ಸಿಂದಗಿ: ಈ ದೇಶದಲ್ಲಿ ಡಾ. ಅಂಬೇಡ್ಕರ ಸಂವಿಧಾನದ ಅಡಿಯಲ್ಲಿ ಮಹಿಳೆಯರಿಗೆ ಪ್ರತಿಶತ 50 ರಷ್ಟು ಮಿಸಲಾತಿ ಕೊಟ್ಟಿದ್ದು, ಸಂವಿಧಾನದ ಆಸೆಯನ್ನು ಎತ್ತಿ ಹಿಡಿದಿದ್ದು ಕಾಂಗ್ರೆಸ್ ಪಕ್ಷವಾಗಿದೆ ಅದನ್ನು ದುರುಪಯೋಗ ಪಡಿಸಿಕೊಂಡು ಗರ್ಬಿಣಿಯರ ಮೊಟ್ಟೆ ಕಳ್ಳಿ ಸಚಿವೆ ಶಶಿಕಲಾ ಜೊಲ್ಲೆ ಅವರು ಮಹಿಳೆಯರಿಗೆ ಯಾವ ನ್ಯಾಯ ಕೊಡುತ್ತಾರೆ ಈ ಕ್ಷೇತ್ರದಲ್ಲಿ ಅರ್ಧದಷ್ಟು ನಿರ್ಣಾಯಕ ಮಹಿಳಾ ಮತದಾರರಿದ್ದು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ ಕುಟುಕಿದರು.
ಪಟ್ಟಣದ ಸಂಗಮ ಹೋಟೇಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೀಸಲಾತಿ ನೀಡದಿದ್ದರೆ ಮಹಿಳೆಯರು ರಾಜಕೀಯ, ಶೈಕ್ಷಣಿಕವಾಗಿ ಮುಂದೆ ಬರದೇ ಮನೆಯಲ್ಲಿಯೇ ಇರಬೇಕಾಗಿತ್ತು ಆದರೆ ಕಾಂಗ್ರೆಸ್ ಪಕ್ಷ ಕೊಡುಗೆ ನೀಡಿದೆ. ಕಾಂಗ್ರೆಸ್ ಪಕ್ಷ ಈ ದೇಶಕ್ಕಾಗಿ ಚಳವಳಿ ಮಾಡಿ ತ್ಯಾಗ, ಬಲಿದಾನ, ಹುತಾತ್ಮರ ಪಕ್ಷವಾಗಿದೆ. ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೆ ತ್ಯಾಗ ಮಾಡಿದ ಇಂದಿರಾಗಾಂಧಿ ಅವರಂತೆ ಪ್ರಿಯಾಂಕಾಗಾಂಧಿ ಅವರು ಮಹಿಳೆಯರಿಗೆ 40 ರಷ್ಟು ಮೀಸಲಾತಿ ದೊರಕಿಸಿಕೊಟ್ಟ ಮೊದಲ ಸ್ಥಾನದಲ್ಲಿದ್ದಾರೆ. ಈ ದೇಶದಲ್ಲಿ ಮಹಿಳಾ ಶಕ್ತಿ ನಿರ್ಣಾಯಕ ಪಾತ್ರ ವಹಿಸಲಿದೆ. ಬಿಜೆಪಿಯ ಸ್ವಚ್ಛ ಭಾರತ ಯೋಜನೆ ಹಳ್ಳ ಹಿಡಿದಿದೆ. ಮಹಿಳೆಯರಿಗೆ ಶೌಚಾಲಯ ನೀಡುವಲ್ಲಿ, ಬೇಟಿ ಪಢಾವೋ ಬೇಟಿ ಬಚಾವೋ ಬರೀ ಜಾಹೀರಾತುಗಳಿಗೆ ಸೀಮೀತಗೊಳಿಸಿದೆ ವಿನಃ ಜಾರಿಗೆ ತರದೇ ದುಬಾರಿ ಭಾರತವನ್ನು ನೀಡಿ ಕಳೆದ ಬಾರಿ ಚುನಾವಣೆಯಲ್ಲಿ ಮೋದಿಜಿ ಅವರು ಕಮಲ ಕೈಯಲ್ಲಿ ಕೊಡಿ ಎಂದು ಹೇಳಿ ಸುಳ್ಳಿಗೆ ಇನ್ನೊಂದು ಹೆಸರೇ ಬಿಜೆಪಿ ಇಂತಹ ಸುಳ್ಳಿನ ಸರಕಾರಕ್ಕೆ ಮತ ಕೇಳುವ ನೈತಿಕತೆಯಿಲ್ಲ ಎಂದು ದೂರಿದರು.
ಪಟ್ಟಣದ್ಭದಲ್ಲಿ ಜಿಲ್ಲಾಧ್ಯಕ್ಷೆ ವಿದ್ಯಾ ರಾಣಿ ತುಂಗಳ, ಶಾಂಭವಿ, ಸುಜಾತ, ಸುಮತಿ, ಜಯಲಕ್ಷ್ಮೀ, ಜಯಶ್ರೀಭಾರತಿ, ಭಾರತಿ ಹೊಸಮನಿ, ಶಾರದಾ ಬೆಟಗೇರಿ, ಸಂಜನಾ ಬಜಂತ್ರಿ ಸೇರಿದಂತೆ ಅನೇಕರಿದ್ದರು.