spot_img
spot_img

ವಿಶ್ವಾರಾಧ್ಯರ ತತ್ವ ಚಿಂತನೆಗಳನ್ನು ಜೀವನದಲ್ಲಿ ಪಾಲಿಸಬೇಕು

Must Read

- Advertisement -

ಸಿಂದಗಿ: ಭಾವೈಕತೆಯ ಭಗವಂತ ಸಿದ್ದ ಪುರುಷ ವಿಶ್ವಾರಾಧ್ಯರ ಉತ್ತಮ ತತ್ವ ಚಿಂತನೆಗಳು ಜೀವನದಲ್ಲಿ ಅಳವಡಿಕೆಯಾಗಲಿ ಎಂದು ಸಾರಂಗಮಠ- ಗಚ್ಚಿನಮಠ ಗುರುಕುಲ ಭಾಸ್ಕರ ಡಾ. ಷ. ಬ್ರ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.

ತಾಲೂಕಿನ ಬಂದಾಳ ಗ್ರಾಮದ ಶ್ರೀ ಬಸಯ್ಯ ಮುತ್ಯಾನ ಹಿರೇಮಠದ ಜಾತ್ರೆ ಹಾಗೂ ಜಗನ್ಮಾತೆ ಶ್ರೀದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಸಿದ್ದಕುಲ ಚಕ್ರವರ್ತಿ ಶ್ರೀ ವಿಶ್ವಾರಾಧ್ಯರ ಪುರಾಣ ಪ್ರವಚನ ಕಾರ್ಯಕ್ರಮವನ್ನು  ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಧರ್ಮದ ತಳಹದಿಯ ಮೇಲೆ ಸುಂದರ ಬದುಕು ಕಟ್ಟಿ ಕೊಂಡು ಮಕ್ಕಳಿಗೆ ಬಾಲ್ಯದಲ್ಲಿಯೇ ಆಚಾರ – ವಿಚಾರ ಸಂಸ್ಕಾರಗಳನ್ನು ಪಾಲಕರು ಕಲಿಸಬೇಕು ಎಂದರು.

ಕನ್ನೊಳ್ಳಿ ಹಿರೇಮಠದ ಷ. ಬ್ರ. ಸಿದ್ದಲಿಂಗ ಶಿವಾಚಾರ್ಯರು ಕಾರ್ಯಕ್ರಮದ ನೇತೃತ್ವ ವಹಿಸಿ ಆಶೀರ್ವಚನ ನೀಡಿ ಮಾತನಾಡಿ ನಮ್ಮ ಸುಂದರ ಬದುಕನ್ನು ಹಸನುಗೊಳಿಸಲು ಸಿದ್ದಕುಲ ಚಕ್ರವರ್ತಿ ಶ್ರೀ ವಿಶ್ವಾರಾಧ್ಯರ ಪುರಾಣ ಪ್ರವಚನಗಳಲ್ಲಿ ಬರುವ ಸಾರವಂಶಗಳನ್ನು ಜೀವನದಲ್ಲಿ ಅವಳವಡಿಸಿ ಕೊಳ್ಳಬೇಕು ಎಂದರು.

- Advertisement -

ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಶಂಕರಲಿಂಗಯ್ಯ ಹಿರೇಮಠ ಹಾಗೂ ಅಳ್ಳಗಿ ಗ್ರಾಮದ ಪ್ರವಚನಕಾರ ಶರಣಯ್ಯ ಶಾಸ್ತ್ರಿಗಳು ಮಾತನಾಡಿ, ಶ್ರೀ ಬಸಯ್ಯ ಮುತ್ಯಾನ ಹಿರೇಮಠದ ಜಾತ್ರೆ ಹಾಗೂ ಜಗನ್ಮಾತೆ ಶ್ರೀದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಸಾಗಿ ಬರುವ ಸಿದ್ದಕುಲ ಚಕ್ರವರ್ತಿ ಶ್ರೀ ವಿಶ್ವಾರಾಧ್ಯರ ಪುರಾಣ ಪ್ರವಚನದಲ್ಲಿ ಬರುವ ವಿಷಯಗಳು ಜೀವನದಲ್ಲಿ ವಿಶ್ವಾರಾಧ್ಯರ ತತ್ವಾದರ್ಶಗಳನ್ನು ಪಾಲಿಸಿದರೆ ಜೀವನ ಯಶಸ್ಸು ಕಾಣಲು ಸಾಧ್ಯ ಅವರ ಆದರ್ಶ ವ್ಯಕ್ತಿಗಳ ಜೀವನದ ಬಗ್ಗೆ ಪ್ರತಿಯೊಬ್ಬರು ತಿಳಿದು ಕೊಳ್ಳುವುದು ಅವಶ್ಯ ಇದೆ ಅಂದಾಗಲೇ ಉತ್ತಮವಾದ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದನ್ನು ಎಲ್ಲರೂ ಅರಿಯಬೇಕಿದೆ ಎಂದರು.

ಪಡದಳ್ಳಿ ಗ್ರಾಮದ ಸಿದ್ದಯ್ಯ ಸ್ವಾಮಿ ಹಾಗೂ ಚವಡಪೂರ ಗ್ರಾಮದ ಸೋಮನಾಥ ಚವಡಪೂರ ಸಂಗೀತ ಸೇವೆ ನಡಿಸಿಕೊಟ್ಟರು. ಶಿಕ್ಷಕ ಮಹಾರುದ್ರಯ್ಯ ಶಿ ಹಿರೇಮಠ ಸ್ವಾಗತಿಸಿ ವಂದಿಸಿದರು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group