ಬೀದರ್ ನಲ್ಲಿ ಕಂಪಿಸಿದ ಭೂಮಿ ; ಜನ ಭಯಭೀತ

Must Read

ಬೀದರ – ಇಷ್ಟು ದಿವಸ ಕೊರೋನಾ ಭಯದಿಂದ ಜನರು ಜೀವನ ನಡೆಸಿದ್ದು ಈಗ ಕಲ್ಯಾಣ ಕರ್ನಾಟಕದಲ್ಲಿ ಭೂಮಿ ನಡುಗಿರುವ ಶಬ್ದ ದಿಂದ ಜನರು ಭಯಭೀತರಾಗಿ ಮನೆ ಬಿಟ್ಟು ಬೀದಿಗೆ ಬಂದ ಘಟನೆ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಗುರು ನಗರದಲ್ಲಿ ನಡೆದಿದೆ

ಹುಮನಾಬಾದ್ ಪಟ್ಟಣದ ಬೀದರ್ ರಸ್ತೆಯಲ್ಲಿರುವ ಗುರುನಗರ ಬಡಾವಣೆಯಲ್ಲಿ ಭೂಮಿ ಕಂಪನದ ಸದ್ದು ಕೇಳಿಬಂದ ಹಿನ್ನೆಲೆಯಲ್ಲಿ ಭಯದಿಂದ ನಿವಾಸಿಗಳು ಮನೆಯಿಂದ ಹೊರಗೆ ಓಡಿಬಂದರು. ಸರಿಯಾಗಿ 10 ಗಂಟೆ ಸುಮಾರಿಗೆ ಈ ಸದ್ದು ಬಂದಿದ್ದು, ಭಯಭೀತರಾಗಿ ಹೊರಗೆ ಓಡಿ ಬಂದಿದ್ದೇವೆ ಎಂದು ಬಡಾವಣೆ ನಿವಾಸಿಗಳೂ ಆದ ಪುರಸಭೆಯ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಎಂ.ಸೀಗಿ ವಿವರಿಸಿದರು.

ಸುರೇಶ ಎಂ.ಸೀಗಿ, ರಮೇಶ ಸೀಗಿ, ಪುರಸಭೆ ಸದಸ್ಯ ವೀರೇಶ ಎಂ.ಸೀಗಿ ಮೊದಲಾದವರು ಮಾಧ್ಯದವರ ಎದುರು ಸಮಸ್ಯೆ ಹೇಳಿಕೊಂಡರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group