ಧಾರವಾಡ: “ಲೂಸಿ ಸಾಲ್ಡಾನಾ ಜೀವಂತ ದಂತಕಥೆ. ತಮ್ಮ ಇಡೀ ಬದುಕನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟು ೯೯ ನೆಯ ದತ್ತಿಯನ್ನು ಶಾಲೆಗೆ ಇಡುವ ಮೂಲಕ ಇಂದು ತಮ್ಮದೇ ಆದ ಕೊಡುಗೆಯನ್ನು ನೀಡಿರುವರು. ಇವರ ಬದುಕು ಶಿಕ್ಷಕ ಸಮುದಾಯಕ್ಕೆ ಮಾದರಿ. ಇವರ ವ್ಯಕ್ತಿತ್ವವನ್ನು ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಕತೆಯಲ್ಲ ಜೀವನ ಕೃತಿಯಿಂದ ಆರಂಭಗೊಂಡು ಇಂದು ಸ್ಪೂರ್ತಿ ಕಿರಣ ಕೃತಿಯವರೆಗೆ ಸಂಪಾದಿತ ಕೃತಿಗಳನ್ನು ಹೊರತರುವ ಮೂಲಕ ತಮ್ಮದೇ ಆದ ಕೊಡುಗೆಯನ್ನು ನೀಡಿರುವರು. ನಿವೃತ್ತ ಜೀವನ ಮಕ್ಕಳ ಬೋಧನೆಯಲ್ಲಿ ತೊಡಗಿಕೊಂಡ ಇವರು ನಮಗೆ ಮಾದರಿ. ”ಎಂದು ಧಾರವಾಡ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬೊಮ್ಮಕ್ಕನವರ ತಿಳಿಸಿದರು.
ಅವರು ಗುರುವಾರ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದಲ್ಲಿ ಜರುಗಿದ ಲೂಸಿ ಕೆ ಸಾಲ್ಡಾನಾ ದತ್ತಿ ಕಾರ್ಯಕ್ರಮದಲ್ಲಿ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಅವರ ಸಂಪಾಕತ್ವದಲ್ಲಿ ಹೊರತಂದ “ಸ್ಪೂರ್ತಿ ಕಿರಣ” ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ. ಕಾರ್ಯಕಾರಿ ಸಮೀತಿ ಸದಸ್ಯರಾದ ಧನವಂತ ಹಾಜವ್ವಗೋಳ, ಸಹ ಕಾರ್ಯದರ್ಶಿ ಶಂಕರ ಕುಂಬಿ, ಹುಬ್ಬಳ್ಳಿ ಬ್ಯಾಂಕ್ ಬರೋಡದ ರೀಜನಲ್ ಮ್ಯಾನೇಜರ್ ಶ್ರೀವಡ್ಡೆ ಹರಿ, ಮುಖ್ಯ ಅತಿಥಿಗಳಾಗಿ ದತ್ತಿ ದಾನಿಗಳಾದ ಶ್ರೀಮತಿ ಲೂಸಿ ಕೆ. ಸಾಲ್ಡಾನ, ಸ್ಫೂರ್ತಿ ಕಿರಣ ಕೃತಿಯ ಸಂಪಾದಕರಾದ ವಾಯ್. ಬಿ. ಕಡಕೋಳ, ಧಾರವಾಡ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಭೀಮಪ್ಪ ಕಾಸಾಯಿ, ರಾಜ್ಯ ಸಂಪನ್ಮೂಲ ಶಿಕ್ಷಕಿ ವಿ.ಎನ್. ಕೀರ್ತಿವತಿ, ಹುಬ್ಬಳ್ಳಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ಧಾರವಾಡ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಎಲ್.ಐ. ಲಕ್ಕಮ್ಮನವರ, ಧಾರವಾಡ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ತಿಗಡಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ ಶಹರದ ಉಪಾಧ್ಯಕ್ಷ ಶ್ರೀಮತಿ ವೀಣಾ ಹೊಸಮನಿ.ಬಿ.ಜಿ.ವ್ಹಿ.ಎಸ್ ಬೆಂಗಳೂರಿನ ಆರ್.ರಾಮಕೃಷ್ಣ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರಮಿಕ ರತ್ನ ಪ್ರಶಸ್ತಿಯನ್ನು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ವಿಶ್ರಾಂತ ಅಧೀಕ್ಷಕ ನಿಂಗಪ್ಪ ಕಾಶಪ್ಪನವರ, ಧಾರವಾಡ ಪತ್ರಕರ್ತರು ಹಾಗೂ ಛಾಯಾಗ್ರಾಹಕರು ಸಂಜೆ ದಿನಪತ್ರಿಕೆಯ ಮಿಲಿಂದ ಪಿಸೆ, ಧಾರವಾಡ ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಧಾರವಾಡ ನಗರದ ಘಟಕದ ನಿರ್ವಾಹಕ ನಿಂಗರಾಜ ಖನ್ನೂರ, ಶಿವಮೊಗ್ಗ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಿವನಾಯ್ಕ ಕೆ., ಹೆಬ್ಬಳ್ಳಿ ಗ್ರಾಮ ಪಂಚಾಯತಿ ಸದಸ್ಯರು, ಖ್ಯಾತ ಕಲಾವಿದರಾದ ಸಿದ್ಧಪ್ಪ ಕುಂಬಾರ, ಹೆಬ್ಬಳ್ಳಿ ಸುದ್ದಿ ಸೂರಪ್ಪ, ರೈತ ಮಲ್ಲಿಕಾರ್ಜುನ ಪ. ಹೂಗಾರ, ಮುನವಳ್ಳಿಯ ಡಿ. ದೇವರಾಜ್ ಅರಸು ಮೆಟ್ರಿಕ್ ಪೂರ್ವ ಬಾಲಕರ ನಿಲಯದ ಎಮ್.ಎ. ತಹಶೀಲ್ದಾರ್ ಹಾಗೂ ನರೇಂದ್ರ ಸಮಾಜ ಸೇವಕರಾದ ಮಲ್ಲಪ್ಪ ಹೊಸಕೇರಿ ಅವರಿಗೆ ಶ್ರಮಿಕರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸುಳ್ಳ ಶ್ರೀ ಶಿವಾನಂದ ಭಾರತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಎಸ್. ದಾನಪ್ಪಗೌಡರ, ಕಲಘಟಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶಿವಾನಂದ ಭಜಂತ್ರಿ, ಧಾರವಾಡ ಉಪನಿರ್ದೇಶಕರ ಕಚೇರಿಯ ಶಿಕ್ಷಣ ಸಂಯೋಜಕ ಝಡ್ ಎಸ್. ಖಂಡೂನಾಯ್ಕ, ಮನಗುಂಡಿಯ ಸರಕಾರಿ ಪ್ರೌಢಶಾಲೆಯ ಶಿಕ್ಷಕ, ಸಾಹಿತಿ ರಂಗನಾಥ ವಾಲ್ಮೀಕಿ, ಮುನವಳ್ಳಿ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ದೈಹಿಕ ಶಿಕ್ಷಕ ಭವಾನಿ ಕೊಂದುನಾಯ್ಕ, ಧಾರವಾಡ ನವಲೂರ ಛಾವಣಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸಂತೋಷ ಕರಮಳ್ಳವರ, ಹುಬ್ಬಳ್ಳಿ ನವನಗರ ಕರ್ನಾಟ ಪಬ್ಲಿಕ್ ಸ್ಕೂಲ್ ಸಹಶಿಕ್ಷಕ ಬಸವರಾಜ ದೇಸೂರ, ಸವದತ್ತಿ ಸಹಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ ೫ರ ಸಹ ಶಿಕ್ಷಕಿ ಶ್ರೀಮತಿ ಶೋಭಾ ವೀರಭದ್ರಯ್ಯ ಹೊಂಬಳಮಠ, ಮೊರಬ ಎಂ.ಪಿ.ಎಸ್. ದೈಹಿಕ ಶಿಕ್ಷಕ ಎಂ.ಎಸ್. ಮಾದರ, ಧಾರವಾಡ ಗುಬ್ಬಚ್ಚಿ ಗೂಡು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಲಕ್ಷ್ಮಿ ಜಾಧವ, ಕೋಳಿವಾಡ ಶ್ರೀಮತಿ ರುದ್ರಮ್ಮ ರಾ. ಗುಂಜಳ, ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಬಸವರಾಜ ಅಶೋಕ ಗುದ್ದೀನ, ವನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಎನ್.ಜಿ. ಹಿರೇಮಠ, ಬೆಂಗಳೂರು ಜಿ.ಕೆ.ಬಿ.ಎಂ.ಎಸ್. ಮಲ್ಲೇಶ್ವರಂ ಸಹಶಿಕ್ಷಕಿ ಶ್ರೀಮತಿ ಕೆ.ಆರ್. ಶಶಿಕಲಾವತಿ, ಹೆಬ್ಬಳ್ಳಿ ಶ್ರೀ ಸದ್ಗುರು ವಾಸುದೇವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಮುಂಗೋಡಿ ಹಾಗೂ ಕಿವಡೆಬೈಲ್ ಸ.ಕಿ. ಪ್ರಾಥಮಿಕ ಶಾಲೆಯ ಶ್ರೀಮತಿ ಶೈಲಾ ಮ. ಈಳಿಗೇರ ಅವರು ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ, ಮೊರಬ ಇವರಿಗೆ ರೋಹನ್ ಕೇರ್ ಫೌಂಢೇಶನ್ ಬೆಂಗಳೂರು ಇವರಿಂದ ‘ಸ್ಮಾರ್ಟ್ ಟಿ.ವಿ’ ದೇಣಿಗೆಯನ್ನು ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚಂದ್ರಕಾಂತ ಬೆಲ್ಲದ “ಶಿಕ್ಷಣ ಸಮಾಜ ಸೇವೆ ಜನರನ್ನು ಗುರುತಿಸಿ ಸಾಲ್ಡಾನಾ ಗುರುಮಾತೆಯ ಹೆಸರಿನಲ್ಲಿ ಇಂದು ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಸನ್ಮಾನಿಸುವ ಮೂಲಕ ಲೂಸಿ ಸಾಲ್ಡಾನಾ ಗುರುಮಾತೆಯ ಬದುಕಿನ ಸ್ಪೂರ್ತಿ ಕಿರಣ ಕೃತಿ ಬಿಡುಗಡೆ ಹಾಗೂ ಅವರ ಬದುಕಿನ ಚಿತ್ರಣ ದತ್ತಿ ಕಾರ್ಯಕ್ರಮದ ಮೂಲಕ ಅನಾವರಣಗೊಳಿಸುವ ಮೂಲಕ ಶಿಕ್ಷಕ ವೃತ್ತಿಯ ಪ್ರಾಮುಖ್ಯತೆಯನ್ನು ಇಂದು ಪ್ರಚುರ ಪಡಿಸಿದ್ದೀರಿ. ಇಡೀ ಸಭಾಭವನ ತುಂಬಿ ಈ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡಿರುವುದನ್ನು ಕಂಡಾಗ ಇಂತಹ ಅರ್ಥಪೂರ್ಣತೆಯನ್ನು ತುಂಬಿರುವಿರಿ ಇದೊಂದು ವಿಶಿಷ್ಟ ಮತ್ತು ಅರ್ಥಪೂರ್ಣ ಕಾರ್ಯಕ್ರಮ”ಎಂದು ತಿಳಿಸಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಟಬಾಗಿ, ತಾಲೂಕ, ಜಿಲ್ಲೆ: ಧಾರವಾಡ. ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕಮಲ್ಲಿಗವಾಡ ಹಾಗೂ ಅಕ್ಕಾ ಪೌಂಢೇಶನ್ ಟ್ರಸ್ಟ್ ಹುಬ್ಬಳ್ಳಿ ಇವರಿಗೆ ಉತ್ತಮ ಶಾಲೆ/ಸಂಸ್ಥೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಕಾರ್ಯಕ್ರಮವನ್ನು ಆರ್.ಎಂ.ಕುರ್ಲಿ ನಡೆಸಿಕೊಟ್ಟರು. ಕಾರ್ಯಕ್ರಮ ನಿರೂಪಣೆಯನ್ನು ಧಾರವಾಡದ ಮರಾಠಾ ವಿದ್ಯಾ ಪ್ರಸಾರಕ ಮಂಡಳ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಂ.ಎಸ್.ಗಾಣಿಗೇರ ನಿರೂಪಿಸಿದರು.ವೈ.ಬಿ.ಕಡಕೋಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಲ್.ಐ.ಲಕ್ಕಮ್ಮನವರ ಸ್ವಾಗತಿಸಿದರು.ಚಂದ್ರು ತಿಗಡಿ ವಂದಿಸಿದರು.