನಿರ್ವಹಣೆ ಮಾಡುವಷ್ಟು ಪ್ರಬುದ್ಧತೆ ಅವರಲ್ಲಿ ಖಂಡಿತವಾಗಿ ಬೆಳೆಯುತ್ತದೆ. ಇಂದಿನ ಮಕ್ಕಳ ಚಿಕ್ಕ ಚಿಕ್ಕ ಯಶಸ್ಸುಗಳೇ ಮುಂದಿನ ದೊಡ್ಡ ಸಾಧನೆಗೆ ಭದ್ರ ಬುನಾದಿ ಒದಗಿಸುತ್ತವೆ ಎಂಬ ಮಾತಿಗೆ ನಮ್ಮ ಸರಕಾರಿ ಪ್ರೌಢ ಶಾಲೆ ಸಿಂದಗಿ ಶಾಲಾ ಸಂಸತ್ತು ಉತ್ತಮ ಮಾದರಿಯಾಗಿದೆ.


ನಮ್ಮ ತಂದೆ-ತಾಯಿಗಳು ಚುನಾವಣೆಯಲ್ಲಿ ಹೇಗೆ ಮತ ಚಲಾಯಿಸುತ್ತಾರೆ ಎಂಬುದನ್ನು ನಮ್ಮ ಶಾಲಾ ಚುನಾವಣೆಯಲ್ಲಿ ನಮ್ಮ ಗುರುಗಳು ನಮಗೆ ಕಲಿಸಿಕೊಟ್ಟರು.

-ಕುಮಾರ್ ಪ್ರಜ್ವಲ್ ತಂದಲ್ವಾಡಿ.


ಸಾರ್ವತ್ರಿಕ ಚುನಾವಣೆಗಳಲ್ಲಿ ಯಾವ ರೀತಿ ವೋಟ್ ಹಾಕುತ್ತಾರೆ ಎಂಬುದನ್ನು ತೋರಿಸಿಕೊಟ್ಟ ನನ್ನ ಶಿಕ್ಷಕ ವೃಂದದವರಿಗೆ ಧನ್ಯವಾದಗಳು

 -ಕುಮಾರಿ ಜ್ಯೋತಿ ಯುಕ್ತಾಪೂರ


ನಿಜವಾಗಿಯೂ ನಮ್ಮ ಶಾಲೆಯ ಗುರುಗಳು ನೈಜವಾಗಿ ನಡೆಯುವ ಚುನಾವಣೆಯ ಸಂಪೂರ್ಣ ಕಾರ್ಯವೈಖರಿಯ ಬಗ್ಗೆ ತಿಳಿಸಿಕೊಟ್ಟರು. ನಾವು ಮುಂದೆ 18 ವರ್ಷ ಪೂರ್ಣಗೊಳಿಸಿದ ನಂತರ ನಿರ್ಭಯವಾಗಿ ಮತ ಚಲಾಯಿಸುತ್ತೇವೆ

-ಕುಮಾರ್ ರಾಹುಲ್ ಓಲೆಕರ್


ಸರ್ ನೈಜ ಚುನಾವಣೆಗಳು ಇದೇ ರೀತಿ ನಡೆಯುತ್ತವೆಯಾ? ಎಂದು ಕೇಳುವ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ ಚುನಾವಣೆ ಮಾಡಿ ನೈಜತೆಯನ್ನು ತೋರಿಸಿಕೊಟ್ಟಿದ್ದೇವೆ. ಈ ಚುನಾವಣೆಯಲ್ಲಿ ಟೀಮ್ ವರ್ಕ್ ಮಾಡಿದ ಎಲ್ಲಾ ಸಿಬ್ಬಂದಿವರ್ಗದವರಿಗೆ

– ಶಿವಾನಂದ ಶಹಾಪೂರ ಮುಖ್ಯಗುರುಗಳು ಸರಕಾರಿ ಪ್ರೌಢಶಾಲೆ ಸಿಂದಗಿ ಅಭಿನಂದನೆಗಳು ತಿಳಿಸಿದರು.

- Advertisement -
- Advertisement -

Latest News

ಕಿವುಡ ಮಕ್ಕಳ ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ಸರ್ಕಾರವು ವಿಕಲಚೇತನ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ 2023ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್,...
- Advertisement -

More Articles Like This

- Advertisement -
close
error: Content is protected !!
Join WhatsApp Group