ಅಶೋಕ ಮನಗೂಳಿ ಪರ ಪತ್ನಿ ಮತಬೇಟೆ

Must Read

ಸಿಂದಗಿ: ಕಳೆದ ಸಮ್ಮಿಶ್ರ ಸರಕಾರದಲ್ಲಿ ನಮ್ಮ ಪತಿರಾಯ ದಿ.ಮಾಜಿ ಸಚಿವ ಎಂ.ಸಿ.ಮನಗೂಳಿ ಅವರು ಯಾವುದೇ ಜಾತಿ ಭೇದ ತೋರದೇ ಎಲ್ಲರು ನಮ್ಮವರು ಎನ್ನುವ ರೀತಿಯಲ್ಲಿ ಅಡಳಿತ ನಡೆಸಿ ಸರ್ವರಿಗೂ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎನ್ನುವುದಕ್ಕೆ ಸುಲ್ಪಿ ಅವರನ್ನು ನಮ್ಮ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿಕೊಂಡಿದ್ದು ತಾಜಾ ಉದಾಹರಣೆ ಅದೇ ಹಾದಿಯಲ್ಲಿ ನಮ್ಮ ಮಗ ಅಶೋಕ ಮನಗೂಳಿ ಅವರು ಹೊರಟಿದ್ದು ಅವನಿಗೆ ನಿಮ್ಮ ಅತ್ಯಮೂಲ್ಯವಾದ ಮತ ನೀಡಿ ಆಶೀರ್ವದಿಸಿ ಎಂದು ದಿ. ಎಂ.ಸಿ.ಮನಗೂಳಿ ಅವರ ಧರ್ಮ ಪತ್ನಿ ಸಿದ್ದಮ್ಮಗೌಡತಿ ಮನಗೂಳಿ ಮನವಿ ಮಾಡಿದರು.

ಪಟ್ಟಣದ 16ನೇ ವಾರ್ಡಿನಲ್ಲಿ ಮಾತಂಗಿ ಸಮುದಾಯದ ಹೆಣ್ಣು ಮಕ್ಕಳ ಮನೆ ಮನೆಗೆ ಕುಟುಂಬ ಸಮೇತ ತೆರಳಿ ಮತಯಾಚಿಸಿ ಮಾತನಾಡಿ, ಹಿಂದೆ ಗ್ರಾಮ ಸೇವಕರಾಗಿದ್ದಾಗೂ ಕೆಳ ವರ್ಗದ ಸಮುದಾಯದವರಿಗಾಗಿ ಸರಕಾರದಿಂದ ಇಂಜಿನ್‍ಗಳನ್ನು ವಿತರಣೆ ಮಾಡಿದ್ದಾರೆ. ಶಿಕ್ಷಣ ಸಂಸ್ಥೆಯಿಂದ ಹಲವಾರು ಜನರಿಗೆ ಶಿಕ್ಷಣ ನೀಡುವದರ ಜೊತೆಗೆ ನೌಕರಿಗಳನ್ನು ನೀಡಿದ್ದಾರೆ ಅವರು ದಿವಂಗತರಾದ ಬಳಿಕ ಅವರ ಸ್ಥಾನವನ್ನು ಅಶೋಕ  ಮುಂದುವರೆಸಿಕೊಂಡು ಹೊರಟಿದ್ದಾನೆ. ಕಾರಣ ತಮ್ಮೆಲ್ಲರ ಆಶೀರ್ವಾದದಿಂದ ಎಮ್ಮೆಲ್ಲೆ ಮಾಡಿ ವಿಧಾನ ಸೌಧಕ್ಕೆ ಕಳುಹಿಸಿ ಇನ್ನೂ ಜನ ಸೇವೆ ಮಾಡಲು ಅನುಕೂಲವಾಗುತ್ತದೆ ಎಂದು ಬೇಡಿಕೊಂಡರು.

ಈ ಸಂದರ್ಭದಲ್ಲಿ ಅಶೋಕ ಮನಗೂಳಿ ಅವರ ಧರ್ಮ ಪತ್ನಿ ನಾಗರತ್ನಾ ಮನಗೂಳಿ, ಡಾ. ಸೌಮ್ಯ ಮನಗೂಳಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group