ಸಿಂದಗಿ- ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದರಿಂದ ನಮ್ಮ ಜೀವವನ್ನು ನಾವು ರಕ್ಷಣೆ ಮಾಡಿಕೊಳ್ಳಹಬಹುದು ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಸುರಕ್ಷಿತವಾಗಿ ವಾಹನ ಚಲಾಯಿಸುವುದನ್ನು ನಾವೆಲ್ಲ ರೂಢಿ ಮಾಡಿಕೊಳ್ಳಬೇಕು ಎಂದು ಸಿಂದಗಿ ಪೋಲಿಸ ಠಾಣೆಯ ಆರಕ್ಷಕ ಅಧಿಕಾರಿ ಭೀಮಪ್ಪ ರಬಕವಿ ಹೇಳಿದರು.
ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಂ.ಮನಗೂಳಿ ಪದವಿ ಕಾಲೇಜ ಮತ್ತು ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಿಂದಗಿ ಪೋಲಿಸ್ ಠಾಣೆ ಹಮ್ಮಿಕೊಂಡಿರುವ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 2023-24 ನೇ ಸಾಲಿನಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ ಪರಿಣಾಮ ಸುಮಾರು 418 ಕ್ಕೂ ಅಧಿಕ ಜೀವಗಳು ಸಾವನ್ನಪ್ಪಿದ್ದಾರೆ. ನಾವೆಲ್ಲ ನಮ್ಮ ಕುಟುಂಬವನ್ನು ರಕ್ಷಣೆ ಮಾಡುವಂತವರು. ನಾವು ಜಾಗೃತರಾಗಿ ಕಡ್ಡಾಯವಾಗಿ ಹೆಲ್ಮೆಟನ್ನು ಧರಿಸಿ ವಾಹನ ಚಲಾಯಿಸಬೇಕು ಎಂದು ಹೇಳಿದ ಅವರು, ಹೆಲ್ಮೇಟ್ ಧರಿಸುವುದರಿಂದ ತಮ್ಮ ಜೀವ ಉಳಿಯುವದರೊಂದಿಗೆ ಮುಂದಾಗುವ ಅನಾಹುತವನ್ನು ತಪ್ಪಿಸಬಹುದು ಎಂದರು.
ಈ ಸಂದರ್ಭದಲ್ಲಿ ಎಚ್.ಜಿ.ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಮಾತನಾಡಿ, ಹೆಲ್ಮೆಟ್ ಫಸ್ಟ್ ಸ್ಪೀಡ್ ನೆಕ್ಸ್ಟ್ ಎಂಬ ಘೋಷಣೆಯೊಂದಿಗೆ ಹೆಲ್ಮೆಟ್ ಧರಿಸುವುದರಿಂದ ಆಗುವ ಲಾಭವನ್ನು ವಿವರಿಸಿದರು.
ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಎಂ.ಹುರಕಡ್ಲಿ, ಉಪನ್ಯಾಸಕ ಎಸ್.ಆರ್.ಬಿರಾದಾರ, ಎಸ್.ಎ.ಜಾಗಿರದಾರ ವೇದಿಕೆ ಮೇಲಿದ್ದರು.