ಸೂತ್ರದಾರ
ಕಂಡ ಕನಸುಗಳು
ಕರಗುವ ಮುನ್ನ
ಅಪ್ಪಿಕೋ ಪ್ರೀತಿಯ
ಒಲವ ದಾರಿಯ ನಡೆ
ನಿನ್ನ ಬದುಕು
ಬಾನಿನಂಗಳ ತುಂಬ
ಮಿನುಗುತಿವೆ ಚುಕ್ಕೆಗಳು
ಬೆಳದಿಂಗಳ ಬೆಳಗಿನಲಿ
ಧರೆಗಿಳಿದು ಬಂದ
ಚೆಲುವೆ ನೀನು
ಸಾವು ನೋವನು ಮೆಟ್ಟಿ
ಗಟ್ಟಿಗೊಂಡಿದೆ ಜೀವ
ನಿಜ ನೆಲೆಯ ಸ್ಪೂರ್ತಿ
ನೆಮ್ಮದಿಯ ಬಾಳು
ನಿನ್ನ ಒಲವು
ಹೋಗುವುದು ಬಲು ದೂರ
ನಡೆದು ಮರೆಯುವ ಭಾರ
ಬೆಸೆದು ಬಿಡು ಪ್ರೇಮ ದಾರ
ಸೋಲೋ ಗೆಲುವು ಕಷ್ಟ ನಷ್ಟ
ನಗುವ ಮೇಲೆ ಸೂತ್ರಧಾರ
ಕಟ್ಟಿಹೆವು ಕೋಟೆ
ಎಲ್ಲದೆಲ್ಲವ ಬಿಟ್ಟು
ನಿನ್ನೆಡೆಗೆ ನಾ ಬಂದೆ
ಸ್ನೇಹ ಪ್ರೀತಿಯ ಬಾಳು
ನಿನ್ನ ಒಲವು
ಹಲವು ಕನಸುಗಳ
ಬಯಕೆ ಭರವಸೆ ದಾರಿ
ಕೂಡಿಹೆವು ನಾವು
ತಿರುಗುವ ಭೂಮಿ ಮೇಲೆ
ಕೊಡುವುದು ಪಡೆಯುವುದು
ಇಲ್ಲ ಸರಕಿನ ಮೂಟೆ
ಮನ ಭಾವ ಭದ್ರತೆ
ಕಟ್ಟಿಹೆವು ಕೋಟೆ
ಹುಣಿಮೆಯ ಬೆಳಗಿನಲಿ
ಸವಿ ಮಾತುಗಳ ಮೆಲಕು
ನೀನೊಮ್ಮೆ ಬಂದು
ನನ್ನ ಕೈ ಕುಲುಕು
ಡಾ.ಶಶಿಕಾಂತ ಪಟ್ಟಣ ರಾಮದುರ್ಗ

