ಬೀದರ: ಗಡಿ ಜಿಲ್ಲೆ ಬೀದರ್ ಬಗ್ಗೆ ಹೇಳಬೇಕು ಅಂದರೆ ಇಲ್ಲಿರುವ ಶಾಸಕರಿಗೆ ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರಗಳು ಈ ನಾಯಕರು ಬೀದರ್ ಜಿಲ್ಲೆಯ ಹಿಂದುಳಿದ ಪ್ರದೇಶ ಅಭಿವೃದ್ಧಿ ಮಾಡುತ್ತಾರೆ ಎಂಬ ಭರವಸೆ ಇಟ್ಟುಕೊಂಡು ಇಬ್ಬರಿಗೂ ಸಚಿವ ಸ್ಥಾನ ನೀಡಿವೆ. ಇದೊಂದು ದೊಡ್ಡ ಕೊಡುಗೆಯನ್ನೇ ಬೀದರ್ ಜಿಲ್ಲೆಗೆ ನೀಡಿದ್ದಾರೆ ಎಂದು ಹೇಳಬಹುದು.
ಆದರೆ ಜಿಲ್ಲೆಯಲ್ಲಿ ನಡೆಯುತ್ತಿರುವುದೇ ಬೇರೆ ರೀತಿಯ ಅಭಿವೃದ್ಧಿ ಎಂದು ಇತ್ತೀಚಿನ ಕೆಲವು ಬೆಳವಣಿಗೆಗಳು ಸಾಕ್ಷಿ ಹೇಳುತ್ತವೆ.
ಈ ಸಂಕ್ಷಿಪ್ತ ಸ್ಟೋರಿ ನೋಡಿ:
ಪಶುಸಂಗೋಪನೆ ಸಚಿವರು ಔರಾದ ದಿಂದ ಬೀದರ್ ಗೆ ಬರಬೇಕು ಆದರೆ ಈ ಗ್ರಾಮದ ಮೂಲಕವೇ ಹಾದು ಬೀದರ್ ಬರಬೇಕಾಗುತ್ತದೆ ಆದರೆ ಪ್ರಭು ಚವ್ಹಾಣ ಅವರಿಗೆ ಅವರ ಇಲಾಖೆಗೆ ಸಂಬಂಧಿಸಿದ ಆ ಆಸ್ಪತ್ರೆ ಕಣ್ಣಿಗೆ ಕಾಣುವುದಿಲ್ಲ.
ಪಶುಗಳ ಪಾಲನೆ, ಪೋಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು ಇಂದಿಗೂ ಕೆಲವು ಕಡೆ ವೈದ್ಯರ ನಿರ್ಲಕ್ಷ್ಯದಿಂದ ಮೂಕ ಪ್ರಾಣಿಗಳು ಸಂಕಷ್ಟ ಅನುಭವಿಸುವಂತಾಗುತ್ತಿರುವುದು ನೋವಿನ ಸಂಗತಿ.
ಕೆಲ ಪಶು ಆಸ್ಪತ್ರೆಯಲ್ಲಿ ಪಶು ಸಂಗೋಪನಾ ಇಲಾಖೆ ಜಾರಿಗೆ ತರುತ್ತಿರುವ ನಾನಾ ಯೋಜನೆಗಳ ಅನುಷ್ಠಾನ ಕೂಡ ಕಷ್ಟಕರವಾಗುತ್ತಿದೆ. ಪಶು ಯೋಜನೆಯ ಲಾಭ ಜಾನುವಾರುಗಳಿಗೆ ತಲುಪದಂತಾಗಿದೆ. ಪಶು ಆಸ್ಪತ್ರೆಗಳ ನಿರ್ವಹಣೆ, ಚಿಕಿತ್ಸೆ ಕಚೇರಿ ಕೆಲಸ ಅಧಿಕಾರಿಗಳು ಉತ್ತಮವಾಗಿ ನಿರ್ವಹಿಸದೆ ಸರ್ಕಾರದ ಕೋಟಿ ಕೋಟಿ ಹಣ ವ್ಯರ್ಥ ಮಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಸದ್ಯ ಪಶು ಸಂಗೋಪನಾ ಇಲಾಖೆ ಸಚಿವರ ತವರು ಜಿಲ್ಲೆಯಲ್ಲಿ ನಡೆದಿರುವ ಬೆಳವಣಿಗೆ.
ಹೌದು ಬೀದರ್ ತಾಲ್ಲೂಕಿನ ಮರಖಲ್ ಗ್ರಾಮದಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಔಷಧಿಗಳಿವೆ ಆದರೆ ಆ ಔಷಧಿಗಳು ಪಶುಗಳಿಗೆ ಉಪಯೋಗವಾಗದೆ ಹಾಳಾಗುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯರು ಮತ್ತು ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಪಶುಗಳಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿಲ್ಲ ಈ ಆಸ್ಪತ್ರೆಯನ್ನೇ ಅವಲಂಬಿಸಿರುವ ಸುತ್ತಮುತ್ತಲಿನ ಮರಖಲ್, ಚಿಕ್ಕಪೇಟ್, ಬೇನಕನಳ್ಳಿ ಸೇರಿ ಇನ್ನೂ ಅನೇಕ ಹಳ್ಳಿಗಳ ರೈತರು ತಮ್ಮ ಜಾನುವಾರುಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ತರುತ್ತಾರೆ, ಆದರೆ ಇಲ್ಲಿನ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಚಿಕಿತ್ಸೆ ಸಿಗದೆ ನಿರಾಸೆ ಅನುಭವಿಸಿ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಈಗಾಗಲೇ ಸಾಕಷ್ಟು ಬಾರಿ ರೈತರು ಆಡಳಿತದ ಗಮನಕ್ಕೆ ತಂದಿದ್ದರೂ ಉಪಯೋಗವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಇತ್ತ ಗಮನ ಹರಿಸಿ ಪಶು ಆಸ್ಪತ್ರೆ ಕುರಿತು ಮಾಹಿತಿ ಪಡೆದು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.
ವರದಿ: ನಂದಕುಮಾರ ಕರಂಜೆ,
ಟೈಮ್ಸ್ ಆಫ್ ಕರ್ನಾಟಕ, ಬೀದರ