ಸಿಂದಗಿ : ಸತತ ೫೧ ವರ್ಷಗಳ ಹೋರಾಟಕ್ಕೆ ನ್ಯಾಯ ದೊರಕಿದೆ. ಪರಿಣಾಮ ಸಿಂದಗಿಯ ಗುರುಬಸವ ವಿರಕ್ತಮಠದ ಆಸ್ತಿಯು ಮರಳಿ ಮಠದ ಹೆಸರಿಗಾಗಿದೆ ಎಂದು ಸಂತೋಷವನ್ನು ಗುರುಬಸವ ವಿರಕ್ತಮಠದ ಸೇವಾ ಸಮಿತಿಯ ಕಾರ್ಯದರ್ಶಿ ನಿಂಗಪ್ಪ ತಂ. ಗುರುಬಸಪ್ಪ ಪಟ್ಟಣಶೆಟ್ಟಿ ಇವರು ಪತ್ರಕರ್ತರೊಂದಿಗೆ ಹಂಚಿಕೊAಡರು.
ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಗುರುಬಸವ ವಿರಕ್ತಮಠದ ಆಸ್ತಿಯನ್ನು ಸನ್ ೧೯೭೪ ರಲ್ಲಿ ಅನಧಿಕೃತವಾಗಿ ವಕ್ಫ ಬೋರ್ಡ ತನ್ನಹೆಸರಿಗೆ ಮಾಡಿಕೊಂಡಿತ್ತು. ಇದರ ಬಗ್ಗೆ ಸಾಕಷ್ಟು ಹೋರಾಟ ಮಾಡಲಾಗಿ ಕಳೆದ ೨೦೨೪ ರಲ್ಲಿ ರಾಜ್ಯಾದ್ಯಾಂತ ವಕ್ಫ್ ಬೋರ್ಡ ವಿರುದ್ಧ ಸಾಕಷ್ಟು ಹೋರಾಟಗಳು ನಡೆದವು ಆ ಸಂದರ್ಭದಲ್ಲಿ ಮಠದ ೬೦೦ ವರ್ಷಗಳ ಇತಿಹಾಸದ ದಾಖಲೆಗಳನ್ನು ನಾವು ಸರ್ಕಾರದ ಮುಂದಿಟ್ಟಾಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲೆಯ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳು ಇಂಡಿ ಇವರ ನ್ಯಾಯಾಲಯದಲ್ಲಿ ಪ್ರಕರಣದ ಕುರಿತು ವ್ಯಾಜ್ಯ ನಡೆಸಲಾಯಿತು.
ಸದರಿ ಪ್ರಕರಣದಲ್ಲಿ ಪಕ್ಷಗಾರರಾಗಿ ಶ್ರೀ ಮ.ನಿ.ಪ್ರ. ಗುರುಬಸವ ಚನ್ನಬಸವ ಮಹಾಸ್ವಾಮಿಗಳು, ವಿರಕ್ತಮಠ ಸಿಂದಗಿ (ಬಿಳೂರ) ಗೌರವಾಧ್ಯಕ್ಷರು, ವಿರಕ್ತಮಠ ಸೇವಾ ಸಮಿತಿ ಸಿಂದಗಿ. ಮತ್ತು ಪ್ರಕರಣದಲ್ಲಿ ಪಾರ್ಟಿಗಳಾಗಿ ೧) ತಹಸೀಲ್ದಾರ ಸಿಂದಗಿ, ೨) ಕಂದಾಯ ನಿರೀಕ್ಷಕರು ಸಿಂದಗಿ ೩) ಗ್ರಾಮ ಆಡಳಿತ ಅಧಿಕಾರಿ ಸಿಂದಗಿ ೪) ಜಿಲ್ಲಾ ವಕ್ಫ್ ಬೋರ್ಡ ವಿಜಯಪುರ ಆಗಿದ್ದರು. ಈ ಪ್ರಕರಣ ದಿನಾಂಕ : ೧೯-೧೨-೨೦೨೪ ರಂದು ದಾಖಲಾಗಿತ್ತು ಪ್ರಕರಣ ಸಂ : ಆರ್‌ಟಿಎಸ್:ಎಪಿ:೧೨೨/೨೦೨೪-೨೫ ಅಂತ ಇರುತ್ತದೆ. ಸದರಿ ಪ್ರಕರಣ ಸತತ ೧೧ ತಿಂಗಳಿನಿಂದ ವಾದ ಪ್ರತಿವಾದಗಳು ನಡೆದು ಕೊನೆಗೆ ದಿನಾಂಕ : ೨೮/೧೧/೨೦೨೫ ರಂದು ಸದರಿ ವಿರಕ್ತಮಠದ ಆಸ್ತಿಯನ್ನು ವಕ್ಫಬೋರ್ಡನಿಂದ ಮುಕ್ತಗೊಳಿಸಿ ನಮ್ಮ ಮಠದ ಆಸ್ತಿಯನ್ನು ಮರಳಿ ನಮ್ಮ ಮಠಕ್ಕೆ ಸಂಬಂಧಿಸಿದ ಆಸ್ತಿ ಈ ಆಸ್ತಿಗೂ ವಕ್ಫಬೋರ್ಡ ಗೂ ಯಾವುದೇ ಸಂಬಂಧವಿಲ್ಲ ಎಂದು ಮಾನ್ಯ ನ್ಯಾಯಾಲಯ ಆದೇಶಿಸಿದೆ (ಆದೇಶ ಸಂಖ್ಯೆ : RD೦೦೫೦೦೦೬೮೪೨೮೬). ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

