‘ನಾವೂ ಗೆಲ್ಲಬೇಕು’ ಕೃತಿ ಲೋಕಾರ್ಪಣಾ ಸಮಾರಂಭ

Must Read

ಸವದತ್ತಿ: ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಳಾದ ವೀರಯ್ಯ ಹಿರೇಮಠ ಅವರ ಚೊಚ್ಚಲ ಕೃತಿ ‘ನಾವೂ ಗೆಲ್ಲಬೇಕು’ ಬಿಡುಗಡೆ ಜರುಗಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೈ ಎಂ ಯಾಕೊಳ್ಳಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ರಾದ ಎಸ್ ಡಿ ಗಂಗನ್ನವರ, ಬೈಲಹೊಂಗಲ ತಾಲೂಕು ನೌಕರರ ಸಂಘದ ಅಧ್ಯಕ್ಷ ರಾದ ರವಿ ಹಿರೇಮ

ಈ ಸಂದರ್ಭದಲ್ಲಿ ಶಿಕ್ಷಕ ಸಾಹಿತಿ ವೈ ಬಿ ಕಡಕೋಳ ಕೃತಿ ಪರಿಚಯ ಮಾಡಿದರು. ಅತಿಥಿಗಳಾದ ವೈ ಎಂ ಯಾಕೊಳ್ಳಿ. ಎಸ್ ಡಿ ಗಂಗನ್ನವರ, ರವಿ ಹಿರೇಮಠ, ಸವದತ್ತಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕಿರಣ ಕುರಿ, ಸಮನ್ವಯ ಸಂಪನ್ಮೂಲ ಶಿಕ್ಷಕ ಎಸ್ ಬಿ ಬೆಟ್ಟದ ಕೃತಿ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಹಿರೇಮಠ ದಂಪತಿಗಳ ಗೌರವ ಸನ್ಮಾನ ಜರುಗಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವ್ಹಿ ಸಿ ಹಿರೇಮಠ, “ತಮ್ಮ ಜೀವನದಲ್ಲಿ ಕಂಡು ಕೇಳಿದ ಓದಿದ ಬರಹಗಳು ಜೀವನಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಪ್ರಭಾವ ಬೀರುತ್ತಿದ್ದವು ಅವುಗಳನ್ನು ಏಕೆ ಪುಸ್ತಕ ರೂಪದಲ್ಲಿ ಹೊರತರಬಾರದು ಎಂದು ಯೋಚಿಸಿದಾಗ ಮೂಡಿ ಬಂದ ಕೃತಿ ನಾವೂ ಗೆಲ್ಲಬೇಕು ಎಂದು ಕೃತಿ ರಚನೆ ಯ ಹಿಂದಿನ ಸಂಗತಿಯನ್ನು ತಿಳಿಸಿದರು

ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ, ಎನ್ ಬ್ಯಾಳಿ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ ಹಿರೇಮಠ ಅವರ ಚೊಚ್ಚಲ ಕೃತಿ ತುಂಬಾ ಮೌಲಿಕ ಬರಹಗಳನ್ನು ಒಳಗೊಂಡಿದೆ. ನಮ್ಮ ತಾಲೂಕಿನ ಮತ್ತೋರ್ವ ಉದಯೋನ್ಮುಖ ಬರಹಗಾರ ನಮ್ಮ ನಡುವಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೈಲಹೊಂಗಲ ತಾಲೂಕು ನೌಕರರ ಸಂಘದ ಅಧ್ಯಕ್ಷ ರಾದ ರವಿ ಹಿರೇಮಠ, ವಿನೋದ ಹೊಂಗಲ, ಮಲ್ಲಿಕಾರ್ಜುನ ಹೂಲಿ, ಮಾರುತಿ ಕರಡಿಗುಡ್ಡ,  ರಾಜು ಭಜಂತ್ರಿ ಸೇರಿದಂತೆ ಸವದತ್ತಿ ತಾಲೂಕಿನ ಎಲ್ಲಾ ಅನುಷ್ಠಾನ ಅಧಿಕಾರಿಗಳು. ಶಿಕ್ಷಣ ಸಂಯೋಜಕರಾದ ಅರ್ಜುನ ಕಾಮನ್ನವರ, ಸುಧೀರ್ ವಾಗೇರಿ, ಎಂ ಬಿ ಕಡಕೋಳ,  ದುರಗಪ್ಪ ಭಜಂತ್ರಿ ಮೊದಲಾದವರು ಉಪಸ್ಥಿತರಿದ್ದರು.

ತಾಲೂಕಿನ ಎಲ್ಲಾ ಅನುಷ್ಠಾನ ಅಧಿಕಾರಿಗಳಿಗೆ ಹಾಗೂ ಕೃತಿಯ ಆಶಯ ನುಡಿಗಳನ್ನು ಹೇಳಿದ ಮಹನೀಯರಿಗೆ ಸನ್ಮಾನ ಗೌರವ ಸನ್ಮಾನ ವನ್ನು ಹಿರೇಮಠ ದಂಪತಿಗಳು ನೆರವೇರಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ರತ್ನಾ ಸೇತಸನದಿ ಪ್ರಾರ್ಥನೆ ಹಾಗೂ ಸ್ವಾಗತ ಗೀತೆ ಹೇಳಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕುಶಾಲ್ ಮುದ್ದಾಪೂರ ಸ್ವಾಗತಿಸಿದರು. ವೈ ಬಿ ಕಡಕೋಳ ನಿರೂಪಿಸಿದರು. ಚಿದಾನಂದ ಬಾರ್ಕಿ ವಂದಿಸಿದರು.

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group