spot_img
spot_img

ಹಾಡು ನಾಟಕ ಸಿನಿಮಾ ಸಾಧನೆ ನಟ ಎಸ್.ನಂಜಪ್ಪ

Must Read

- Advertisement -

ಮೊನ್ನೆ ಹಾಸನದ ಕಲಾಭವನದಲ್ಲಿ ನಾಟಕಪಾತ್ರಗಳದ್ದೆ. ಮತ್ತೆ ಮತ್ತೆ ಕುರುಕ್ಷೇತ್ರ ಅದೇ ರಾಮಾಯಣ ಇಲ್ಲಿ ನಡೆಯುತ್ತಿರುವುದೇ ಹೆಚ್ಚು. ಅದೇಕೆ ನಮ್ಮ ಕಲಾವಿದರು ಈ ಎರಡು ನಾಟಕಗಳ ಬಗ್ಗೆ ಇಷ್ಟು ಅಚ್ಚುಕೊಂಡಿದ್ದಾರೆ ಎನಿಸಿದುಂಟು. ಕಲಾಪ್ರೇಮಿಗಳು ಮೆಚ್ಚಿಕೊಂಡಿದ್ದಾರಲ್ಲ ಏನು ಮಾಡುವುದು.! ಇರಲಿ ಸೂತ್ರದಾರಿ ಇಲ್ಲದೇ ಯಾವ ಪೌರಾಣಿಕ ನಾಟಕ ಆರಂಭವಾಗುವುದಿಲ್ಲ ಸರಿ ತಾನೆ. ಈ ಬಾರಿ ರಂಗದ ಮೇಲೇ ಬಂದು ಹಾಡುತ್ತಿದ್ದವರು ಎಂ.ನಂಜಪ್ಪನವರು. ಹಾಡು, ನಾಟಕ, ಸಿನಿಮಾ ಇಲ್ಲೆಲ್ಲಾ ಇವರ ಪಾತ್ರವಿದೆ. ಆದರೆ ಸೂತ್ರ ಇವರ ಕೈಯಲ್ಲಿ ಇಲ್ಲ. ಬೇರೆಯವರು ಆಡಿಸಿದಂತೆ ಹಾಡುವ ಕಲಾವಿದರು ಅಷ್ಟೇ.

ಇವರಲ್ಲಿ ಹಾಡು ಅಭಿನಯ ಎರಡೂ ಮೈಗೂಡಿದೆ. ಕಲಾತಂಡಗಳು ಕರೆದು ಅವಕಾಶ ಕೊಡುವುದುಂಟು. ಕೊಟ್ಟರೆ ನಟ ಇಲ್ಲದಿದ್ದರೆ ಪ್ರೇಕ್ಷಕ. ಹಾಗೇ ನೋಡಿದರೆ ನಂಜಪ್ಪನವರು ಕಲಾ ಕುಟುಂಬದ ಹಿನ್ನೆಲೆಯಿಂದಲೇ ಬಂದು ಕಲೆಗಾರಿಕೆ ರೂಢಿಸಿಕೊಂಡವರು.

ಇವರ ತಂದೆ ಅಣ್ಣಪ್ಪ ತಾಯಿ ಸಣ್ಣಮ್ಮ. ಹುಟ್ಟಿದ್ದು ತಾವರೆಕರೆಯಲ್ಲಿ ತಾ.19-11-1950. ಇದು ನುಗ್ಗೆಹಳ್ಳಿ ಹೋಬಳಿ ಚನ್ನರಾಯಪಟ್ಟಣ ತಾಲ್ಲೂಕಿಗೆ ಸೇರಿದೆ. ನಮ್ಮ ತಂದೆ ಅಣ್ಣಪ್ಪನವರು ರೈತರ ಕೆಲಸದ ಜೊತೆಗೆ ಡ್ರಾಮ ಸೀನರಿ ಇಟ್ಟಿದ್ದರು. ಗಾಡಿಯಲ್ಲಿ ಸೀನರಿಯ ಸಾಗಟ. ಸೀನರಿಗೆ ಯಾವ ಹೆಸರಿಲಿಲ್ಲ. ಆದರೂ ಜನ ಅಣ್ಣಪ್ಪನ ಸೀನ್ಸ್ ಎನ್ನುತ್ತಿದ್ದರು. ತಂದೆ ಸೇರಿ ಒಡಹುಟ್ಟಿದ ಏಳು ಜನ ಅಣ್ಣ ತಮ್ಮಂದಿರು ಎಲ್ಲರೂ ಕಲಾವಿದರೇ. ನನ್ನ 2ನೇ ವಯಸ್ಸಿಗೆ ತಂದೆ ತೀರಿಕೊಂಡರು. ನಾವು ನಾಲ್ಕು ಜನ ಅಣ್ಣ ತಮ್ಮಂದಿರು. ನಾವು ನಾಲ್ವರು ಕಲಾವಿದರೇ. ನಾನು ಪೊಲೀಸ್ ಇಲಾಖೆಯ ಡಿಎಆರ್‍ನಲ್ಲಿ 1976ರಲ್ಲಿ ಕೆಲಸಕ್ಕೆ ಸೇರಿದೆ. ಹೆಡ್ ಕಾನ್ಸ್‍ಟೇಬಲ್ ಆಗಿ ನಿವೃತ್ತನಾದೆ. ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಏಕಪಾತ್ರಾಭಿನಯ ಮಾಡುತ್ತಿದ್ದೆ. ಬಬ್ರುವಾಹನ, ಭಿಕ್ಷುಕ, ದಾಸಯ್ಯನ ಪಾತ್ರ. ಇಲಾಖೆ ಅಧಿಕಾರಿ ನೌಕರರ ಬೀಳ್ಕೊಡುಗೆ ನಿವೃತ್ತಿ ಸಮಾರಂಭಕ್ಕೆ ನನ್ನದೇ ಪ್ರಾರ್ಥನೆ. ಅಪ್ಪನ ಮನೆಯಲ್ಲಿ ಹಾರ್ಮೊನಿಯಂ, ಮೃದಂಗ, ತಬಲ ಇತ್ತು. ನನ್ನ ಇಬ್ಬರು ಚಿಕ್ಕಪ್ಪನವರು ಇವುಗಳನ್ನು ನುಡಿಸುತ್ತಿದ್ದರು. ಅಜ್ಜ ಚೌಡೇಗೌಡರು ತಬಲ ಬಾರಿಸುತ್ತಿದ್ದರು. ರಾಮನವಮಿ ಭಜನೆಗೆ ಹೋಗ್ತಿದ್ರು. ಕೋಲಾಟ ಆಡುತ್ತಿದ್ದರು, ಸೋಮನ ಕುಣಿತ ಕುಣಿಯುತ್ತಿದ್ದರು. ಊರಿನಲ್ಲಿ ವರ್ಷಕ್ಕೆ 2 ಬಾರಿ ಶನಿ ಮಹಾತ್ಮೆ ನಾಟಕ ಆಡ್ತಿದ್ರು. ನಾನೇ ರಾಜವಿಕ್ರಮ. ಹತ್ತಕ್ಕೂ ಹೆಚ್ಚು ಬಾರಿ ಈ ಪಾತ್ರ ಮಾಡಿದ್ದೇನೆ.

- Advertisement -

ನಿಮ್ಮ ಸಿನಿಮಾ ಪ್ರವೇಶ ಹೇಗೆ.? ಕೇಳಿದೆ. ನನ್ನ ಮೊದಲ ಸಿನಿಮಾ ದೇವರ ಮನೆ. ರಾಜೇಶ್, ಅಂಬರೀಶ್, ಜೈ ಜಗದೀಶ್, ತೂಗುದೀಪ ಶ್ರೀನಿವಾಸ್ ನಟಿಸಿದ್ದಾರೆ. ಈ ಚಿತ್ರದಲ್ಲಿ ನಮ್ಮ ಪೊಲೀಸ್ ಅಧಿಕಾರಿ ಎಸ್.ಎಸ್. ಪಾವಟೆಯವರು ಪೊಲೀಸ್ ಪಾತ್ರ ಕೊಡಿಸಿದರು. ಶೂಟಿಂಗ್ ನಡೆದಿದ್ದು ಚಿಕ್ಕಮಗಳೂರಿನಲ್ಲಿ. ಆಗ ನಾನು ಅಲ್ಲಿ ಪೊಲೀಸ್ ಕೆಲಸದಲ್ಲಿದ್ದೆ. ಪ್ರಭಾಕರ್, ಜಯಮಾಲ, ಅರ್ಜುನ ಸರ್ಜಾ ಅಭಿನಯದ ಪ್ರೇಮಯುದ್ಧದಲ್ಲಿ ಪೊಲೀಸ್, ಭೀಮಾ ನಾಗರಾಜ ನಿರ್ದೇಶನದ ನ್ಯಾಯಕ್ಕಾಗಿ ಸವಾಲು ಚಿತ್ರದಲ್ಲಿ ಇದೇ ಪೊಲೀಸ್, ವಿಷ್ಣುವರ್ಧನ ನಟನೆಯ ದಾದಾ ಸಿನಿಮಾದಲ್ಲಿ 2 ಸೀನ್ ಎಸ್.ಐ.ಗೆ ಪ್ರಮೋಷನ್. ಸ್ವರ್ಣ ಕಮಲ ಪ್ರಶಸ್ತಿ ಪಡೆದ ಗಿರೀಶ್ ಕಾಸರವಳ್ಳಿ ನಿರ್ದೇಶನದ ತಬರನ ಕಥೆಯಲ್ಲಿ ಕಛೇರಿ ಜವಾನ, ಎಸ್.ನಾರಾಯಣ ನಿರ್ದೇಶನದ ಬಾನಲ್ಲೂ ನೀನೇ ಬುವಿಯಲ್ಲೂ ನೀನೇ ಇಲ್ಲೂ ನಾನೇ ಪೊಲೀಸ್. ಹಾಸನ ರಮೇಶ್ ನಿರ್ದೇಶನದ ಶ್ರೀಮಂತ ಸಿನಿಮಾದಲ್ಲಿ ಮಾತ್ರ ಬಡ ರೈತ.

ನಾನು ಗಮನಿಸಿದಂತೆ ಹಾಸನದ ಕಲಾಭವನದಲ್ಲಿ ಪ್ರದರ್ಶನಗೊಳ್ಳುವ ಒಂದಲ್ಲ ಒಂದು ನಾಟಕದಲ್ಲಿ ನಂಜಪ್ಪರವರ ಪಾತ್ರ ಚಿಕ್ಕದಾದ್ದರೂ ಸರಿಯೇ ಇರುತ್ತದೆ. ಪಾತ್ರಗಳು ವೈವಿಧ್ಯ. ರಾಜ ಸತ್ಯವ್ರತದಲ್ಲಿ ವಶಿಷ್ಠ, ಗ್ರಹಗಳು, ಕಾರವಾನ, ರಾಮಾಯಣದಲ್ಲಿ ವಶಿಷ್ಠ, ವಿಭಿಷಣ, ಗುಹ, ಕುರುಕ್ಷೇತ್ರದಲ್ಲಿ ಸಾತ್ಯಕಿ, ಭೀಷ್ಮ, ಭಕ್ತ ಮಾಂಧಾತದಲ್ಲಿ ಯಜಮಾನ..

ಹೀಗೆ 74ರ ಇಳಿ ವಯಸ್ಸಿನಲ್ಲೂ ಇವರು ಅಭಿನಯದಲ್ಲಿ ವಿರಾಜಮಾನ. ಇವರ ರಂಗಗೀತೆಗಳಿಗೆ ರಂಗಪ್ಪದಾಸ್, ಪಾಲಾಕ್ಷಾಚಾರ್, ಸಚಿನ್, ಹೇಮಂತ್, ವೀರಭದ್ರಾಚಾರ್ ಹಾರ್ಮೋನಿಯಂ ಮೀಟಿದ್ದಾರೆ. ಮೊದಲಿಗೆ ಇವರು ತೋಟಿ ಲಕ್ಕಪ್ಪರ ಹತ್ತಿರ ಸೂತ್ರದಾರಿಯಾಗಿ ರಂಗದ ಮೇಲೆ ಬಂದವರು ಇಂದಿಗೂ ಪಕ್ಕ ಮುಂದುವರೆದಿದ್ದಾರೆ.

- Advertisement -

ಇವರು ಜನಪದ ಗಾಯಕರು ಹೌದು. ಸಾಮಾಜಿಕ ನಾಟಕದಲ್ಲಿ ಗ್ಯಾರಂಟಿ ರಾಮಣ್ಣರ ಬಾಡಿದ ಬದುಕುನಲ್ಲಿ ಅಪ್ಪನ ಪಾತ್ರ ಇಪ್ಪತ್ತೈದು ಬಾರಿ ನಟಿಸಿ ಜನಮೆಚ್ಚುಗೆ ಪಡೆದಿದ್ದಾರೆ. ಇವರ ಬಳಿ ಅಭಿನಂದನಾ ಪಾತ್ರಗಳ ಕಟ್ಟೇ ಇದೆ. ಅವುಗಳನ್ನು ಜತನದಿಂದ ಕಾಪಾಡಿಕೊಂಡಿದ್ದಾರೆ. ಜಿಲ್ಲಾ ಕ.ಸಾ.ಪ.ದ ಹಾಸನಾಂಬ ಜಾತ್ರೆ ಸಾಂಸ್ಕøತಿಕ ಉತ್ಸವ-2019, ಕರ್ನಾಟಕ ನಾಟಕ ಅಕಾಡೆಮಿ, ವೀರಭದ್ರೇಶ್ವರಸ್ವಾಮಿ ಕಲಾಸಂಘ ವಿಶ್ವರಂಗಭೂಮಿ ದಿನಾಚರಣೆ ಅಭಿನಂದನಾ ಪತ್ರ, ಮೈಸೂರು ದಸರಾ ನಾಡ ಹಬ್ಬ-2022, ವಿಕಲ ಚೇತನರ ವಿಶ್ವ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಅಭಿನಂದನಾ ಪತ್ರ-2018, ಭುವನೇಶ್ವರಿ ಕಲಾಸಂಘ ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ, ಮೈಸೂರು ವಿಭಾಗ ಮಟ್ಟದ ಕಲಾತಂಡಗಳ ಜಾನಪದ ತರಭೇತಿ..ಹೀಗೆ ಬೇಕಾದಷ್ಟಿವೆ. ಇವೆಲ್ಲವನ್ನು ಕಾಪಿಟ್ಟುಕೊಳ್ಳಿ. ಮುಂದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಬೇಕಾಗುತ್ತವೆ. ಶುಭ ಹಾರೈಸಿದೆ.

ಗೊರೂರು ಅನಂತರಾಜು, ಹಾಸನ.
ಮೊಬೈಲ್: 9449462879.
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -
- Advertisement -

Latest News

ವೇದವ್ಯಾಸರ ಸ್ಮರಣಾರ್ಥ ಗುರು ಪೂರ್ಣಿಮಾ

ಗುರುಪೂರ್ಣಿಮಾ ವಿಶೇಷ ಅರಿವಿಗೆ ಅನಂತ ಶಯನನಾಗಿ ಜ್ಞಾನ ಜ್ಯೋತಿ ಬೆಳಗುತ್ತಿರುವ ಗುರಿತೋರುವ ನೇತಾರ ಬದುಕು ಭವಿಷ್ಯದ ಹಾದಿಯ ದಿಟ್ಟ ಹೆಜ್ಜೆಯಿಡಲು ಗುರಿ ತೋರುವ ದೈವದ ಗುರಿಕಾರ ಜ್ಞಾನದ ತೃಷೆಯನ್ನು ತಣಿಸಿದ ಬದುಕನ್ನು ಹದಗೊಳಿಸುವ ಗುರುಬಲದ ಶಿಲ್ಪಿಗಾರ ಸಕಲ ಜ್ಞಾನವಾಹಿನಿ ಜಾಗೃತಿ ಜಗಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group