spot_img
spot_img

ಬಹುಮುಖ ಪ್ರತಿಭೆಗಳು ಪ್ರಜ್ವಲಿಸಬೇಕು ; ಶ್ರೀಮತಿ ಮೆಟಗುಡ್ಡ ಅಭಿಪ್ರಾಯ

Must Read

- Advertisement -

ಸಾಹಿತ್ಯ, ಸಂಗೀತ, ಚಿತ್ರಕಲೆ, ನಟನೆ ಸಮಾಜಸೇವೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರೇಮಾ ನಡುವಿನಮನಿಯವರಂತಹ ಪ್ರತಿಭೆಗಳು ಸಾಹಿತ್ಯಲೋಕದಲ್ಲಿ ಸದಾಕಾಲ ಬೆಳಗುತ್ತಿರಬೇಕು ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಅವರು ಅಭಿಪ್ರಾಯಪಟ್ಟರು.

ರವಿವಾರ ದಿನಾಂಕ ೩೧-೩-೨0೨೪ ರಂದು ಧಾರವಾಡದಲ್ಲಿ ಮಹಿಳಾ ಸಾಹಿತಿ ಪ್ರೇಮಾ ನಡುವಿನಮನಿ ಅವರು ಬರೆದ “ಮೌನವೂ ಪಿಸುಗುಟ್ಟಿದಾಗ”ಕಾವ್ಯ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಅವರು ವಿದ್ಯಾಕಾಶಿ ಧಾರವಾಡದಲ್ಲಿ  ಸಾಹಿತಿಯಾಗಿ ಬೆಳೆಯುವುದು ಅಷ್ಟು ಸುಲಭದ ಮಾತಲ್ಲ, ಸಾಹಿತಿಗಳೇ ತುಂಬಿ ತುಳುಕುತ್ತಿರುವ ಈ ನೆಲದಲ್ಲಿ ಪ್ರೇಮಾ ನಡುವಿನಮನಿ ಒಬ್ಬ ಮಹಿಳಾ ಸಾಹಿತಿಯಾಗಿ ತಮ್ಮ ಅನೇಕ ಉತ್ತಮ ಕೃತಿಗಳನ್ನು ಬಿಡುಗಡೆ ಮಾಡುತ್ತಿರುವುದು ಬಹಳ ಹೆಮ್ಮೆಯ ಸಂಗತಿಯಾಗಿದೆ. ರಾಮಾಯಣ ಮತ್ತು ಮಹಾಭಾರತದಂತಹ ಶ್ರೇಷ್ಠ ಕೃತಿಗಳು ಇಂದು ನಾವು ಬರೆಯುವ ಕವನಗಳಿಗೆ ಮೂಲ ಪ್ರೇರಣೆ ಎನ್ನುವುದನ್ನು ಮರೆಯಬಾರದು. ಗದ್ಯ ಪದ್ಯಗಳ ನಡುವಿನ ವ್ಯತ್ಯಾಸ ಅರಿತು ಬರೆದರೆ ಕವಿತ್ವ ತಾನಾಗಿಯೇ ಮೂಡಿಬರುವುದು ಎಂದರು.

ಹಿರಿಯರು ಸಮಾಜಸೇವಕರು, ಮಾಜಿ ಶಾಸಕರು ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಆಗಿರುವ  ಚಂದ್ರಕಾಂತ ಬೆಲ್ಲದ ಅವರು ಮಾತನಾಡಿ, ಎಲ್ಲ ಸಾಹಿತಿಗಳು ಹಾಗೂ ಮಹಿಳೆಯರು ಸೇರಿ ಪ್ರೋತ್ಸಾಹ ನೀಡಿ ಇಂತಹ ಸಾಹಿತ್ಯಕ ಕಾರ್ಯಕ್ರಮವನ್ನು ಮಾಡುತ್ತಿರುವುದು ತುಂಬಾ ಸಂತೋಷ ಉಂಟುಮಾಡಿದೆ ಎಂದರು. ಡಾ. ಜಾಜಿ ದೇವೇಂದ್ರಪ್ಪ ಪ್ರಾಧ್ಯಾಪಕರು ಮತ್ತು ಸದಸ್ಯರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಗಂಗಾವತಿ ಇವರು ಕೃತಿ ಪರಿಚಯ ಮಾಡುತ್ತಾ ಎಲ್ಲ ಕಾಲಕ್ಕೂ ಸಲ್ಲುವ ಕವನಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಕವನಗಳ ಬಗ್ಗೆ ತಾತ್ಸಾರ ಮನೋಭಾವನೆ ಸಲ್ಲದು. ಸಾಮಾಜಿಕ ಸುಧಾರಣೆಯಲ್ಲಿ ಕವನಗಳ ಪಾತ್ರ ಬಹು ಮುಖ್ಯವಾಗಿದೆ ಎಂದು ಕೆಲವು ಕವನಗಳನ್ನು ವಿಶ್ಲೇಷಣೆ ಮಾಡಿ ಕೃತಿ ಪರಿಚಯಿಸಿದರು.

- Advertisement -

ಶ್ರೀ ರಮೇಶ ಸಾಸನೂರ ಉಪನ್ಯಾಸಕರು ವಿಜಯಪುರ ಇವರು ಮಾತನಾಡಿ, ಪ್ರೇಮಾ ಅವರು ಸಾಹಿತಿ ಮಾತ್ರವಲ್ಲದೆ ಓರ್ವ ಶ್ರೇಷ್ಠ ಚಿತ್ರಕಲಾವಿದರು ಕೂಡ ಎನ್ನುವುದು ಅವರು ರಚಿಸಿದ ಕಲಾಕೃತಿಗಳನ್ನು ನೋಡಿದರೆ ಅರ್ಥವಾಗುತ್ತದೆ ಎಂದರು.

ಹಿರಿಯ ಚಿತ್ರಕಲಾವಿದರು ಆದ ಎಂ ಆರ್. ಬಾಳಿಕಾಯಿ ಮಾತನಾಡುತ್ತಾ ನಾವು ಬಿಡಿಸುವ ಕಲಾಕೃತಿಗಳು ತಿಳಿನೀರಿನಂತೆ ಸ್ವಚ್ಛಂದವಾಗಿ ನೋಡುಗರ ಮನಸ್ಸಿಗೆ ನೆಮ್ಮದಿಯನ್ನುಂಟು ಮಾಡಬೇಕು ಎಂದರು. 

ಡಾ. ಶಶಿಧರ ನರೇಂದ್ರ ಉದ್ಘೋಷಕರು ಆಕಾಶವಾಣಿ ಧಾರವಾಡ ಅವರು ಮಾತನಾಡಿ, ಮೌನಕ್ಕಿರುವ ಶಕ್ತಿ ಮಾತುಗಳಿಗೆ ಇಲ್ಲ ಆದ್ದರಿಂದ ಮೌನದ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವ ಕವಿತೆಗಳು ರಚನೆಯಾದರೆ ಬಹುಕಾಲ ನೆನಪಿನಲ್ಲಿ ಉಳಿಯುತ್ತವೆ ಎಂದರು. 

- Advertisement -

ಕಾರ್ಯಕ್ರಮದಲ್ಲಿ ಎಲ್ಲ ಗಣ್ಯರನ್ನು ಸತ್ಕರಿಸಲಾಯಿತು. ಲೇಖಕಿ ಶ್ರೀಮತಿ ಪ್ರೇಮಾ ನಡುವಿನಮನಿ ಅಭಿನಂದನಾ ಪರ ನುಡಿಗಳನ್ನಾಡುತ್ತ ನಿಮ್ಮೆಲ್ಲರ ಪ್ರೋತ್ಸಾಹಪೂರಕ ಆಶೀರ್ವಾದ ನನ್ನ ಮೇಲೆ ಸದಾಕಾಲ ಹೀಗೆಯೇ ಇರಬೇಕು ಎನ್ನುತ್ತಾ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಧಾರವಾಡ ತಾಲೂಕಾ ಅಧ್ಯಕ್ಷರು ನರೇಗಲ್ಲ, ಕಾಟೇನಳ್ಳಿ ಸರ್, ಹಿರಿಯ ಸಾಹಿತಿ ಬಿ. ಕೆ. ಹೊಂಗಲ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌ. ಕಾರ್ಯದರ್ಶಿ ಮಹಾಂತೇಶ ಮೆಣಸಿನಕಾಯಿ, ಸಂ. ಕಾರ್ಯದರ್ಶಿ ವೀರಭದ್ರ ಅಂಗಡಿ, ಉತ್ತರ ಕರ್ನಾಟಕ ಲೇಖಕಿಯರ ಸಂಘ ಧಾರವಾಡದ ಎಲ್ಲ ಮಹಿಳಾ ಲೇಖಕಿಯರು ನಡುವಿನಮನಿ ಕುಟುಂಬ ದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಇಬ್ರಾಹಿಂ ನಿರೂಪಿಸಿ, ವಂದನಾರ್ಪಣೆಗೈದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group