ಡಯಟ್ ಅಧಿಕಾರಿಗಳ ಭೇಟಿ

0
441

ಹಾವೇರಿ – ಇಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಮನ ಹಳ್ಳಿ ಇಲ್ಲಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾವೇರಿಯ ಹಿರಿಯ ಉಪನ್ಯಾಸಕರಾದ ಸಿ.ಪಿ.ಮೂಲಿಮನಿ ಹಾಗೂ ಉಪನ್ಯಾಸಕರಾದ ಉದಯ ಮೇಸ್ತಾ ಭೇಟಿ ನೀಡಿ ಪರ್ಯಾಯ ಶಿಕ್ಷಣ ವ್ಯವಸ್ಥೆಯ ಕುರಿತು ದಾಖಲೆಗಳನ್ನು ವೀಕ್ಷಿಸಿದರು.

ಶಾಲಾಭಿವೃದ್ದಿ ಯೋಜನೆ ಹಾಗೂ ಶಾಲಾ ಶೈಕ್ಷಣಿಕ ಯೋಜನೆಗಳನ್ನು ಪರಿಶೀಲನೆ ಮಾಡಿದರು. ಸಂವೇದ ತರಗತಿಯ ಚಟುವಟಿಕೆಗಳನ್ನು ವೇಳಾಪಟ್ಟಿ ಸಹಿತ ಶಿಕ್ಷಕರ ದಿನಚರಿಗಳನ್ನು ಪರಿಶೀಲಿಸಿದರು.ನಲಿ ಕಲಿ ತರಗತಿಯ ಚಟುವಟಿಕೆಗಳನ್ನು ತಿಳಿಸಿದರು. ನಲಿ ಕಲಿ ಅಭ್ಯಾಸದ ಹಾಳೆಗಳನ್ನು ಮನೆ ಭೇಟಿ ವಿಷಯಗಳ ಕುರಿತು ಮಾಹಿತಿ ಪಡೆದರು.ಮಕ್ಕಳು ಸಂವೇದ ಪಾಠಗಳನ್ನು ವೀಕ್ಷಿಸಿದ ಕುರಿತು ಹಿಮ್ಮಾಹಿತಿ ಪಡೆದರು.ತರಗತಿವಾರು ಶಾಲಾ ವೇಳಾಪಟ್ಟಿ, ಸಂಯುಕ್ತ ವೇಳಾಪಟ್ಟಿ, ಶಾಲಾ ಪಂಚಾಂಗ, ಸೇತುಬಂಧ ಪರೀಕ್ಷೆಯ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆಗಳನ್ನು ವೀಕ್ಷಿಸಿದರು.

ಪಾಠೋಪಕರಣಗಳ ತಯಾರಿಕೆಯಲ್ಲಿ ಶಿಕ್ಷಕರು ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿದರು. ಪಾಠ ಟಿಪ್ಪಣಿ, ವಾರ್ಷಿಕ ಪಾಠ ಹಂಚಿಕೆ, ಕ್ರಿಯಾ ಯೋಜನೆ ಕುರಿತು ಮಾಹಿತಿ ಪಡೆದರು. ಭೌತಿಕ ತರಗತಿಗಳು ನಡೆಯುವ ವಿಧಾನಗಳು ಅವುಗಳನ್ನು ಕ್ರೋಢೀಕರಿಸಿದ ಮಾಹಿತಿ ಪಡೆದರು. ಪ್ರತಿ ಶಿಕ್ಷಕರ ಪಾಠ ಯೋಜನೆ, ಪರ್ಯಾಯ ಶಿಕ್ಷಣ ಯೋಜನೆ ಕುರಿತು ಸಂಬಂಧಿಸಿದ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿದರು. ಶಾಲೆಯ ಆಡಳಿತಾತ್ಮಕ ವಿಷಯಗಳ ಕುರಿತು ಶಾಲೆಯ ಮುಖ್ಯ ಶಿಕ್ಷಕರಾದ ಎಸ್ ಎನ್ ಸೂಡಂಬಿ ಮಾಹಿತಿ ನೀಡಿದರು. ನಲಿ ಕಲಿ ತರಗತಿಗಳ ಅಭ್ಯಾಸದ ಹಾಳೆಗಳ ಮಾಹಿತಿಯನ್ನು ಡಿ ಹೆಚ್ ಮಾದರ ವಿವರಿಸಿದರು.

ನಾಲ್ಕು ಮತ್ತು ಐದನೇ ತರಗತಿಯ ಭಾಷಾ ವಿಷಯಗಳ ಕುರಿತು ಶ್ರೀಮತಿ ಆರ್ ಪಿ ಕುಂಬಾರ ಆನ್ ಲೈನ್ ತರಗತಿಗಳ ಮೂಲಕ ವಿದ್ಯಾರ್ಥಿಗಳಿಗೆ ನೀಡಿದ ಮನೆಗೆಲಸ ಹಾಗೂ ಪಾಠಗಳ ಕುರಿತು ಮಾಹಿತಿ ನೀಡಿದರು. ನಾಲ್ಕು ಮತ್ತು ಐದನೇ ತರಗತಿಯ ಗಣಿತ ಹಾಗೂ ಪರಿಸರ ಅಧ್ಯಯನ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ನೀಡಿದ ಮನೆಗೆಲಸ ಮತ್ತು ವಿಡಿಯೋ ಪಾಠಗಳ ಕುರಿತು ಇಂಗಳಗಿ ದಾವಲಮಲೀಕ ಮಾಹಿತಿ ನೀಡಿದರು. ಟೀಚ್ ಮೆಂಟ್ ಯಾಪ್ ಮೂಲಕ ಪಾಠ ಮಾಡುವ ವಿಧಾನವನ್ನು ತಿಳಿಸಿದರು. ಶಿಕ್ಷಕರ ಆರೋಗ್ಯದ ಹಿತದೃಷ್ಟಿಯಿಂದ ಸ್ಯಾನಿಟೈಸರ್,ಮಾಸ್ಕ್ ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಉದಯ ಮೇಸ್ತಾ ಉಪನ್ಯಾಸಕರು ಜಿಲ್ಲಾ ಶಿಕ್ಷಣ ಮತ್ತು ತರಗತಿ ಸಂಸ್ಥೆ ಹಾವೇರಿ ಇವರು ತಿಳಿಸಿದರು.