ಮೂಡಲಗಿ – ಶಿಶು ಅಭಿವೃದ್ಧಿ ಯೋಜನೆ ಅರಬಾವಿ, ವ್ಯಾಪ್ತಿಗೆ ಬರುವ ವಡೇರಹಟ್ಟಿ ಅಂಗನವಾಡಿ ಕೇಂದ್ರಕ್ಕೆ ತಾಲೂಕ ಪಂಚಾಯತ್ ಮೂಡಲಗಿ ವತಿಯಿಂದ ಅನಿರ್ಬಂಧಿತ ಅನುದಾನದ ಸ್ಮಾರ್ಟ್ ಕ್ಲಾಸ್ ಮಾಡಲು ಟಿವಿ ವಿತರಿಸಲಾಯಿತು.
ಸದರಿ ಕಾರ್ಯಕ್ರಮಕ್ಕೆ ಮೂಡಲಗಿ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀಮತಿ ಜ್ಯೋತಿ ಪಾಟೀಲ್ ರವರು ಚಾಲನೆ ನೀಡಿ ಮಾದರಿ ಅಂಗನವಾಡಿ ಕೇಂದ್ರ ಮೂಲಭೂತ ಸೌಕರ್ಯಗಳನ್ನು ಹಾಗೂ ಸ್ಮಾರ್ಟ್ ಕ್ಲಾಸ್ ಮಾಡಿರೋದನ್ನು ನೋಡಿ ಸಂತೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮೂಡಲಗಿ ತಾಲೂಕಿನ ತಹಶೀಲ್ದಾರ ಶಿವಾನಂದ ಬಬಲಿ, ಮೂಡಲಗಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಫ್. ಬಿ. ಚೆನ್ನಣ್ಣವರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಯಲ್ಲಪ್ಪ ಗದಾಡಿ, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಸಂಗಮೇಶ್ ರೂಡ್ಡನವರ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶಿವಾನಂದ ಗುಡಿಸಿ, ಮೇಲ್ವಿಚಾರಕರಾದ ಶ್ರೀಮತಿ ಚಾಂದ್ ಬೇಬಿ ಕುಡಚಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ವಡೇರಹಟ್ಟಿ ಗ್ರಾಮದ ಗಣ್ಯ ವ್ಯಕ್ತಿಗಳಾದ ಚಂದ್ರಕಾಂತ ಮೊಟೆಪ್ಪಗೊಳ, ರೆಬ್ಬೊಜಿ ಮಳಿ ವಡೆಯರ. ಪರಸಪ್ಪ ಸಾರಪುರ ಹಾಗೂ ಇತರರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.