Homeಸುದ್ದಿಗಳುಹಾಸುಗಟ್ಟಿರುವ ನೀರು ಜನತೆಗೆ..... ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಚಿಟಗುಪ್ಪ ಪುರಸಭೆ

ಹಾಸುಗಟ್ಟಿರುವ ನೀರು ಜನತೆಗೆ….. ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಚಿಟಗುಪ್ಪ ಪುರಸಭೆ

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಮಾರ್ಚ್ ತಿಂಗಳು ಬಂತು ಅಂದರೆ ಸಾಕು ನೀರಿನ ಅಭಾವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇರುವಷ್ಟೇ ನೀರಿನ ಸದುಪಯೋಗ ಮಾಡಿಕೊಳ್ಳಬೇಕು ಆದರೆ ಬೀದರ್ ಜಿಲ್ಲೆಯ ಚಿಟಗುಪ್ಪ ಪಟ್ಟಣದಲ್ಲಿ ಸರಬರಾಜು ಮಾಡುವ ಕುಡಿಯುವ ನೀರಿನ ಟ್ಯಾಂಕ್ ಹಾಗೂ ವಾರ್ಡ್ ಗಳಿಗೆ ಸರಬರಾಜು ಹೊಂದಿರುವ ಬಾವಿಯ ನೀರಿನ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ನೀರಿನ ಮೇಲೆ ಹಸಿರು ಹಾಸುಗಟ್ಟಿದ್ದು ಕುಡಿಯಲು ಅಯೋಗ್ಯವಾಗಿದೆ. ಆದರೆ ಪುರಸಭೆ ಮಾತ್ರ ನೀರಿನ ಸ್ವಚ್ಛತೆಯ ಬಗ್ಗೆ ಗಮನ ಕೊಟ್ಟಿಲ್ಲ

ಬಾವಿಯಲ್ಲಿ ಪ್ಲಾಸ್ಟಿಕ್ ಬಾಟಲ್ ಗಳು, ಗಲೀಜಾದ ಕ್ಯಾರಿಬ್ಯಾಗ,ಕಸಕಡ್ಡಿ ಗುಟ್ಕಾ ತಿಂದು ಬಿಸಾಡಿದ ಪೇಪರ್ ಬಾವಿಯಲ್ಲಿ ತುಂಬಿ ತೇಲಾಡುತ್ತಿವೆ.

ಇಂತಹ ದ್ರಶ್ಯ ನೋಡಿದರೆ ಚಿಟಗುಪ್ಪ ಜನರನ್ನು ಆ ದೇವರೆ ಕಾಪಾಡಬೇಕು ಅನ್ನಿಸಿಬಿಡುತ್ತದೆ. ಇಂಥ ನೀರನ್ನು ಗ್ರಾಮದ ಜನರು ಹೇಗೆ ಕುಡಿಬೇಕು ಎಂಬ ಪ್ರಶ್ನೆಯಿದ್ದರೆ ಪುರಸಭೆಯು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂಬುದು ಗೊತ್ತಾಗುತ್ತಿದೆ.

ಹುಮನಾಬಾದನಲ್ಲಿ ಪಾಟೀಲ ಕುಟುಂಬದಲ್ಲಿ ಒಬ್ಬರು ಶಾಸಕರು ಇಬ್ಬರು ವಿಧಾನ ಪರಿಷತ್ ಸದಸ್ಯರು ಇದ್ದಾರೆ. ಇಡಿ ಚಿಟಗುಪ್ಪ ಪಟ್ಟಣದ ಜನತೆ ಕುಡಿಯಲು ಇದೆ ಭಾವಿಯ ನೀರು ಉಪಯೋಗಿಸ್ತಾರೆ. ಹೀಗಿರುವಾಗ ಈ ನೀರು ಕುಡಿಯುವ ಜನರ ಆರೋಗ್ಯದ ಮೇಲೆ ಯಾವ ರೀತಿಯ ದುಷ್ಪರಿಣಾಮ ಬೀರಬಹುದು ಎಂಬುದು ಯೋಚನೆ ಮಾಡುವ ವಿಷಯ.ಜೊತೆಗೆ ಈ ಕುಡಿಯುವ

ನೀರಿನ ಟ್ಯಾಂಕ್ ಹತ್ತಿರ ಕೊಚ್ಚೆ ನೀರಿನಲ್ಲಿ ಮಲಮೂತ್ರ ಮಾಡುವ ನಾಯಿ ಹಂದಿಗಳು ಕ್ರಿಮಿಕೀಟಗಳಿಂದ ಸುತ್ತಾ ಮುತ್ತ ಗಬ್ಬು ವಾಸನೆ ಸಾರುತ್ತದೆ. ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಗೋಸ್ಕರ ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಆದರೆ ಶುದ್ಧ ಕುಡಿಯುವ ನೀರು ಜನರಿಗೆ ಕುಡಿಸುವಲ್ಲಿ ಸಂಬಂಧಪಟ್ಟವರು ನಿರ್ಲಕ್ಷತನ ತೋರುತ್ತಿರುವುದು ಎದ್ದು ಕಾಣುತ್ತಿದೆ.

ಕಚೇರಿಯಲ್ಲಿ ಕುಳಿತು ಹೋಗುವ ಅಧಿಕಾರಿಗಳು ನೈರ್ಮಲ್ಯ ನಿರೀಕ್ಷಕರು ಹಾಗು ಮುಖ್ಯಾಧಿಕಾರಿಗಳು ಈ ಕಡೆ ಗಮನ ಹರಿಸಿ ಬಾವಿಯ ನೀರನ್ನು ಸ್ವಚ್ಛಗೊಳಿಸಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತಾರೋ ಇಲ್ಲವೋ ಎಂಬುದು ಕಾದು ನೋಡಬೇಕಾಗಿದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ,ಬೀದರ

RELATED ARTICLES

Most Popular

error: Content is protected !!
Join WhatsApp Group