spot_img
spot_img

ನಾಗನೂರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

Must Read

- Advertisement -

ಮೂಡಲಗಿ: ತಾಲೂಕಿನ ನಾಗನೂರ ಪಟ್ಟಣದ ನಾಗನೂರ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ಜೂ. 25ರಂದು ನಡೆಯಬೇಕಿದ್ದ ಚುನಾವಣೆಯಲ್ಲಿ ನಾಮಪತ್ರ ವಾಪಸ ಪಡೆಯುವ ದಿನವಾದ ಸೋಮವಾರದಂದು ಸಂಘದ 12 ಜನ ನಿರ್ದೇಶಕರು ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಪಟ್ಟಣದ ಮುಖಂಡರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಚಿದಾನಂದ ಅಲ್ಲಪ್ಪ ಸಕ್ರೆಪ್ಪಗೋಳ, ಅಶೋಕ ಪರಸಪ್ಪ ಗದಾಡಿ, ಮಾದೇವ ರಾಮಪ್ಪ ಬೆಳಕೂಡ, ಶಿವಾನಂದ ಕಲ್ಲಪ್ಪ ದಡ್ಡಿ, ರಾಮಣ್ಣಾ ಅಲಗೋಡ ಪದ್ದಿ, ಮಹಾದೇವಿ ಶ್ರೀಮಂತ ದಡ್ಡಿ, ಸುನೀಲ ಕಲ್ಲಪ್ಪ ಗಡದಿ, ಹಿಂದೂಳಿದ ಅ ವರ್ಗದಿಂದ ವಿಠ್ಠಲ ಲಕ್ಷ್ಮಣ ಗುಡೇನ್ನವರ, ಹಿಂದೂಳಿದ ಬ ವರ್ಗದಿಂದ ಅರ್ಜುನ ರಾಮಪ್ಪ ನಿರ್ಲಿ, ಮಹಿಳಾ ಕಾಯ್ದಿಟ್ಟ ಕ್ಷೇತ್ರದಿಂದ ಲಕ್ಷ್ಮೀಬಾಯಿ ಸಿದ್ದಪ್ಪ ಮನ್ನಿಕೇರಿ, ಹಣಮವ್ವಾ ಸದಾಶಿವ ಮದಭಾಂವಿ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ವಸಂತ ಕಲ್ಲೋಳೆಪ್ಪ ಕಾಥೆನ್ನವರ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಚುನಾವಣಾಧಿಕಾರಿಯಾಗಿ ಬೈಲಹೊಂಗಲ ಸಹಕಾರ ಇಲಾಖೆಯ ಎಸ್.ಬಿ.ಬಿರಾದಾರ ಕಾರ್ಯ ನಿರ್ವಹಿಸಿದರು.

- Advertisement -

ಹಾಲು ಉತ್ಪಾದಕರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ನೂತನ ನಿರ್ದೇಶಕರು ಪಟ್ಟಣದ ಮುಖಂಡರು ಸಿಹಿ ತಿನ್ನಿಸಿ, ಹೂ-ಮಾಲೆ ಹಾಕಿ ಗೌರವಿಸಿ ಅಭಿನಂದಿಸಿದರು.

ಈ ಸಂಧರ್ಭದಲ್ಲಿ ಪ್ರಭಾ ಶುಗರ‍್ಸ ನಿರ್ದೇಶಕ ಕೆಂಚಗೌಡ ಪಾಟೀಲ, ಭಗಿರಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರು ಬೆಳಗಲಿ, ಗ್ರಾ.ಪಂ ಮಾಜಿ ಅಧ್ಯಕ್ಷ ಮುತ್ತೆಪ್ಪ ಖಾನಪ್ಪಗೋಳ, ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಕರಿಹೊಳಿ, ಅಮೋಘಸಿದ್ಧೇಶ್ವರ ಸೊಸೈಟಿಯ ಅಧ್ಯಕ್ಷ ಸಿದ್ದಪ್ಪಾ ಯಾದಗೂಡ, ಡಿಎಸ್‌ಎಸ್‌ಎಸ್ ಸಂಚಾಲಕ ಸತ್ತೆಪ್ಪ ಕರವಾಡಿ, ಭಗೀರಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪರಸಪ್ಪಾ ಬಬಲಿ, ಪ.ಪಂ ಮಾಜಿ  ಸದಸ್ಯರಾದ ಭೀಮನಗೌಡ ಹೊಸಮನಿ, ಮುತ್ತೆಪ್ಪಾ ಮುತ್ತೆನ್ನವರ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕರ ಹೊಸಮನಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸುಭಾಸ ಪಡದಲ್ಲಿ, ಮುಖಂಡರಾದ  ಶಿವಪ್ಪ ಕರಬನ್ನವರ, ಅಲ್ಲಪ್ಪ ಗುಡೇನ್ನವರ, ಸಿದ್ದಪ್ಪ ಜಾವಲಿ ಹಾಗೂ ಸಂಘದ  ಕಾರ್ಯದರ್ಶಿ ಸಂಜು ಕರಬರನ್ನವರ ಮತ್ತಿತರು ಇದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಉರಿಲಿಂಗ ಪೆದ್ದಿ ಇವನ ಹೆಸರಿನಲ್ಲಿ ೩೬೬ ವಚನಗಳು‌ ದೊರೆತಿವೆ. ಇವನ ತಂದೆ- ತಾಯಿ ಇವನಿಗೆ ಇಟ್ಟ ಹೆಸರು ಪೆದ್ದಣ್ಣ. ಇವನು ಗೋದಾವರಿ ತೀರದ ಹಳ್ಳಿಯೊಂದರಲ್ಲಿ ವಾಸವಾಗಿದ್ದನು.ಉರಿಲಿಂಗಪೆದ್ದಿ ಮೂಲತಃ...
- Advertisement -

More Articles Like This

- Advertisement -
close
error: Content is protected !!
Join WhatsApp Group