ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರದ ಪತ್ರಿಬಸವೇಶ್ವರ ಶರಣ ಸಂಸ್ಕೃತಿ ಉತ್ಸವದ ದ್ವಾದಶೋತ್ಸವ ವಚನ ಪಿತಾಮಹ ಹಳಕಟ್ಟಿಯವರ ವಚನ ಸಾಹಿತ್ಯ ಸಂರಕ್ಷಣೆಯ ಶತಮಾನೋತ್ಸವ ವರ್ಷಾಚರಣೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲೆ ಬೆಳಗಾವಿ ಮಹಿಳಾ ಘಟಕ ಇವರ ಆಶ್ರಯದಲ್ಲಿ 71ನೇಯ ವಚನೋತ್ಸವ ಕಾರ್ಯಕ್ರಮ ಬಸವನಗರ 7ನೇಯ ಅಡ್ಡರಸ್ತೆ ಶ್ರೀನಗರದ ಶರಣ ದಂಪತಿಗಳಾದ ಪ್ರೀತಿ ಪ್ರವೀಣ ತುಳಜನ್ನವರ ಮನೆಯಲ್ಲಿ ನೆರವೇರಿತು.
ಸಾನ್ನಿಧ್ಯವನ್ನು ಬೆಳಗಾವಿ ಕಾರಂಜಿ ಮಠದ ಪರಮಪೂಜ್ಯ ಗುರುಸಿದ್ಧ ಮಹಾಸ್ವಾಮಿಜಿಯವರು ವಹಿಸಿ ಆಶೀರ್ವಚನ ನೀಡಿದರು.
ಶರಣ ದಂಪತಿಗಳಾದ ಮಹಾದೇವಿ ರಾಮಲಿಂಗಪ್ಪ ತುಳಜನ್ನವರ ಧ್ವಜಾರೋಹಣ ನೆರವೇರಿಸಿದರು. ಅಲ್ಲಮಪ್ರಭುಗಳ ‘ ಕಲ್ಯಾಣವೆಂಬ ಪ್ರಣತೆಯಲ್ಲಿ…….. ‘ ಎಂಬ ವಚನ ಚಿಂತನೆ ಪ್ರೇಮಕ್ಕ ಅಂಗಡಿ ನಡೆಸಿ ಕೊಟ್ಟರು ಪ್ರಣತಿ ತುಳಜನ್ನವರ ಏಳು ವರ್ಷದ ಬಾಲಕಿ ನೂರು ವಚನಗಳನ್ನು ಕಂಠಪಾಠದಲ್ಲಿ ಹೇಳುವುದರ ಮುಖಾಂತರ ಎಲ್ಲರ ಗಮನ ಸೆಳೆದರು.
ಶರಣ ಶಿವಾನಂದ ತುಳಜನವರ ಡಾ.ನಿಂಗನಗೌಡ ಪಾಟೀಲ ಶರಣರಾದ ಗಣಾಚಾರಿ ರಾಯರ್ ಹಾಗೂ ಪತ್ರಿ ಬಸವ ನಗರದ ಅಜಗನ್ನ ಬಳಗದ ಸದಸ್ಯರು ಹಾಜರಿದ್ದರು ಮುಕ್ತಾಯಕ್ಕ ಬಳಗದವರು ಪೂಜೆ ಪ್ರಾರ್ಥನೆ ನೆರವೇರಿಸಿ ಕೊಟ್ಟರು ಶ್ರೀನಗರ ಬಸವನಗರದ ಹಾಗೂ ನಗರದ ನೂರಾರು ಶರಣ ಶರಣೆಯರು ಉಪಸ್ಥಿತರಿದ್ದರು