ಜೂನ 9ರ ಘಟನೆ ಖಂಡಿಸಿ ವಿಶ್ವ ಹಿಂದೂ ಪರಿಷತದಿಂದ ರಾಷ್ಟ್ರಪತಿಗಳಿಗೆ ಮನವಿ

Must Read

ಮೂಡಲಗಿ : ಪದೆ ಪದೆ ಹಿಂದೂಗಳ ಮೇಲೆ ನಡೆಯುತಿರುವ ಮುಸ್ಲಿಮ್ ಉಗ್ರರ ಬಾಂಬ ದಾಳಿಯನ್ನು ವಿಶ್ವ ಹಿಂದುಪರಿಷತ್ ವತಿಯಿಂದ ನಾವು ಖಂಡಿಸುತೇವೆ ಇಂತಹ ಘಟನೆಗಳಿಗೆ ಮುಂದಿನ ದಿನಗಳಲಿ ತಕ್ಕ ಉತ್ತರ ಕೊಡಲು ಹಿಂದೂಗಳು ನಾವು ಸಿದ್ದರಾಗಬೇಕಿದೆ ಎಂದು ವಿಶ್ವ ಹಿಂದೂಪರಿಷತ್ ಬಜರಂಗದಳ ತಾಲುಕಾ ಕಾರ್ಯದರ್ಶಿ ದಯಾನಂದ ಸವದಿ ಹೇಳಿದರು,

ಶುಕ್ರವಾರ ಮೂಡಲಗಿ ತಹಶೀಲ್ದಾರ ಕಛೇರಿಯಲ್ಲಿ ಜಮ್ಮು ಕಾಶ್ಮಿರದ ಭಯೋತ್ಪಾದನಾ ಕೃತ್ಯವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಪರವಾಗಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ನೀಡಿ ಅವರು ಮಾತನಾಡಿದರು.

ಕಾನೂನಿನ ಹೋರಾಟ ಒಂದು ಕಡೆ ಆದರೆ ಸಾಮಾಜಿಕ ಹೋರಾಟದ ಅವಶ್ಯಕತೆ ಬಹಳ ಮುಖ್ಯವಿದೆ ಒಂದೇ ಸಂಸ್ಕೃತಿ ಸೂರಿನಡಿ ಬಾಳುತಿರುವ ನಾವೆಲ್ಲಾ ಹಿಂದೂಗಳು ಇನ್ನಾದರೂ ಜಾಗೃತರಾಗಬೇಕಿದೆ.  ಹಿಂದೂಗಳು ಯಾರ ಮೇಲೂ ಬಾಂಬ ಹಾಕಿಲ್ಲ ಆದರೆ ನಮ್ಮ ಧರ್ಮದ ನಾಶಕ್ಕಾಗಿ ನಿರಂತರ ದಾಳಿ ನಡೆಯುತ್ತಲೆ ಇದೆ ಇದನ್ನು ಕೊನೆಗಾಣಿಸಲು ಹಿಂದೂ ಸಮಾಜ ಒಗ್ಗಟಾಗಿ ಹೋರಾಡಬೇಕಿದೆ ಎಂದರು.

ಜೂನ 9 ರಂದು ಜಮ್ಮು ಕಾಶ್ಮಿರದಲ್ಲಿ ವೈಷ್ಣೋದೇವಿ ಕತ್ರಾದಿಂದ ಶಿವಖೋಡಿಗೆ ಸಂಚರಿಸುತ್ತಿದ್ದ ಹಿಂದೂ ಭಕ್ತರ ಮೇಲೆ ಪಾಕಿಸ್ಥಾನ ಪೋಷಿತ ಇಸ್ಲಾಮಿಕ ಜಿಹಾದಿ ಭಯೋತ್ಪಾದಕರ ಕೃತ್ಯವನ್ನು ಖಂಡಿಸಿದ್ದನ್ನು ಮನವಿಯಲ್ಲಿ ತಿಳಿಸಿದ್ದಾರೆ,

ತಹಶೀಲ್ದಾರ ಪರವಾಗಿಶಿರಸ್ತೆದಾರ ಪರಶುರಾಮ ನಾಯಿಕ ಅವರಿಗೆ ಮನವಿ ನೀಡಲಾಯಿತು.

ವಿಶ್ವ ಹಿಂದೂ ಪರಿಷತ್ತಿನ ತಾಲುಕಾ ಅಧ್ಯಕ್ಷರು ಶಿವಶಂಕರ ಖಾನಾಪೂರ,ಯಲ್ಲೇಶ ಧರ್ಮಟ್ಟಿ ತಾಲುಕಾ ವಿಧ್ಯಾರ್ಥಿ ಪ್ರಮುಖರು ಮಹೇಶ ಪೂಜೇರಿ,ಬಸು ಪೂಜೇರಿ, ತಾಲುಕಾ ಮಾತೃಶಕ್ತಿ ಪ್ರಮುಖರು ಮಾಲತಿ ಅಶ್ವತ್, ಶಿವಲೀಲಾ ಮಠಪತಿ, ಶಶಿಕಲಾ ಪತ್ತಾರ, ಶಾಂತಾ ಕುಂಬಾರ, ಮಹಾದೇವಿ ನಿರ್ವಾಣಿ, ರತ್ನಾ ನಂದಗಾಂವಮಠ, ಸುಜಾತಾ ಹಿರೇಮಠ ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group