- Advertisement -
ಬೀದರ: ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವರ ಮೇಲೆ ಶಾಸಕ ಪ್ರಭು ಚವ್ಹಾಣ ಜಾತಿ ನಿಂದನೆಯ ಗಂಭೀರ ಆರೋಪ ಹೊರಿಸಿದ್ದಾರೆ.
ಮಾಧ್ಯಮದವರೊಡನೆ ಮಾತನಾಡಿದ ಅವರು, ಕೇಂದ್ರ ಸಚಿವರು ನನಗೆ ಚೋರ್ ಲಮಾಣಿ ಎಂದು ಕರೆಯುತ್ತಾರೆ. ನಾವು ಸಣ್ಣ ಜಾತಿ ಇರುವ ಹಿನ್ನೆಲೆಯಲ್ಲಿ ನನಗೆ ಅವಮಾನ ಮಾಡುತ್ತಾರೆ ಎಂದರು.
ಅವರು ಇಂಜಿನಿಯರ್ ಓದಿದ್ದಾರೆ, ನಾನು ಬಿಎ ಪದವಿ ಓದಿದ್ದು. ಭಗವಂತ ಖೂಬಾ ದೊಡ್ಡ ಜಾತಿಗೆ ಸೇರಿದವರು ಎಂದು ಚವ್ಹಾಣ ವ್ಯಂಗ್ಯವಾಡಿದರು.
- Advertisement -
ದಿನೇ ದಿನೇ ಬಿಜೆಪಿಯ ಈ ಇಬ್ಬರು ನಾಯಕರ ಕೆಸರೆರಚಾಟ ಹೆಚ್ಚಾಗುತ್ತಲಿದ್ದು ಲೋಕಸಭಾ ಚುನಾವಣೆಯ ಪೂರ್ವದಲ್ಲಿಯೇ ಇದು ಪಕ್ಷಕ್ಕೆ ಯಾವ ದಿಕ್ಸೂಚಿ ಒದಗಿಸಲಿದೆ ಎಂಬುದು ಜನರಲ್ಲಿ ಒಗಟಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು.
ವರದಿ: ನಂದಕುಮಾರ ಕರಂಜೆ, ಬೀದರ