ಕಾದರವಳ್ಳಿ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಪೂರೈಕೆ

Must Read

ಕಾದರವಳ್ಳಿ ಎಸ್ ವಿ ಕುಲಕರ್ಣಿ ಸರಕಾರಿ ಪ್ರೌಢಶಾಲೆಗೆ 2024-25 ನೇ ಸಾಲಿನ ಸಿಎಸ್ಆರ್ ಯೋಜನೆಯಲ್ಲಿ ಬ್ಲೂಪೈನ್ ಸೋಲಾರ್ ಎನರ್ಜಿ ಕಂಪನಿ ಹಾಗೂ ಜೀವನ ಪ್ರಕಾಶ ಚಾರಿಟೇಬಲ್ ಸೊಸೈಟಿ ದೆಹಲಿ ವತಿಯಿಂದ ಐದು ನೂರು ಲೀಟರ್ ನೀರಿನ ಶುದ್ಧೀಕರಣ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಪೂರೈಕೆ ಮಾಡಲಾಯಿತು.

ಸ್ಥಳೀಯ ಪ್ರದೇಶಗಳ ಅಭಿವೃದ್ಧಿ ದೃಷ್ಟಿಯಿಂದ ಶಾಲೆಗಳಿಗೆ ಬೇಕಾಗುವಂತಹ ಅವಶ್ಯಕತೆಗಳನ್ನು ಬ್ಲೂ ಪೈನ್ ಸೋಲಾರ್ ಎನರ್ಜಿ ಕಂಪನಿ ವತಿಯಿಂದ ಮುಂದಿನ ದಿನಮಾನಗಳಲ್ಲಿ ಪೂರೈಕೆ ಮಾಡಿ ಶಿಕ್ಷಣದ ಅಭಿವೃದ್ದಿಗೆ ಸಹಕಾರ‌ ನೀಡಲಾಗುವದು ಎಂದು ಸೈಟ್ ಎಂಜನೀಯರ್ ಅವಿನಾಶ ಹೇಳಿದರು.

ಕ್ಷೇತ್ರಶಿಕ್ಷಣಾಧಿಕಾರಿಗಳಾದ ಸಿ ವಾಯ್ ತುಬಾಕದ ಅವರು ಸಿಎಸ್ಅರ್ ಯೋಜನೆ ಅಡಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪೂರೈಕೆ ಮಾಡಿದ ಬ್ಲೂ ಪೈನ್ ಸೋಲಾರ್ ಎನರ್ಜಿ ಕಂಪನಿಯ ಸಾಮಾಜಿಕ ಉಪಯುಕ್ತ ಕಾರ್ಯ ಶ್ಲಾಘನೀಯವಾದುದು ಮುಂದಿನ ದಿನಗಳಲ್ಲಿ ಇಲಾಖೆಯ ಜೊತೆಗೂಡಿಕೊಂಡು ಯೋಜನೆ ರೂಪಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಹಕರಿಸಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಕುಮಾರ ಕುಲಕರ್ಣಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜೀವನ ಪ್ರಕಾಶ ಚಾರಿಟೇಬಲ್ ಸೊಸೈಟಿಯ ಲಕ್ಷ್ಮೀಧರ ದುಬೆ,ಎಂಜನೀಯರ್ ಅರಿಹಂತ,ಪಾರೀಸ ಬೆಟಗೇರಿ,ಸಿಕಂದರ ನಾಲಬಂದ, ರಿಯಾಜ್ ಅಹಮದ್ ಹಾಗೂ ಮುಖ್ಯೋಪಾಧ್ಯಾಯರಾದ ಶಶಿಕಲಾ ಗುಡ್ಲಮನಿ,ಎಸ್ ಡಿ ಎಮ್ ಸಿ ಯ ಸದಸ್ಯರಾದ ಈರಣ್ಣ ಗಣಾಚಾರಿ,ದಿನೇಶ ಗೋಣಿ,ಗುರುಶಾಂತ ಮಾರಿಹಾಳ,ಗುತ್ತಿಗೆದಾರ ಅಪ್ಪೇಶ ಹಮ್ಮಣ್ಣವರ,
ಡಾ.ಗಜಾನಂದ ಸೊಗಲನ್ನವರ, ಎ ಎಸ್ ಪೂಜಾರ,ಮಹೇಶಕುಮಾರ್, ಸಿ ಬಿ ತುರಮರಿ,ಎಮ್ ಕೆ ನಾವಲಗಿ,ಮಂಜುಳಾ ಮಡ್ಲಿ,ಗೀತಾ ಜಾಧವ,ರತ್ನಾ ಜೋಡಗಿ ಶಾಲಾ ಮಕ್ಕಳು ಉಪಸ್ಥಿತರಿದ್ದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group