Bidar: ಪೊಲೀಸರ ಮಿಂಚಿನ ಕಾರ್ಯಾಚರಣೆ; 7 ಲಕ್ಷ ಮೌಲ್ಯದ ವಸ್ತು ಜಪ್ತಿ

Must Read

ಬೀದರ: ಬೀದರ ಪೊಲೀಸರು ಭರ್ಜರಿ ಕಾರ್ಯಾಚರಣೆ  ನಡೆಸಿ ನಾಲ್ವರು ದರೋಡೆಕೋರರ ಬಂಧನ ಮಾಡಿದ್ದು ಅವರಿಂದ ಅಪಾರ ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಂಡು ಅವರನ್ನು ಜೈಲು ಕಂಬಿಗಳ ಹಿಂದೆ ಕಳಿಸಿದ್ದಾರೆ.

10 ಬೈಕ್, 1 ಕಾರು ಹಾಗೂ ಬೆಳ್ಳಿಯ  ಆಭರಣ ಸೇರಿದಂತೆ ಹಲವಾರು ವಸ್ತುಗಳನ್ನು ಬಂಧಿತ ರಿಂದ ವಶಪಡಿಸಿಕೊಳ್ಳಲಾಗಿದೆ. ಬಂಧಿತರೆಲ್ಲ ವಿವಿಧ ಪ್ರಕರಣದಲ್ಲಿ ಬೇಕಾಗಿದ್ದವರು ಎಂದು ಗೊತ್ತಾಗಿದ್ದು ನಗರದಲ್ಲಿ ಹೆಚ್ಚುತ್ತಿರುವ ಕಳ್ಳತನವನ್ಬು ಹತ್ತಿಕ್ಕಲು ಪೊಲೀಸರು ಹಲವು ದಿನಗಳಿಂದ ಬಂಧಿತ ಆರೋಪಿಗಳ ಮೇಲೆ ಕಣ್ಣಿಟ್ಟಿದ್ದರು ಎಂದು ತಿಳಿದು ಬಂದಿದೆ.

ಓರ್ವ ಆರೋಪಿ ಯಿಂದ ಒಂದು ಕಾರು ಹಾಗೂ ನಾಲ್ಕು ಬೈಕ್ ಜಪ್ತಿ ಮಾಡಲಾಗಿದೆ. ಓರ್ವ ಮನೆಗಳ್ಳನಿಂದ ೧೮ ತೊಲೆ ಬೆಳ್ಳಿ ಆಭರಣಗಳು ಹಾಗೂ ಎರಡು ಟೈಲರಿಂಗ ಮಿಷನ್ ಜಪ್ತಿ ಮಾಡಲಾಗಿದೆ.

ಎಸ್‌ ಪಿ ಚನ್ನಬಸವ ಲಂಗೋಟಿ ಮಾರ್ಗದರ್ಶನದಲ್ಲಿ ಡಿ ವೈ ಎಸ್ ಪಿ ಸತೀಶ್ ನೇತ್ರತ್ವದಲ್ಲಿ ನ್ಯೂ ಟೌನ್ ಪೊಲೀಸ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಕಾರ್ಯಾಚರಣೆಯಲ್ಲಿ ಭಾಗಿಯಾದವರಿಗೆ ಗೌರವ ಧನ ನೀಡಿ ಅಭಿನಂದಿಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group