ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ
ಮೇಷ ರಾಶಿ:
ಈ ವಾರ ನಿಮ್ಮ ಹಲವಾರು ಸಮಸ್ಯೆಗಳು ಬಗೆಹರಿಯುತ್ತವೆ. ಹೆಚ್ಚುವರಿ ಚಿಕಿತ್ಸೆ ಅಗತ್ಯ ಇರುವವರು ಈ ವಾರ ಚಿಕಿತ್ಸೆ ಪಡೆಯಲು ಉತ್ತಮವಾಗಿರುತ್ತದೆ. ಕೆಲಸದಲ್ಲಿ ಉತ್ತಮ ಮಾರ್ಗವನ್ನು ಕಂಡುಕೊಳ್ಳುವುದು ಮುಖ್ಯವಾಗಿರುತ್ತದೆ. ಹಣಕಾಸಿನ ವಿಚಾರದಲ್ಲಿ ಸೂಕ್ಷ್ಮವಾಗಿ ಇರಬೇಕಾಗುತ್ತದೆ. ಖರ್ಚುವೆಚ್ಚಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದರಿಂದ ಕಷ್ಟಪಟ್ಟು ದುಡಿದ ಹಣ ಹಾಳಾಗುವುದನ್ನು ತಪ್ಪಿಸಬಹುದು. ಕುಟುಂಬಸ್ಥರೊಂದಿಗೆ ತಾಳ್ಮೆಯಿಂದ ವರ್ತಿಸುವುದು ನಿಮ್ಮನ್ನು ಸಂತೋಷದಲ್ಲಿ ತೇಲಾಡುವಂತೆ ಮಾಡುತ್ತದೆ. ಪತ್ನಿಯೊಂದಿಗೆ ಮನಸ್ತಾಪಗಳು ಎದುರಾಗಬಹುದು.
ವೃಷಭ ರಾಶಿ:
ಈ ವಾರ ಕೆಲಸದಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧಗಳು ಏರ್ಪಡಲಿವೆ. ಕೆಲ ಸಂಪರ್ಕಗಳಿಂದ ದೂರವಿರಲು ಸೂಚಿಸಲಾಗುತ್ತದೆ. ಕಷ್ಟಪಟ್ಟು ದುಡಿದ ಹಣವನ್ನು ದುಂದುವೆಚ್ಚ ಮಾಡದುವುದುನ್ನು ತಪ್ಪಿಸಿ. ಕೆಲಸದಲ್ಲಿ ಶುಭ ಸುದ್ದಿಗಳು ಕೇಳಿ ಬರಲಿವೆ. ಕೆಲಸವನ್ನು ಬದಲಾಯಿಸಲು ಬಯಸುವವರು ಬೇರೆ ಬೇರೆ ಕೆಲಸಗಳತ್ತ ಗಮನ ಹರಿಸಿ. ಶ್ರಮವಹಿಸಿ ಮಾಡುವ ಕೆಲಸ ನಿಮ್ಮನ್ನು ಕೊನೆವರೆಗೂ ಕೈಹಿಡಿದು ಕಾಪಾಡುತ್ತದೆ. ಕೆಲಸಲದಲ್ಲಿ ಮನಸ್ತಾಪಗಳು ಬರಬಹುದು. ಬೇಸರಗೊಳ್ಳುವುದು ಬೇಡ. ಆರ್ಥಿಕವಾಗಿ ನಿಮ್ಮನ್ನು ಸದೃಢಗೊಳಿಸಲು ಸಮಸ್ಯೆಗಳು ಬಲ ನೀಡುತ್ತವೆ.
ಮಿಥುನ ರಾಶಿ:
ಈ ವಾರ ನೀವು ತುಂಬಾ ಹಠಮಾರಿಯಾಗಿರುತ್ತೀರಿ. ನೀವು ಕೇವಲ ಬದಲಾವಣೆಯೊಂದಿಗೆ ಮಾತ್ರ ವ್ಯವಹರಿಸಬಹುದು. ಅಭೂತಪೂರ್ವ ಸಮಯ ಈ ವಾರ ನಿಮಗೆ ಸಿಗಲಿದೆ. ಡಿಸೆಂಬರ್ 2020 ರಲ್ಲಿ ಕಾಣಿಸಿಕೊಂಡ ವೃತ್ತಿ ಅಥವಾ ನಾಯಕತ್ವದ ಅವಕಾಶವು ಈ ವಾರದಲ್ಲಿ ಮತ್ತೆ ಸಿಗಲಿದೆ. ಈ ಸಮಯದಲ್ಲಿ ಕೆಲ ನಿಯಮಗಳ ಮೇಲೆ ಒಪ್ಪಂದವನ್ನು ಮಾಡಿಕೊಳ್ಳುತ್ತೀರಿ. ಹೊಸ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಹೊಸ ಸಂಬಂಧವನ್ನು ಪ್ರಾರಂಭಿಸಿದಂತೆ. ಟೆನ್ಷನ್ ಇರುಬಹುದು. ಆರೋಗ್ಯವನ್ನು ಚೆನ್ನಾಗಿಡಲು ವ್ಯಾಯಾಮ ಯೋಗ ಮಾಡುವ ಸಲಹೆಯನ್ನು ನೀಡಲಾಗುತ್ತದೆ. ಪತ್ನಿಯೊಂದಿಗೆ ಸಂತೋಷದಿಂದ ಇರುತ್ತೀರಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಶ್ರಮಿಸಬೇಕಾಗಬಹುದು.
ಕರ್ಕ ರಾಶಿ:
ಈ ವಾರ ವ್ಯಾಯಾಮ ಮಾಡಿ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡುವುದು ಉತ್ತಮ. ಆರ್ಥಿಕ ಜೀವನ ಸುಧಾರಿಸುತ್ತದೆ. ನಿಮ್ಮ ಹಠಮಾರಿ ಧೋರಣೆ ತೊರೆಯಿರಿ ಮತ್ತು ಇತರರನ್ನು ನಿರ್ಲಕ್ಷಿಸಬೇಡಿ. ಹೆಚ್ಚು ಗಳಿಸುವ ಹಂಬಲದಲ್ಲಿ ಸ್ವಲ್ಪವೂ ಕೈ ಬಿಡಬೇಡಿ. ವ್ಯಾಪಾರ ಬೆಳವಣಿಗೆಗೆ ಹೊಸ ತಂತ್ರಜ್ಞಾನವನ್ನು ಬಳಸಿ. ಅತಿ ಬುದ್ಧಿವಂತರಾಗಿರಬೇಡಿ. ಮಹಿಳೆಯರನ್ನು ಗೌರವದಿಂದ ನೋಡಿಕೊಳ್ಳಿ. ಪ್ರತಿದಿನ ದೇವಸ್ಥಾನಕ್ಕೆ ಹೋಗಿ. ನಿಮ್ಮವರನ್ನು ನೀವು ಪ್ರೀತಿಸಿ. ಕೆಲಸದಲ್ಲಿ ಹೊಸ ಆಲೋಚನೆಗಳನ್ನು ನೀವು ಮಾಡುತ್ತೀರಿ. ಹೊಸ ಕೆಲಸಗಳನ್ನು ಮಾಡಲು ನಿಮಗೆ ಅವಕಾಶಗಳು ಸಿಗಲಿವೆ.
ಸಿಂಹ ರಾಶಿ:
ಈ ವಾರ ನಿಮಗೆ ಸಾಲ, ಒಪ್ಪಂದ ಅಥವಾ ಪಾಲುದಾರಿಕೆ ನಿಮಗೆ ಕಿರಿಕಿರಿಯನ್ನುಂಟು ಮಾಡಬಹುದು. ನಿಮ್ಮ ನಿರಂತರ ಕೆಲಸದಿಂದ ವಿರಾಮ ಪಡೆದುಕೊಳ್ಳುತ್ತೀರಿ. ಕೆಲಸವನ್ನು ಆರಾಮದಾಯಕವಾಗಿ ಮಾಡಲು ಸೂಚಿಸಲಾಗುತ್ತದೆ. ಏಕಾಂಗಿ ಜೀವನದಿಂದ ಹೊರಬರಲು ನೀವು ಆ ಸಮಯದಲ್ಲಿ ಪ್ರಯತ್ನ ಪಡುತ್ತೀರಿ. ಆದರೆ ಈಗ ವಿಷಯಗಳು ವಿಭಿನ್ನವಾಗಿವೆ. ಹಾಗೆ ಮಾಡಲು ನಿಮಗಿದು ಸುದೀರ್ಘ ಪ್ರಕ್ರಿಯೆಯಾಗಿದೆ. ಈ ವಾರ ಕುಟುಂಬಸ್ಥರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಈ ಅವಕಾಶಕ್ಕಾಗಿ ಕಾಯುವ ನೀವು ಪುಟ್ಟ ಪ್ರಯಾಣವನ್ನು ಬೆಳಸುವ ಸಾಧ್ಯತೆ ಇದೆ.
ಕನ್ಯಾ ರಾಶಿ:
ಈ ವಾರ ಸಹೋದ್ಯೋಗಿಗಳು ಪರಸ್ಪರ ಜಗಳವಾಡುವ ಸಾಧ್ಯತೆ ಇದೆ. ನಿಮ್ಮ ಮಕ್ಕಳು ಯಾವುದೇ ಕಾರಣವಿಲ್ಲದೆ ನಿಮ್ಮ ವಿರುದ್ಧ ಮುನಿಸಿಕೊಳ್ಳಬಹುದು. ಬೇಸರ ವ್ಯಕ್ತಪಡಿಸಬಹುದು. ಸಂಘರ್ಷಗಳಿಂದ ಕುಟುಂಬಸ್ಥರ ಮಧ್ಯಸ್ಥಿಕೆ ಬೇಕಾಗುತ್ತದೆ. ಶಾಂತಿಯ ಕ್ಷಣ ನಿಮಗೆ ಸಿಗುವುದು ಕಷ್ಟವಾಗಬಹುದು. ಈ ವಾರ ನೀವು ಸಂಪೂರ್ಣವಾಗಿ ಮತ್ತೊಬ್ಬರ ಬೆಂಬಲವನ್ನು ಪಡೆಯುತ್ತೀರಿ. ಹೊಸದಾಗಿ ಪ್ರಾರಂಭಿಸುವ ಕೆಲಸಗಳ ಬಗ್ಗೆ ಕಾಳಜಿಯನ್ನು ವಹಿಸಿ. ಸಹಾಯಕ್ಕೆ ಪ್ರತಿಯಾಗಿ ಏನನ್ನು ಬಯಸದೇ ಇರಲು ಸೂಚಿಸಲಾಗುತ್ತದೆ.
ತುಲಾ ರಾಶಿ:
ಈ ವಾರ ನಿಮ್ಮ ದೈನಂದಿನ ವೇಳಾಪಟ್ಟಿಯನ್ನು ಪರೀಕ್ಷಿಸಲು ಸೂಚಿಸಲಾಗುತ್ತದೆ. ನಿಮಗಾಗಿ ಮಾತ್ರವಲ್ಲದೆ ನಿಮ್ಮ ಸಂಬಂಧಗಳಿಗೂ ಸಹ ನಿಮ್ಮ ಆದ್ಯತೆಗಳ ಬಗ್ಗೆ ಸ್ಪಷ್ಟಪಡಿಸಲು ಅವಕಾಶ ಸಿಗಲಿದೆ. ನೀವು ಹೆಚ್ಚು ಜನ ಸಂಪರ್ಕವನ್ನು ಹೊಂದಲು ಬಯಸುತ್ತೀರಿ. ನಿಮಗೆ ಸ್ಫೂರ್ತಿ ನೀಡುವಂತಹದನ್ನು ಅನುಸರಿಸುವುದರ ಮೇಲೆ ಕೇಂದ್ರೀಕರಿಸಿ. ಇದು ನಿಮಗೆ ದಿನದಿಂದ ದಿನಕ್ಕೆ ಹೆಚ್ಚು ಸ್ವಾತಂತ್ರ್ಯವನ್ನು ನೀಡುತ್ತದೆ. ಪ್ರೀತಿಪಾತ್ರರ ನಷ್ಟದ ದುಃಖವನ್ನು ನೀವು ಪಡೆಯುತ್ತೀರಿ, ಅದನ್ನು ಸಹಿಸಲು ಸಾಧ್ಯವಿಲ್ಲ. ಈ ಸಮಯದಲ್ಲಿ ಕುಟುಂಬವು ನಿಮ್ಮೊಂದಿಗೆ ಇರುತ್ತದೆ.
ವೃಶ್ಚಿಕ ರಾಶಿ:
ಈ ವಾರ ನಿಮ್ಮ ದೈನಂದಿನ ದಿನಚರಿಯಲ್ಲಿ ಹೆಚ್ಚು ಸೌಮ್ಯತೆಯನ್ನು ಕಾಪಾಡಿಕೊಳ್ಳಿ. ಇತರರಿಗೆ ಸಹಾಯ ಹಸ್ತ ಚಾಚುವಿರಿ. ಹಳೆಯ ಸ್ನೇಹಿತರೊಡನೆ ಸಭೆ ನಡೆಯಲಿದೆ, ಇದು ಮನಸ್ಸನ್ನು ಹಗುರಗೊಳಿಸುತ್ತದೆ ಮತ್ತು ನೀವು ಉಲ್ಲಾಸ ಮತ್ತು ಲಘುತೆಯನ್ನು ಅನುಭವಿಸುವಿರಿ. ಔಷಧಿಗಳ ಬದಲಿಗೆ ಯೋಗ, ಧ್ಯಾನ ಮತ್ತು ಜೀವನಶೈಲಿಯ ಬದಲಾವಣೆಗಳು ನಿಮಗೆ ದೈಹಿಕ ಶಕ್ತಿಯನ್ನು ನೀಡುತ್ತದೆ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಏನನ್ನು ಖರೀದಿಸುತ್ತೀರಿ ಮತ್ತು ಮಾರಾಟ ಮಾಡುತ್ತೀರಿ, ಎಲ್ಲದರಲ್ಲೂ ನೀವು ಲಾಭವನ್ನು ಪಡೆಯುತ್ತೀರಿ.
ಧನು ರಾಶಿ:
ಈ ವಾರ ಅಹಿತಕರ ಬದಲಾವಣೆಗಳು ನಡೆಯಲಿವೆ. ಆದಾಯದಲ್ಲಿ ಇಳಿಕೆ ಕಂಡುಬರಲಿದೆ. ಅನಗತ್ಯ ಖರ್ಚು ಇರುತ್ತದೆ. ವ್ಯಯಿಸುವ ಪರಿಸ್ಥಿತಿ ಇರುತ್ತದೆ, ಆದರೆ ಯಾವುದೇ ಅಡೆತಡೆಯಿಲ್ಲದೆ ವ್ಯವಸ್ಥೆ ಕೂಡ ಮಾಡಲಾಗುವುದು. ಎಚ್ಚರಿಕೆಯಿಂದ ಕೆಲಸ ಮಾಡುವ ಅವಶ್ಯಕತೆಯಿದೆ. ನೀವು ರಾಜಕೀಯದಲ್ಲಿ ಯಶಸ್ಸು ಮತ್ತು ಸಹಕಾರವನ್ನು ಪಡೆಯುತ್ತೀರಿ. ಕುಟುಂಬಸ್ಥರೊಂದಿಗೆ ತಾಳ್ಮೆಯಿಂದ ವರ್ತಿಸಲು ಸೂಚಿಸಲಾಗುತ್ತದೆ. ಮನಸ್ಸನ್ನು ಶಾಂತಿಯಿಂಡಿದಲು ಸಣ್ಣ ಪ್ರಯಾಣ ಬೆಳೆಸಲು ಸೂಚಿಸಲಾಗುತ್ತದೆ.
ಮಕರ ರಾಶಿ:
ಈ ವಾರ ಕುಟುಂಬದಲ್ಲಿ ಸಿಹಿ ಘಟನೆಗಳು ನಡೆಯಲಿವೆ. ನಿಮ್ಮ ಪೂರ್ವಜರ ಬಗ್ಗೆ ಸಂಶೋಧನೆಗೆ ಧುಮುಕುತ್ತೀರಿ. ನಿಮ್ಮ ಮನಸ್ಸಿನ ಆಲೋಚನೆಗಳು ಕೆಲವೊಮ್ಮೆ ನಿಮಗೆ ಆರ್ಥಿಕವಾಗಿ ಸದೃಢರನ್ನಾಗಿಸಬಹುದು. ನೀವು ಹೊಸ ಪೀಠೋಪಕರಣಗಳನ್ನು ಜೋಡಿಸುತ್ತಿದ್ದರೆ ಅಥವಾ ಹೋಮ್ ಆಫೀಸ್ ಅನ್ನು ಹೊಂದಿಸುತ್ತಿದ್ದರೆ ತಾಂತ್ರಿಕವಾಗಿ ಸಮಸ್ಯೆಗಳನ್ನು ಎದುರಿಸಬಹುದು. ಪರೀಕ್ಷಾರ್ಥಿಗಳಿಗೆ ಉತ್ತಮ ಸಮಯ. ಮೊತ್ತದ ಖರೀದಿ ಮತ್ತು ಮಾರಾಟ ಮಾಡಲಾಗುತ್ತಿದೆ. ಮನೆಯಲ್ಲಿ ಹಿರಿಯರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುವುದು.
ಕುಂಭ ರಾಶಿ:
ಈ ವಾರ ನಿಮ್ಮೊಂದಿಗೆ ಯಾವುದೇ ಸಂಬಂಧವಿಲ್ಲದ ಘರ್ಷಣೆಗಳಿಂದ ದೂರವಿರಲು ಸೂಚಿಸಲಾಗುತ್ತದೆ. ಕುಟುಂಬ ಅಥವಾ ಸಹೋದ್ಯೋಗಿಗಳ ನಡುವೆ ಸಾಮ್ಯತೆ ಕಾಯ್ದುಕೊಳ್ಳಿ. ಮನಸ್ತಾಪಗಳು ಎದುರಾಗಬಹುದು. ಇಂದು ನೀವು ತುಂಬಾ ಸಂತೋಷವಾಗಿರುತ್ತೀರಿ. ಮೆಚ್ಚಿನ ಕೆಲಸ. ಜೀವನದಲ್ಲಿ ಮುಂದುವರಿಯಲು ನೀವು ಇತರರ ಬೆಂಬಲವನ್ನು ತೆಗೆದುಕೊಳ್ಳುತ್ತೀರಿ, ಆದರೆ ಜಾಗರೂಕರಾಗಿರಿ. ಕೆಲವೊಮ್ಮೆ ಅತಿಯಾದ ನಂಬಿಕೆ ಹಾನಿಕಾರಕವಾಗಿದೆ. ಉತ್ತಮ ಆರೋಗ್ಯಕ್ಕೆ ಮನೆಯಲ್ಲಿ ಬೇಯಿಸಿದ ಆಹಾರವನ್ನು ಸೇವಿಸುವುದು ಉತ್ತಮ.
ಮೀನ ರಾಶಿ:
ಈ ವಾರ ಆರ್ಥಿಕವಾಗಿ ನಿಮಗೆ ಉತ್ತಮವಾಗಿರಲಿದೆ. ಹಣಕಾಶಿನ ವಿಚಾರದಲ್ಲಿ ಕೊಂಚ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಆದರೆ ಪ್ರೀತಿ ಮತ್ತು ಪ್ರಣಯದಲ್ಲಿ ಬೀಳುವ ಮೂಲಕ ನಿಮ್ಮ ವೃತ್ತಿಜೀವನವನ್ನು ಹಾಳುಮಾಡಬಹುದು. ಹಾಗಾಗಿ ನೀವು ಹುಷಾರಾಗಿರಿ. ನಿಮ್ಮ ಕೆಲವು ರಹಸ್ಯಗಳು ಎಲ್ಲರ ಮುಂದೆ ಬರುತ್ತವೆ, ಇದರಿಂದಾಗಿ ನೀವು ತುಂಬಾ ಮುಜುಗರ ಮತ್ತು ದುಃಖಿತರಾಗುತ್ತೀರಿ. ಕುಟುಂಬಸ್ಥರು ನಿಮ್ಮ ಕೆಲಸಲದಲ್ಲಿ ನಿಮಗೆ ಸಹಾಯವನ್ನು ಮಾಡಬಹುದು.
🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387