ಅವೈಜ್ಞಾನಿಕ ಮಾಳಿ ಸಮಾಜದ ಜನಗಣತಿ ಖಂಡನೀಯ – ಡಾ. ಸಿ ಬಿ ಕುಲಗೋಡ

0
448

ಹಳ್ಳೂರ – ರಾಜ್ಯ ಸರಕಾರವು ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ಇತ್ತೀಚೆಗೆ ನಡೆಸಿದ ಜಾತಿಗಣತಿಯು ಅವೈಜ್ಞಾನಿಕವಾಗಿದೆ, ಇದರಲ್ಲಿ ಮಾಳಿ, ಮಾಲಗಾರ ಸಮಾಜದ ಅಂಕಿ ಅಂಶವು ಕೇವಲ 83693 ಸಾವಿರ ಇದೆ ಎಂದು ಉಲ್ಲೇಖಿಸಲಾಗಿದೆ ಇದು ಖಂಡನೀಯವಾದದ್ದು ಎಂದು ಮಾಳಿ ಮಾಲಗಾರ ಸಮಾಜದ ನಿಯೋಗದ ಅಧ್ಯಕ್ಷ ಡಾ. ಸಿ ಬಿ ಕುಲಿಗೋಡ ಆಕ್ರೋಶ ವ್ಯಕ್ತಪಡಿಸಿದರು.

ಅವರು ಪಟ್ಟಣದ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿನ ಶ್ರೀ ಮಾಧವಾನಂದ ಸಭಾಭವನದಲ್ಲಿ ಮಾಳಿ ಮಾಲಗಾರ ಸಮಾಜದ ವತಿಯಿಂದ ಏ.16 ಬುಧವಾರದಂದು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ರಾಜ್ಯದಲ್ಲಿ ಮಾಳಿ ಮಾಲಗಾರ ಸಮಾಜದವರು 46 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದಾರೆ, ಸರ್ಕಾರದ ಜಾತಿಗಣತಿಯನ್ನು ಮರು ಪರಿಶೀಲನೆ ಮಾಡಬೇಕು. ಇಲ್ಲವಾದಲ್ಲಿ ನಾವೇ ಸಮಾಜದ ಗಣತಿ ಮಾಡಿ ವರದಿ ಸಲ್ಲಿಸುತ್ತೇವೆ. ಒಂದು ವೇಳೆ ಇದೆ ಗಣತಿ ಮುಂದುವರೆದರೆ ಸಮಾಜದಿಂದ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಗುಡುಗಿದರು.

ಮಾಳಿ ಮಾಲಗಾರ ಸಮಾಜದ ರಾಜ್ಯಾಧ್ಯಕ್ಷ ಕಾಡು ಮಾಳಿ ಮಾತನಾಡಿ ನಮ್ಮ ಸಮಾಜವು ಉತ್ತರ ಕರ್ನಾಟಕ ದಲ್ಲಿ ಜಾಸ್ತಿ ಇದ್ದು ಸುಮಾರು 40 ರಿಂದ 40 ಲಕ್ಷ ಜನಸಂಖ್ಯೆ ಹೊಂದಿದ್ದರು ಕೂಡಾ ಕೇವಲ 83693 ಜನಸಂಖ್ಯೆ ವರದಿ ನೀಡಿದ್ದು ಇದು ಸಮಾಜಕ್ಕೆ ಮಾಡಿದ ಅನ್ಯಾಯ ಕೂಡಲೇ ಜಾತಿ ಗಣತಿ ಮರು ಪರಿಶೀಲನೆ ಮಾಡಿ ಸೂಕ್ತ ವರದಿ ನೀಡಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಬಳಿಕ ಡಾ.ರವಿ ಕುರುಬೇಟ, ಕಾಡು ಮಾಳಿ, ಗೀರಿಶ ಬುಟಾಳಿ ಮಹಾಂತೇಶ ಮಾಳಿ, ಕಾಶಿನಾಥ ಮಾಳಿ, ಮುರಿಗೆಪ್ಪ ಮಾಲಗಾರ ಸಭೆಯನ್ನುದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾಳಿ,ಮಾಲಗಾರ ಸಮಾಜದ ಮುಖಂಡರಾದ ಸದಾಶಿವ ಹೊಸಮನಿ, ಗೋಪಾಲ ಯಡವಣ್ಣವರ, ಮಹಾದೇವ ತೇರದಾಳ, ಸಂಜು ಅಥಣಿ, ಉಧ್ಯಮಿ ಶಿವಪ್ಪ ಹಳ್ಳೂರ, ಪರಪ್ಪ ಕುಲಿಗೋಡ, ಶಿವಪುತ್ರ ಯಡವಣ್ಣವರ, ಸಂಜಯ ಕುಲಿಗೋಡ, ಮಹಾದೇವ ಹೊಸಟ್ಟಿ, ಬಸವರಾಜ ಬಂಬಲವಾಡ, ಮಲ್ಲಪ್ಪ ಗೋಲಬಾವಿ, ಸುಭಾಷ ಅಳಗೋಡಿ, ಮಹಾದೇವ ಬಂಬಲವಾಡ, ಬಾಳು ಮಾಳಿ, ಮಲ್ಲೇಶ ಲಿಂಬಿಗಿಡದ, ಸುರೇಶ ಕಾಳಿಂಗೆ, ಶಿವಪ್ಪ ತಾನಪ್ಪಗೋಳ, ಸಿದ್ದಪ್ಪ ಮೆಂಡಿಗೇರಿ ಸೇರಿದಂತೆ ಬೆಳಗಾವಿ, ಬಾಗಲಕೋಟ ಜಿಲ್ಲೆಯ ಸಮಾಜದ ಪ್ರಮುಖರಿದ್ದರು.

LEAVE A REPLY

Please enter your comment!
Please enter your name here