ಭಾರತ ಸರ್ಕಾರ ನೆಹರು ಯುವ ಕೇಂದ್ರ ಬೆಳಗಾವಿ ( ಯುವ ಕಾರ್ಯ ಕ್ರೀಡಾ ಸಚಿವಾಲಯ ) ಪ್ರೊಫೆಷನಲ್ ಸೋಶಿಯಲ್ವ ರ್ಕ್ ಅಸೋಸಿಯೇಷನ್ (ರಿ)ಕರ್ನಾಟಕ ಮತ್ತು ದಿ ಅಸೊಶಿಯೇಶನ್ ಆಫ್ ಪೀಪಲ್ ಪಿತ್ ಡಿಸೇಬಲಿಟಿ (APD) ಬೆಳಗಾವಿ ಇವರ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಯುವ-ಚೈತನ್ಯ 2022 ವಿಕಲಚೇತನರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸುಮಾರು 35 ಜನ ವಿಕಲಚೇತನರಿಗೆ ಕಿಟ್ ಹಾಗೂ 50, ಮಾಸ್ಕ್ ಗಳನ್ನು 50, ಕ್ಯಾಲೆಂಡರ್ ಗಳನ್ನು ವಿತರಣೆ ಮಾಡುವ ಮೂಲಕ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಸಂಯೋಜಕರಾದ ರೋಹಿತ ಕಲಾರ NYK ಬೆಳಗಾವಿ ಅಸೋಸಿಯೇಷನ್ ಅಧ್ಯಕ್ಷರು ದೀಪಕ್ ಕೆ, APD ಅಸಿಸ್ಟೆಂಟ್ ಡೈರೆಕ್ಟರ್ ರಮೇಶ್ ಗೊಂಗಡಿ, ಅಸೋಸಿಯೇಷನ್ ಉಪಾಧ್ಯಕ್ಷರಾದ ಶಿವರಾಜ ಹೊಳೆಪ್ಪಗೋಳ ಬೆಳಗಾವಿ ವಿಕಲಚೇತನರ ಕ್ರೀಡಾ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಹೊಂಗಲ, ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಯಾದ ಆಕಾಶ್ ಬೇವಿನಕಟ್ಟಿ ಸ್ವಾಗತ ಮಾಡಿಕೊಂಡರು. ಸಾತುಗೌಡ ನಾವಿ ವಂದನಾರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಹಲವಾರು ವಿಕಲಚೇತನ ಸದಸ್ಯರು ಉಪಸ್ಥಿತರಿದ್ದರು.

