ವಚನ ಪಿತಾಮಹ ಡಾ.ಫ ಗು. ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ 22-12- 2024. ರಂದು ಸಾಮೂಹಿಕ ವಚನ ಪ್ರಾರ್ಥನೆ ಮತ್ತು ಉಪನ್ಯಾಸವನ್ನು ಶರಣೆ ದಾನಮ್ಮ ವಿ .ಅಂಗಡಿ ಅವರು ಮಕ್ಕಳು ಸಂಸ್ಕಾರವಂತರಾಗುವಲ್ಲಿ ಕುಟುಂಬದ ಪಾತ್ರ ಕುರಿತು ಉಪನ್ಯಾಸ ನೀಡಿದರು.
ಗುರು ಹಿರಿಯರಿಗೆ ಗೌರವ ಕೊಡಬೇಕು. ತಂದೆ ತಾಯಿ ಸೇವೆ ಮಾಡಬೇಕು.ಸಮಯವಿಲ್ಲ ಅಂತ ಅನ್ನಬಾರದು, ಮನಸ್ಸು ಮಾಡಬೇಕು. ಸಂಸ್ಕಾರ ಬಾಲ್ಯದಲ್ಲಿಯೇ ಕೊಡಬೇಕು. ಅನೇಕ ರೋಗಗಳನ್ನು ತಡೆಗಟ್ಟುವ ಶಕ್ತಿ ಪ್ರಾರ್ಥನೆಯಲ್ಲಿದೆ. ದಿನಾಲು ಐದು ನಿಮಿಷ ಪ್ರಾರ್ಥನೆ ಮಕ್ಕಳಿಗೆ ಕಲಿಸಿ ಕೊಡಿರಿ. ಬೆಳಗಿನ ರಶ್ಮಿ ಶರೀರಕ್ಕೆ ತಟ್ಟಲಿ,ಮಕ್ಕಳಿಗೆ ಎಂದೂ ಮೊಬೈಲ್ ದಾಸರಾಗಲು ಬಿಡದೆ, ಗಿಡಕ್ಕೆ ನೀರು ಹಾಕುವುದು,ತಂದೆ-ತಾಯಿ ಸೇವೆ, ಎಲ್ಲರಿಗೂ ನಮಸ್ಕಾರ ಮಾಡುವುದು, ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ, ನಾವು ಸಂಸ್ಕಾರ ನೀಡಬೇಕು ಹೊಸ ಆಹಾರ ಪದ್ಧತಿ ಬಿಟ್ಟು ತರಕಾರಿ, ರೊಟ್ಟಿ, ಮೊಳಕೆ ಕಾಳು, ಮತ್ತು ಅಂಬಲಿ,ಇವು ರೂಡಿ ಆಗಲಿ, ಒಳ್ಳೆಯ ಸಂಪ್ರದಾಯ ಇರಲಿ. ಅಭ್ಯಂಗಸ್ನಾನ, ನಮ್ಮನ್ನು ನಾವು ನಿಯಂತ್ರಿಸಿಕೊಳ್ಳಬೇಕು. ತಾಯಿ ಪಾತ್ರ ತಂದೆ ಪಾತ್ರ ಇಲ್ಲಿ ಅತಿ ಅವಶ್ಯಕ, ಬಾಲ್ಯ, ಯೌವನ,ಮುಪ್ಪು, ಎಲ್ಲರಿಗೂ ಬರುವುದೇ,ನಮ್ಮ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಂದಿನ ಯಾಂತ್ರಿಕ ಜೀವನ ಬಿಟ್ಟು ಗುರು ಹಿರಿಯರು ಹಿಂದೆ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ಗುರು ಇಲ್ಲದೆ ಯಾವುದೇ ಕಾರ್ಯವಿಲ್ಲ,ಹಂಚಿ ತಿನ್ನುವುದು ಇದರಲ್ಲಿ ಎಷ್ಟು ಖುಷಿ ಇದೆ.ಸಾಮಾಜಿಕ ಬದಲಾವಣೆ ನೆರೆಹೊರೆ ಬಾಂಧವ್ಯ ಕಾಪಾಡಿಕೊಳ್ಳಿ, ಮಕ್ಕಳಿಗೆ ಸಂಸ್ಕಾರ ಡೆಪಾಜಿಟ್ ಮಾಡಿರಿ. ಜನನಿ ತಾಯಿ ಮೊದಲ ಗುರು,ಪ್ರೀತಿ-ವಿಶ್ವಾಸ ಗೌರವ ಹೊಂದಾಣಿಕೆ ನಮ್ಮ ಕರ್ತವ್ಯ ಸಹ ಆಗಿದೆ. ಅನುಭವ ಇರುವಲ್ಲಿ ಅಮೃತವಿದೆ ಎಂದು ದಾನಮ್ಮ ಅಂಗಡಿಯವರು ಉಪನ್ಯಾಸ ನೀಡಿದರು.
ಈರಣ್ಣ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು, ಸುರೇಶ ನರಗುಂದ ಅವರು ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಮಹಾಂತೇಶ ಮೆಣಸಿನಕಾಯಿ ಪರಿಚಯಿಸಿದರು ಸಂಗಮೇಶ ಅರಳಿ ನಿರೂಪಿಸಿದರು.
ಬಸವರಾಜ ಬಿಜ್ಜರಗಿ, ಬಿ ಪಿ. ಜವನಿ,ವಿ ಕೆ ಪಾಟೀಲ, ಶ೦ಕ್ರಪ್ಪ ಮೆಣಸಗಿ,ಅನೀಲ ರಘಶೆಟ್ಟಿ,ಬಸವರಾಜ ಕರಡಿಮಠ,ಕರಿಕಟ್ಟಿ,ಸೊಮಶೇಖರಕತ್ತಿ, ಸುನೀಲ ಸಾನಿಕೊಪ್ಪ , ಗಂಗಪ್ಪ ಉಣಕಲ, ಪೂಜಾ ಅಶೋಕ ಹುಕ್ಕೇರಿ, ಭಾಗವಹಿಸಿದ್ದರು.