ವಾರದ ಸಾಮೂಹಿಕ ಪ್ರಾರ್ಥನೆ ಮತ್ತು ಉಪನ್ಯಾಸ

0
170

ಬೆಳಗಾವಿ – .ಡಾ. ಪ.ಗು.ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿ ಲಿಂಗಾಯತ ಭವನದಲ್ಲಿ 16. 06. 2024 ರಂದು ಈರಣ್ಣ ದೇಯಣ್ಣವರ ಅಧ್ಯಕ್ಷತೆಯಲ್ಲಿ ವಾರದ ಸಾಮೂಹಿಕ ಪ್ರಾರ್ಥನೆ ಮತ್ತು ಉಪನ್ಯಾಸ ಜರುಗಿತು

ಪ್ರಾರಂಭದಲ್ಲಿ ಬಿ ಜಿ ಜವಣಿ. ವಿ ಕೆ ಪಾಟೀಲ್,  ನರಗುಂದ ಮೇಡಂ, ಸುವರ್ಣಾಗುಡಸ, ಕರಿಕಟ್ಟಿ ಮೇಡಂ, ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು

ವಚನ ಸಾಹಿತ್ಯದಲ್ಲಿ ಆರೋಗ್ಯದ ಪರಿಕಲ್ಪನೆ ಕುರಿತು ಡಾಕ್ಟರ್ ಸಂಜಯ್ ಅಪ್ಪಯ್ಯ ಸಿಂದಿಹಟ್ಟಿ ಅಧ್ಯಕ್ಷರು ಕ ಸಾ ಪ ಮೂಡಲಗಿ ಅವರು ಉಪನ್ಯಾಸ ನೀಡಿದರು. ಸರ್ವಕಾಲಕ್ಕೂ ವಚನ ಸಾಹಿತ್ಯ ಅಧ್ಯಯನ ಮಾಡಿದಾಗ ಇದರಲ್ಲಿ ಎಲ್ಲವೂ ಇದೆ. ಅದರಂತೆ ನಡೆದರೆ ನಾವು ಜನಿಸಿದ್ದಕ್ಕೂ ಸ್ವಾರ್ಥಕ. ಶರಣ ಸಂಸ್ಕೃತಿಯ ಸಾಂಸ್ಕೃತಿಕ ಜೀವ ನಮಗೆ ದಾರಿದೀಪವಾಗಿದೆ .ನಮ್ಮ ದೇಹ ರೋಗಭಾದೆ ರೋಗ ಬಲೆ ಪಡೆಯದೆ ಆರೋಗ್ಯ ಹೇರಲು ಆರೋಗ್ಯದಲ್ಲಿ ಇರಲು ಕಾಯಕದಲ್ಲಿ ತೊಡಗಬೇಕು ಚಿಂತೆ ಇಂದು ರೋಗಿಗಳನ್ನಾಗಿ ಮಾಡುತ್ತಿದೆ ನಮ್ಮ ಜೀವನ ಪಾವನವಾಗಬೇಕಾದರೆ ತಾವು ಸೇವೆ ಮಾಡಬೇಕು ಕಡಿಮೆ ಮಾತು ಕಡಿಮೆ ಊಟ ಕಡಿಮೆ ನಿದ್ರೆ ಅತಿ ಅವಶ್ಯಕ ಎಂದರು.

ಶಂಕರ್ ಗುಡಸ ಅವರು ಮಾತನಾಡುತ್ತಾ ಮನಸ್ಸಿನ ಆರೋಗ್ಯ ಮುಖ್ಯ ಎಂದು ತಿಳಿಸಿದರು .ದಾಸೋಹ ಸೇವೆಯನ್ನು ಪ.ಬ.ಕರಿಕಟ್ಟಿ ಅವರು ಸೇವೆಗೈದರು. ಸುರೇಶ್ ನರಗುಂದ ನಿರೂಪಿಸಿದರು. ಅ.ಬ. ಇಟಗಿ .ಬಾಳಗೌಡ ದೊಡ್ಡಬಂಗಿ .ತಲ್ಲೂರ್. ಕರಿಕಟ್ಟಿ, ಎಂವೈ ಮೆಣಸಿಕಾಯಿ. ಸುನೀಲ ಸಾಣಿಕೂಪ್ಪ, ಬಸವರಾಜ ಕರಡಿಮಠ,ಶಿವಾನಂದ ರೂಡಬಸನ್ನವರ, ಶೇಖರ ವಾಲಿ ಇಟಗಿ,ಕಮಲಾ ಗಣಾಚಾರಿ,ಜಯಶ್ರೀ ಚಾವಲಗಿ,ಶರಣಶರಣೆಯರು ಉಪಸ್ಥಿತರಿದ್ದರು