ಸಿಂದಗಿ: ಉಪಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿ ಶ್ರೀಮತಿ ನಾಜಿಯಾ ಅಂಗಡಿ ಅವರನ್ನು ನಮ್ಮ ಸಮ್ಮಿಶ್ರ ಸರಕಾರದ ಸಾಧನೆಗಳನ್ನು ನೋಡಿ ಅತೀ ಹೆಚ್ಚು ಮತದಿಂದ ಆಯ್ಕೆ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಉಪಚುನಾವಣೆ ನಿಮಿತ್ತ ಅವರು ಜೆಡಿಎಸ್ ಅಭ್ಯರ್ಥಿ ಪರ ತೆರೆದ ವಾಹನದಲ್ಲಿ ಭರ್ಜರಿ ರೋಡ ಶೋ ಮೂಲಕ ಮತಯಾಚಿಸಿ ಮಾತನಾಡಿದರು.
ಅಭ್ಯರ್ಥಿ ಶ್ರೀಮತಿ ನಾಜಿಯಾ ಅಂಗಡಿ ಮಾತನಾಡಿ, ಜೆಡಿಎಸ್ ಪಕ್ಷದ ಕಟ್ಟಾಳು ನಮ್ಮ ಮಾವನವರಾದ ಐ.ಬಿ.ಅಂಗಡಿಯವರನ್ನು ಪೋಷಿಸಿ ಬೆಳೆಸಿದ ಪಕ್ಷ ಜೆಡಿಎಸ್ ಅದರಲ್ಲೆ ಇದ್ದು ತಮ್ಮ ಜೀವವನ್ನೆ ಈ ಪಕ್ಷಕ್ಕಾಗಿ ಮುಡುಪಾಗಿ ಇಟ್ಟಿದ್ದಾರೆ ಆ ಪಕ್ಷದ ಅಭ್ಯರ್ಥಿಯಾಗಿದ್ದು ನನ್ನ ಋಣವಾಗಿದೆ ಅದಕ್ಕೆ ಈ ಮತಕ್ಷೇತ್ರದ ಜನರು ನಮ್ಮ ಪಕ್ಷದ ಸಾಧನೆಗಳನ್ನು ಅವಲೋಕಿಸಿ ನನಗೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜೆ.ಡಿ.ಎಸ್. ರಾಷ್ಟ್ರಿಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಪ್ರದಾನ ಕಾರ್ಯದರ್ಶಿ ಜಫರುಲ್ಲಾಖಾನ, ಇಮ್ರಾನಪಾಷಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಹಂಗರಗಿ, ತಾಲೂಕಾ ಕಾರ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ, ಅದ್ಯಕ್ಷ ಗೋಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಪ್ರಕಾಶ ಹಿರೇಕುರಬರ, ಸೇರಿದಂತೆ ಅನೇಕರಿದ್ದರು.