ತಹಶೀಲ್ದಾರ್ ಮೇಲೆ ಹಲ್ಲೆಗೈದವರ ಗಡಿಪಾರಿಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಸರ್ವ ಸಮುದಾಯ ಒಕ್ಕೂಟದಿಂದ ಹುಮನಾಬಾದನಲ್ಲಿ ಪ್ರತಿಭಟನೆ

Must Read

ಬೀದರ್: ತಹಶೀಲ್ದಾರ ಅವರ ಮೇಲೆ ಮಾರಣಾಂತಿಕ ಹಲ್ಲೆಗೈದವರ ಗಡಿಪಾರಿಗೆ ಆಗ್ರಹಿಸಿ, ಕಲ್ಯಾಣ ಕರ್ನಾಟಕ ಸರ್ವ ಸಮುದಾಯಗಳ ಒಕ್ಕೂಟದಿಂದ ಜಿಲ್ಲೆಯ ಹುಮನಾಬಾದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಉಪತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಬಾಬುರಾವ ಪೋಚಂಪಳ್ಳಿ ದುಷ್ಕೃತ್ಯ ಗೈದವರನ್ನು ಗೂಂಡಾ ಕಾಯ್ದೆ ಅಡಿ ಗಡಿಪಾರು ಮಾಡುವುದರ ಜೊತೆಗೆ ಹಲ್ಲೆಗೈದ ವ್ಯಕ್ತಿಗಳು ತಹಶೀಲ್ದಾರ ಡಾ.ಪ್ರದೀಪಕುಮಾರ ಹಿರೇಮಠ ಸೇರಿ 25 ಜನರ ವಿರುದ್ಧ ದಾಖಲಿಸಿದ ಅಟ್ರಾಸಿಟಿ ಕೇಸ್ 3 ದಿನಗಳೊಳಗೆ ವಾಪಸ್ ಪಡೆಯದಿದ್ದರೇ ರಾಜ್ಯಾದ್ಯಂತ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಡಾ.ಬಸವರಾಜ ಸ್ವಾಮಿ ಎಚ್ಚರಿಸಿದರು.

ಮಲ್ಲಿಕಾರ್ಜುನ ಮಾಶೆಟ್ಟಿ, ಮಹೇಶ ಅಗಡಿ, ಮಲ್ಲಿಕಾರ್ಜುನ ಸೀಗಿ, ಗುರುಲಿಂಗ ಭಾವಿ, ಸಿದ್ದು ಚಕಪಳ್ಳಿ, ಸುನೀಲ ಡಿ.ಎನ್.ಪತ್ರಿ, ದತ್ತು ಪರೀಟ್ ಮತ್ತಿತರರಿದ್ದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group