ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಕನ್ನಡ ಭವನ ಪ್ರಕಾಶನ ಮತ್ತು ಶ್ರೀಮತಿ ದಿ. ಗಾಯತ್ರಿ ನಾಗೇಶ್ ಕುಟುಂಬ ಪ್ರಾಯೋಜಕತ್ವ ಹಾಗೂ ರಾಮಕ್ಷತ್ರಿಯ ಮಹಿಳಾ ಯಕ್ಷವೃಂದ ಜೆಪ್ಪು ಮಂಗಳೂರು ಸ0ಯುಕ್ತ ಆಶ್ರಯದಲ್ಲಿ ನಡೆದ ನುಡಿ ನಮನ, ಕೃತಿ ಬಿಡುಗಡೆ ಸಂಸ್ಮರಣೆ
ಪರರ ಸೇವೆ ದೇವರ ಸೇವೆ ಎಂಬ ಧ್ಯೇಯವನ್ನು ತನ್ನದಾಗಿಸಿಕೊಂಡು ಬಾಳನ್ನು ಸಾಗಿಸಿದ್ದ ಶ್ರೀಮತಿ ದಿ. ಗಾಯತ್ರಿ ನಾಗೇಶ ರಾಮಕ್ಷತ್ರಿಯ ಸಮಾಜದ ಅಭಿಮಾನದ ಪುತ್ರಿ ಬಹುಮುಖ ಪ್ರತಿಭೆಯ ಗಾಯತ್ರಿ ಇವರ ವೈಕುಂಠ ಸಮಾರಾಧನೆ ಕ್ರಿಯೆಯ ದಿನದಂದು ಪೂರ್ವಾಹ್ನ 11.00 ರ ವೇಳೆಗೆ ಮಂಗಳೂರು ಶರವು ದೇವಸ್ಥಾನದ ಸಮೀಪವಿರುವ ಬಾಳಂಭಟ್ ರಾಧಾಕೃಷ್ಣ ಸಭಾಂಗಣದಲ್ಲಿ ಮರೆಯಲಾಗದವರು ವ್ಯಕ್ತಿ ಚಿತ್ರಣ ಕೃತಿ ಕನ್ನಡ ಭವನ ಪ್ರಕಾಶನ ಕಾಸರಗೋಡು, ಇದರ ಸಂಸ್ಥಾಪಕ ಅಧ್ಯಕ್ಷರು ಸಂಚಾಲಕರು ಆಗಿರುವಂತಹ ಡಾ. ವಾಮನ್ ರಾವ್ ಬೇಕಲ್ ಇವರ ನೇತೃತ್ವದಲ್ಲಿ ಕೃತಿ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಯಿತು.
ಈ ಕೃತಿಯನ್ನು ಬರೆದವರು ಕಾಸರಗೋಡು ಕನ್ನಡ ಭವನ ಪ್ರಕಾಶನದ ಸಂಸ್ಥಾಪಕಿ ಶ್ರೀಮತಿ ಸಂಧ್ಯಾ ರಾಣಿ ಟೀಚರ್ , ಕೃತಿಯನ್ನು ಡಾ. ಶಿವಾನಂದ ಬೇಕಲ್ ಲೋಕಾರ್ಪಣೆಗೊಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ರಾಮಕ್ಷತ್ರಿಯ ಸೇವಾ ಸಂಘ ಮಂಗಳೂರು ಜಪ್ಪು ಅಧ್ಯಕ್ಷರಾದ ಮುರಳಿಧರ ಸಿ ಎಚ್ ವಹಿಸಿದ್ದರು. ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ರೇಖಾ ಸುದೇಶ್ ರಾವ್ ಅತಿಥಿ ಅಭ್ಯಾಗತರನ್ನು ಸ್ವಾಗತಗೈದರು. ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ಡಾಕ್ಟರ್ ರವೀಂದ್ರ ಜೆಪ್ಪು, ಯಕ್ಷಗಾನ, ತಾಳಮದ್ದಳೆ ಗುರುಗಳಾದ ರವಿ ಅಲೆವೂರಾಯ , ಹಿರಿಯ ಸಾಹಿತಿಗಳಾದ ಡಾ. ಶಿವಾನಂದ ಬೇಕಲ್, ವೆಂಕಟೇಶ್ ಚೆಪ್ಪು, ಯೋಗೇಶ್ ಕುಮಾರ್ ಜಪ್ಪು, ಮಹಿಳಾ ವೃಂದದ ಕಾರ್ಯದರ್ಶಿ ಪೂರ್ಣಿಮಾ ಶಾಮ ಸುಂದರ, ಕೃತಿಕಾರ್ತಿ ಸಂಧ್ಯಾರಾಣಿ ಟೀಚರ್ ಮರೆಯಲಾಗದವರು ಶ್ರೀಮತಿ ಗಾಯತ್ರಿ ನಾಗೇಶ ಇವರ ವ್ಯಕ್ತಿ ಪರಿಚಯ , ವ್ಯಕ್ತಿ ಚಿತ್ರಣವನ್ನು ಪ್ರಸ್ತುತ ಪಡಿಸಿದರು.
ಶಿವಾನಂದ ಬೇಕಲ್ ಕೃತಿಯನ್ನು ಬಿಡುಗಡೆ ಮಾಡಿದರು. ವೆಂಕಟೇಶ್ ಜೆಪ್ಪು , ಬದುಕು ಹಾಗೂ ಸಾವಿನ ನಡುವಿನ ಬಾಳ್ವೆಯನ್ನು ಯಾವ ರೀತಿಯಾಗಿ ಕಳೆದಿದ್ದಾರೆ ಎಂಬುವುದರ ಚಿತ್ರಣವನ್ನು ಸವಿವರವಾಗಿ ತಿಳಿಸಿ, ಭಾವಪೂರ್ಣ ನುಡಿ ನಮನ ಸಲ್ಲಿಸಿದರು.
ಯೋಗೀಶ ಕುಮಾರ ಜೆಪ್ಪು ದೈವತ್ವವಿರುವ ವ್ಯಕ್ತಿಗಳು ಭಗವಂತನಿಗೆ ಅತಿ ಪ್ರಿಯ ಎಂಬ ಮನದಾಳದ ಮಾತುಗಳೊಂದಿಗೆ ಸಂತಾಪ ವ್ಯಕ್ತಪಡಿಸಿದರು. ಡಾ. ರವೀಂದ್ರ ಜೆಪ್ಪು ಶ್ರೀಮತಿ ಗಾಯತ್ರಿ ನಾಗೇಶ್ ಅವರ ವ್ಯಕ್ತಿ ಪರಿಚಯದೊಂದಿಗೆ ಅವರು ಮಾಡಿರುವಂತಹ ಸಾಧನೆಗಳನ್ನು ಇಂದು ಕನ್ನಡ ಭವನ ಕಾಸರಗೋಡು ಸಂಸ್ಥಾಪಕರಾಗಿರುವ ಡಾಕ್ಟರ್ ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾ ರಾಣಿ ಟೀಚರ್ ಈ ಎಲ್ಲಾ ಕ್ರೆಡಿಟ್ ಅವರಿಗೆ ಸಲ್ಲಬೇಕು. ಸಾಧನೆಗಳ ನೆನಪುಗಳನ್ನು ಅಕ್ಷರ ರೂಪದಲ್ಲಿ ಇವರು ಸಲ್ಲಿಸಿದ್ದಾರೆ. ಎಂದು ಹೃದಯಾಂತರಾಳದ ಭಾವದೊಂದಿಗೆ ನುಡಿ ನಮನ ಸಲ್ಲಿಸಿದರು.
ಜೆಪ್ಪು ರಾಮ ಕ್ಷತ್ರಿಯ ಸಂಘದ ಅಧ್ಯಕ್ಷರಾಗಿರುವ ಮುರಳಿಧರ್ ಸಿ ಎಚ್ ಸಂಘ-ಸಂಸ್ಥೆಯಲ್ಲಿನ ಶ್ರೀಮತಿ ಗಾಯತ್ರಿ ನಾಗೇಶ್ ರವರು ಒಡನಾಟದ ಸನ್ನಿವೇಶದೊಂದಿಗೆ ಭಾವನಾತ್ಮಕ ನುಡಿ ನಮನ ಸಲ್ಲಿಸಿದರು. ಒಂದು ನಿಮಿಷಗಳ ಕಾಲಾವಧಿ ಶ್ರೀಮತಿ ಗಾಯತ್ರಿ ನಾಗೇಶ ಇವರ ಆತ್ಮಕ್ಕೆ ಚಿರಶಾಂತಿ ಕೋರಲು, ಸಭಿಕರೆಲ್ಲರೂ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
‘. ಬಾಯಿಯಲ್ಲಿ ಹೇಳಿದ್ದು ಗಾಳಿಯಲ್ಲಿ ಹೋಗುತ್ತದೆ’ ಎಂಬ ನುಡಿಯಂತೆ ಇಂದು ನಮ್ಮ ಸಮಾಜದಲ್ಲಿ ಅಕ್ಷರ ರೂಪದಲ್ಲಿ ಗುರುತಿಸುವಂತಹ ಒಂದು ಸತ್ಕಾರ್ಯದಲ್ಲಿ ಕನ್ನಡ ಭವನದ ರೂವಾರಿ ವಾಮನ್ ರಾವ್ ಬೇಕಲ್ ದಂಪತಿಗಳು ಇಂದು ಶ್ರೀಮತಿ ಗಾಯತ್ರಿ ನಾಗೇಶ್ ಇವರ ಸಾಧನೆಯನ್ನು ಪುಸ್ತಕ ರೂಪದಲ್ಲಿ ವ್ಯಕ್ತಿ ಪರಿಚಯ ಕೃತಿ ಬಿಡುಗಡೆ ಮಾಡುತ್ತಿರುವುದು ಶ್ಲಾಘನೀಯವೆಂದು ಶ್ರೀಮತಿ ರೇಖಾ ಸುದೇಶ್ ರಾವ್ ಹೇಳಿದರು. ನಿರಂಜನ್ ಕೊರಕೋಡು ಹಾಗೂ ನರಸಿಂಹ ಮಂಗಳೂರು ಉಪಸ್ಥಿತರಿದ್ದರು.
ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರಾದ ಉಮೇಶ ರಾವ್ ಕುಂಬಳೆ ಧನ್ಯವಾದಗೈದರು. ಶ್ರೀಮತಿ ರೇಖಾ ಸುದೇಶ ರಾವ್ ಸಂತಾಪ ಸೂಚಕ ಸಭೆಯ ನಿರೂಪಣೆಗೈದರು. ಮರೆಯಲಾಗದವರು ಕೃತಿಯನ್ನು ಸಭೆಗೆ, ಸತ್ಕಾರ್ಯಕ್ಕೆ ಆಗಮಿಸಿದ ಸರ್ವರಿಗೂ ವಿತರಿಸಲಾಯಿತು. ನಂತರ ಯಕ್ಷ ಪ್ರವಚನ ನಡೆಯಿತು. ಯೋಗೀಶ್ ಕುಮಾರ್ ಜಪ್ಪು, ಯಕ್ಷಗಾನ ಗುರುಗಳಾದ ರವಿ ಅಲೆವೂರಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

