spot_img
spot_img

ಕ್ಷೇತ್ರವು ಎಲ್ಲ ರೀತಿಯಿಂದ ಅಭಿವೃದ್ಧಿಯಾಗಲು ಬಿಜೆಪಿಗೆ ಮತ ನೀಡಿ – ಬಾಲಚಂದ್ರ ಜಾರಕಿಹೊಳಿ

Must Read

spot_img
- Advertisement -

 

ಮೂಡಲಗಿ: ಅರಭಾವಿ ಕ್ಷೇತ್ರವು ಎಲ್ಲ ರೀತಿಯಿಂದ ಅಭಿವೃದ್ಧಿ ಹೊಂದಲು ತಾವೆಲ್ಲ ಹಿರಿಯರು ಸೇರಿ ಎಲ್ಲರನ್ನು ಕರೆದುಕೊಂಡು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.

ಇಲ್ಲಿನ ಶಿವಬೋಧರಂಗ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯಲ್ಲಿ ಕರೆಯಲಾದ ಮೂಡಲಗಿ, ಗುರ್ಲಾಪೂರ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಬಿಜೆಪಿ ಕಾರ್ಯಕರ್ತರು ಹಾಗೂ ಹಿರಿಯರ ಸಭೆಯಲ್ಲಿ ಅವರು ಮಾತನಾಡಿದರು.

- Advertisement -

ಬಿಸಿಲು ಇದ್ದಿದ್ದರಿಂದ ಮತದಾನ ಕಡಿಮೆ ಆಗದಂತೆ ಕಾರ್ಯಕರ್ತರು ನೋಡಿಕೊಳ್ಳಬೇಕು. ಮೂಡಲಗಿ ತಾಲೂಕಾದ ನಂತರ ಎಲ್ಲ ಕಚೇರಿಗಳನ್ನು ಆರಂಭಿಸಲಾಗಿದೆ ಇನ್ನೂ ಮುಂದಾದರೂ ಮೂಡಲಗಿ ನಗರಕ್ಕೆ ಏನೇ ಬೇಕಾದರೂ ನಾನು ಮಾಡಿಕೊಡುತ್ತೇನೆ. ಬೇರೆ ಪಕ್ಷದವರು ಕೂಡ ನಮ್ಮ ಮೇಲೆ ಅಭಿಮಾನ ವ್ಯಕ್ತಪಡಿಸಿದ್ದಾರೆ. ಅವರನ್ನೂ ನಾವು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ. ಆದ್ದರಿಂದ ಎಲ್ಲಾ ಸಮಾಜದವರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿ ಬಿಜೆಪಿಯನ್ನು ಭಾರೀ ಪ್ರಮಾಣದ ಮತಗಳಿಂದ ಆಯ್ಕೆ ಮಾಡಬೇಕು ಎಂದರು.

ಪ್ರಧಾನಿ ಮೋದಿಯವರು ಕೂಡ ರಾಜ್ಯಕ್ಕೆ ಆಗಮಿಸಿ ಪ್ರಚಾರ ಮಾಡುತ್ತಿದ್ದಾರೆ ಅವರನ್ನು ನಾವೆಲ್ಲ ಬೆಂಬಲಿಸಬೇಕು ಅವರ ಪ್ರಚಾರದಿಂದ ಮೇ ೫ ರೊಳಗಾಗಿ ರಾಜ್ಯದ ವಾತಾವರಣವೇ ಬದಲಾಗುವಂತೆ ಮಾಡಬೇಕಾಗಿದೆ ಎಂದು ಅವರು ನುಡಿದರು.

ಮೂಡಲಗಿಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಆಗಬೇಕಾದರೆ ನಮ್ಮ ಸರ್ಕಾರ ಬರಬೇಕು, ನಗರದ ಒಳಗಿನ ರಸ್ತೆಗಳು ಆಗಬೇಕಾಗಿದೆ ಮುಖ್ಯರಸ್ತೆ ಕಾಮಗಾರಿ ಇಷ್ಟರಲ್ಲಿಯೇ ಆರಂಭವಾಗಬೇಕಿತ್ತು ಚುನಾವಣೆ ಮುಗಿದ ನಂತರ ಆರಂಭವಾಗುತ್ತದೆ. ಅದಲ್ಲದೆ ನಿಮ್ಮ ಯಾವುದೇ ಸಮಸ್ಯೆಗಳು ಇದ್ದರೆ ಪರಿಹಾರವಾಗುತ್ತವೆ ಎಂದು ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.

- Advertisement -

ಬಸಪ್ರಭು ನಿಡಗುಂದಿ, ಬಾಬು ಸೋನವಾಲಕರ, ಚನ್ನಮಲ್ಲಯ್ಯ ನಿರ್ವಾಣಿ, ಎಸ್ ಜಿ ಢವಳೇಶ್ವರ, ವಿಠ್ಠಪ್ಪ ಹೊಸಕೋಟಿ, ಭೀಮಶಿ ಸೋನವಾಲಕರ ಅವರಲ್ಲದೆ ವಿವಿಧ ಹಳ್ಳಿಗಳ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮ ಆಂದೋಲನಕ್ಕೆ ಚಾಲನೆ

ಮೂಡಲಗಿ : ಕಳೆದ ಶನಿವಾರದಂದು ಗೋಸಬಾಳದ ಸರಕಾರಿ ಕೆ.ಹೆಚ್.ಪಿ.ಎಸ್ ಮತ್ತು ಉನ್ನತೀಕರಿಸಿದ ಪ್ರೌಢ ಶಾಲೆಯಲ್ಲಿ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ವತಿಯಿಂದ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group