Homeಸುದ್ದಿಗಳುವಾರದ ಸತ್ಸಂಗ ಕಾರ್ಯಕ್ರಮ ; ಶರಣರು ನುಡಿದು ಸೂತಕಿಗಳಲ್ಲ

ವಾರದ ಸತ್ಸಂಗ ಕಾರ್ಯಕ್ರಮ ; ಶರಣರು ನುಡಿದು ಸೂತಕಿಗಳಲ್ಲ

ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘವು ದಿನಾಂಕ 15 ರಂದು ವಾರದ ಸತ್ಸಂಗದ ಕಾರ್ಯಕ್ರಮದಲ್ಲಿ ಪರಶಿವ ಲಿಂಗವೇ ತಾನಾದ ಶರಣರ ಮಾತು ಮಾತಿನಂತಲ್ಲ ಅವರ ಮಾತೆಂಬುದ ದಿವ್ಯ ಪ್ರಭೆಯನ್ನು ಬೀರುವ ಜ್ಯೋತಿರ್ಲಿಂಗ ನಾದ ಬಿಂದು ಕಳಾತೀತವಾದ ನಿರವಯ ನಿಕಲ ಲಿಂಗ ಆದ ಕಾರಣ ಪರಶಿವನೆ ತಾನಾದ ಶರಣರ ನುಡಿ ಪರಶಿವನುಡಿ , ಶರಣರು ನುಡಿದರೂ ಅವರು ಶಬ್ದ ಸೂತಕಿಗಳಲ್ಲ ಜಗಕ್ಕೆ ಅರಿವಿನ ಬೆಳಗನೀವ ಜ್ಯೋತಿರ್ಲಿಂಗದ ನುಡಿಯೇ ಶರಣರ ನುಡಿ ಎಂದು ಸುನಿತಾ ನಂದೆಣ್ಣವರ ಅವರು ತಮ್ಮ ವಚನ ವಿಶ್ಲೇಷಣೆಯಲ್ಲಿ ಹೇಳಿದರು

ಉಮಾ ಘೀವಾರಿಯವರು ದಾನ ಎಂಬುದು ಅತ್ಯಂತ ಶ್ರೇಷ್ಠವಾದುದ್ದಾಗಿದು ನಾವು ಬಳಸಿ ಬಿಟ್ಟ ವಸ್ತುಗಳನ್ನು ಕೊಡುವುದು ದಾನವಾಗುವುದಿಲ್ಲ ಬಡವರಿಗೆ ಏನು ಅತ್ಯಂತ ಅವಶ್ಯಕವಾಗಿದೆ ಅದನ್ನು ಅರಿತು ನೀಡಬೇಕು ಕುಟುಂಬವನ್ನು ಹೇಗೆ ಅನನ್ಯವಾಗಿ ಪ್ರೀತಿಸುತ್ತೇವೆಯೋ ಹಾಗೆ ದೇವರನ್ನು ಕೂಡಾ ಅನನ್ಯವಾಗಿ ಪ್ರೀತಿಸಬೇಕು. ಅನನ್ಯ ಪ್ರೀತಿಯೇ ಭಕ್ತಿಯ ಸ್ವರೂಪವಾಗಿದೆ ಎಂದು ಹೇಳಿದರು.

ಲಲಿತಾ ರುದ್ರಗೌಡರ ಅವರು ತಮ್ಮ ವಚನ ವಿಶ್ಲೇಷಣೆಯಲ್ಲಿ ನುಡಿದರೆ ಮುತ್ತಿನ ಹಾರದಂತೆ ಇರಬೇಕು ಮುಗ್ದ ಮಗುವಿನ ಮಾತುಗಳು ಮುತ್ತು ಸುರಿದಂತೆ ಹಾಗೆ ನಾವು ಕೂಡಾ ನಿರ್ಮಲ ಮನಸ್ಸಿನಿಂದ ಪ್ರೀತಿಯಿಂದ ಸದುವಿನಯದಿಂದ ಮಾತನಾಡಬೇಕು ಇನ್ನೊಬ್ಬರಿಗೆ ನೋವಾಗದಂತೆ ಮಾತನಾಡಬೇಕು, ದೇವರೇ ಮೆಚ್ಚುವಂತೆ ಮಾತನಾಡಬೆಕೆಂದು ಹೇಳಿದರು.

ವಸಂತಕ್ಕಾ ಗಡ್ಕರಿ, ನಾಗರತ್ನಾ ಪಾಟಿಲ ಮಹಾದೇವ ಕೊರಿಯವರು ವಚನ ಗಾಯನ ಮಾಡಿದರು, ಪ್ರೇಮಾ ಪುರಾಣಿಕ ಮಠ, ಮೋಹನ್ ಮುನವಳ್ಳಿ, ಅಧ್ಯಕ್ಷರು ಎಸ್ ಜಿ ಸಿದ್ನಾಳರು ವಚನ ವಾಚನ ಮಾಡಿದರು.

ಶರಣರಾದ ಕಟ್ಟಿಮನಿಯವರು ನಿರೂಪಣೆ ಮಾಡಿದರು, ಶೈಲೇಜಾ ಮನವಳ್ಳಿ, ಲಲಿತಾ ರುದ್ರಗೌಡರ, ಸುನಿತಾ ನಂದೆಣ್ಣವರ, ಪ್ರಾರ್ಥನೆ ನಡೆಸಿಕೊಟ್ಟರು, ಕಾರ್ಯದರ್ಶಿ ಶಂಕರ ಶೆಟ್ಟಿ, ಶರಣರಾದ ಏಣಿಗಿ ಮಠ , ರುದ್ರಗೌಡರ, ಪಾಟಿಲ, ಘೀವಾರಿಯವರು ಮತ್ತು ಶರಣೆ ಜಯಶ್ರೀ ಮುಗಳಿ ಅವರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group