Homeಲೇಖನಎಮೋಶನಲ್ ಕಂಟಾಜಿಯನ್( Emotional contagion) ಭಾವನೆಗಳ ಸೋಂಕು; ಏನಿದು ?

ಎಮೋಶನಲ್ ಕಂಟಾಜಿಯನ್( Emotional contagion) ಭಾವನೆಗಳ ಸೋಂಕು; ಏನಿದು ?

ಹತ್ತಿರದವರಿಗೆ ಕೊರೊನಾ ಬಂದಿತು ಅಂತ ಕೇಳಿದ ಕೂಡಲೇ ನಿಧಾನವಾಗಿ ಗಂಟಲ ನೋವು ಶುರುವಾಗುತ್ತದೆ, ತಲೆನೋವು , ಮೈಕೈ ನೋವು ಸಹಾ … ಸಣ್ಣಗೆ ಜ್ವರ ಬಂದಿದೆ ಅನಿಸುತ್ತದೆ. ಮಾರನೆಯ ದಿನ ಅಥವ ಸ್ವಲ್ಪ ಕಡಿಮೆ ಆಗಿರುತ್ತದೆ

ಮದುವೆಮನೆಯಲ್ಲಿ ಇನ್ನೇನು ಮದುಮಗಳನ್ನು ಒಪ್ಪಿಸುವ ಸಮಯ , ಅಮ್ಮ ಬಿಕ್ಕಳಿಸಿ ಅಳಲಾರಂಭಿಸುತ್ತಾಳೆ. ಅಪ್ಪ ಕಣ್ಣಂಚನ್ನು ಒರೆಸಿಕೊಳ್ಳುತ್ತಾನೆ. ಇದನ್ನು ನೋಡಿ ಮಗಳು ಅಳಲಾರಂಭಿಸುತ್ತಾಳೆ. ಅಲ್ಲಿದ್ದ ಇನ್ನಿತರರ ಕಣ್ಣು ಸಹಾ ತೇವವಾಗುತ್ತದೆ.

ಯಾವದೋ ಸಿನಿಮಾ ನೋಡುತ್ತಾ ನೋಡುತ್ತಾ ಅಲ್ಲಿನ ಭಾವನೆಗಳಲ್ಲಿ ನಾವೂ ಪಾತ್ರವಾಗಿ ಹೋಗಿರುತ್ತೇವೆ.

ಆಸ್ಪತ್ರೆಯಲ್ಲಿ ಯಾರೋ ಹುಷಾರಿಲ್ಲದವರನ್ನು ನೋಡಿದ ಕೂಡಲೇ ನಮಗೂ ಅದೇ ರೀತಿ ಅನುಭವವಾದಂತೆ ಭಾಸ ಆಗುತ್ತದೆ.

ಯಾಕೆ ಹೀಗೆ?

ದೇಹಕ್ಕೆ ಸಂಬಂಧ ಪಟ್ಟ ವೈರಸ್ಗಳು ಒಬ್ಬರಿಂದ ಒಬ್ಬರಿಗೆ ಹರಡುವುದು ಸರಿ.

ಆದರೆ ಭಾವನೆಗಳು ಹೇಗೆ ಹರಡುತ್ತವೆ . ಹರಡಿದ ಭಾವನೆಗಳು ನಮ್ಮ ದೇಹದ ಮೇಲೆ ಹೇಗೆ ಮತ್ತು ಏಕೆ ಹರಡುತ್ತವೆ?

ನಾವು ಯಾವುದೇ ವ್ಯಕ್ತಿ ಇಂದ ಪ್ರೇರಣೆ ಪಡೆದರೆ, ಆಲೋಚನೆ, ಅಥವ ಅದೇ ವ್ಯಕ್ತಿಯ ಹಾವಭಾವ ಅಥವ ವರ್ತನೆಗಳು ನಮ್ಮಲ್ಲೂ ಕಂಡು ಬರುತ್ತವೆ .

ಏಕೆ?

ಈ ವರ್ತನೆ,ಭಾವನೆ, ಹಾವಭಾವಗಳೂ ವೈರಸಿನಂತಹ ಸೂಕ್ಷ್ಮ ಜೀವಿಯನ್ನು ಹೊಂದಿವೆಯೇ? ಇದ್ದರೆ ಅದು ಹೇಗೆ ಹರಡುತ್ತದ

ಈ ಭಾವನೆಗಳು ಮತ್ತು ವರ್ತನೆಗಳು ಒಬ್ಬರಿಂದ ಒಬ್ಬರಿಗೆ ಹರಡುವ ಪ್ರಕ್ರಿಯೆಗೆ ಎಮೋಶನಲ್ ಕಂಟಾಜಿಯನ್ ಅಥವ ಭಾವನೆಗಳ ಸೋಂಕು ಎಂದು ಕರೆಯುತ್ತಾರೆ.

ಈ ಬಗ್ಗೆ ಅಧ್ಯಯನ ನಡೆಸುತ್ತಿರುವ ವಿಜ್ಞಾನಿಗಳ ಪ್ರಕಾರ
ಮಿರರ್ ನ್ಯೂರಾನ್ ಇದಕ್ಕೆ ಕಾರಣ.

ಒಂದು ಪ್ರಯೋಗದಲ್ಲಿ ಮಂಗಗಳ ಎರಡು ಗುಂಪನ್ನು ಮಾಡಿ, ಒಂದು ಗುಂಪಿಗೆ ಒಂದು ಬಗೆಯ ಇಲೆಕ್ಟ್ರಿಕಲ್ ಶಾಕ್ ಕೊಟ್ಟರು ಆಗ ಅವುಗಳ ನರಮಂಡಲದಲ್ಲಿ ಆದಂತಹ ಬದಲಾವಣೆಯೇ ಯಾವ ಶಾಕ್ ಕೊಡದ ಮಂಗಗಳ ಗುಂಪಿನ ನರವ್ಯೂಹದಲ್ಲಿಯೂ ಆಯಿತು.

ನೀವು ಬೇಕಾದರೆ ನೋಡಿ ಯಾರಾದರೂ ನಕ್ಕರೆ ಪ್ರತಿಯಾಗಿ ನೀವೂ ನಗುತ್ತೀರಾ.

ನಿಮ್ಮ ಸ್ನೇಹಿತರು ಇಲ್ಲ ಕುಟುಂಬದವರೋ ಬೇಸರ ಅಥವ ದುಃಖದಲ್ಲಿ ಮುಳುಗಿದೆ ನೀವೂ ಸಹಾ ಅತ್ತದ್ದು ಇದೆ.

ಕೆಲವರಂತೂ ಮನುಷ್ಯರಿರಲಿ ಪ್ರಾಣಿಗಳ ಭಾವನೆಯನ್ನೂ ಸಹಾ ಮಿರರ್ ಮಾಡಬಲ್ಲರು. ಸಾಕು ಪ್ರಾಣಿ ನೋವಿನಿಂದ ಕೂಗಿದರೆ ಸಾಕಿದವರೂ ಅತ್ತದ್ದುಂಟು

ಇಲ್ಲಿಯವರೆಗಿನ ಅಧ್ಯಯನಗಳ ಪ್ರಕಾರ ಮನುಷ್ಯನ ಅದ್ಭುತ ಶಕ್ತಿಗಳಲ್ಲಿ ಈ ಎಮೋಶನಲ್ ಕಂಟಾಜಿಯನ್ ಸಹಾ ಒಂದು.

ನಮಗೆ ಗೊತ್ತಿಲ್ಲದೆ ಎದುರಿರುವ ಸನ್ನಿವೇಶ, ವ್ಯಕ್ತಿ ಅಥವ ಓದುತ್ತಿರುವ ಕಾದಂಬರಿ ಇವುಗಳಲ್ಲಿ ಮುಳುಗಿ ಅರಿವಿಲ್ಲದೆ ಮನಸು ಭಾರವೋ ಇಲ್ಲ ಹಗುರವೋ ಆಗುತ್ತದೆ. ವಿಸ್ಮಯವೆಂದರೆ ಈ ಪ್ರಕ್ರಿಯೆ ಜಾಗೃತ ಮತ್ತು ಸುಪ್ತ ಮನಸಿನಲ್ಲಿಯೂ ನಡೆಯುತ್ತದೆ.

ಇನ್ನೊಂದು ಪ್ರಯೋಗದಲ್ಲಿ ಸೋಶಿಯಲ್ ಈ ಎಮೋಶನಲ್ ಕಂಟಾಜಿಯನ್ ಹೇಗೆ ಕೆಲಸ ಮಾಡುತ್ತದೆ ಎಂದು ಪರಿಶೀಲಿಸಲು ಪ್ರಯೋಗ ಒಂದನ್ನು ಮಾಡಿದರು.

ಹೌದು ನೆಗೆಟೀವ್ ಪೋಸ್ಟ್ಗಳನ್ನ ವೀಕ್ಷಿಸಿದ ಬಳಕೆದಾರರು ಹೆಚ್ಚು ಹೆಚ್ಚು ನೆಗೇಟೀವ್ ಎಮೋಶನ್ ಇರುವ ಪೋಸ್ಟ್ ಗಳನ್ನ ಮಾಡಿದರು. ಅದೇ ರೀತಿ ಪಾಸಿಟೀವ್ ಎಮೋಶನ್ ಸ್ಟೇಟಸ್ ಗಳನ್ನು ನೋಡಿದವರು ಹೆಚ್ಚು ಪಾಸಿಟೀವ್ ಪೋಸ್ಟ್ ಗಳನ್ನು ಮಾಡಿದರು.

ಸಿನೆಮಾಗಳಲ್ಲಿ ನೋಡಿದವರಿಗೆ ಈ ಅನುಭವ ಆಗಿರಬಹುದು ಯಾರಾದರೂ ಫ್ರೀಜರ್ ನಲ್ಲಿ ಒದ್ದಾಡುತ್ತಿದ್ದಂತೆ ವೀಕ್ಷಕರಿಗೂ ಅದೇ ಬಗೆಯ ತಣ್ಣಗೇ ಫ್ರೀಜ್ ಆದಂತಹ ಅನುಭವ ಆಗಿರುತ್ತದೆ.

ಇದನ್ನು ಫಿಜಿಯಾಲಾಜಿಕಲ್ ಸಿಂಕ್ರನೈಜೇಶಪ್ ಎಂದು ಕರೆಯುತ್ತಾರೆ . ಈ ಬಗ್ಗೆಯೂ ಅಧ್ಯಯನ ನಡೆದಿದೆ. ಮತ್ತು ಇದು ನಿಜ ಎಂದು ದೃಢಪಟ್ಟಿದೆ

ಇದೆಲ್ಲಾ ಯಾಕೆ ಹೇಳಿದೆ ಅಂದರೆ

ಈ ಭಯಭೀತ ಸಮಯದಲ್ಲಿ ನಾವೂ ಭಯಭೀತರಾಗುವುದ ಮತ್ತು ದೇಹವೂ ಅದಕ್ಕೆ ಪ್ರತಿಕ್ರಿಯಿಸುವುದು ಸಹಜ.

ಕೆಲವೊಮ್ಮೆ ಎಮೋಶನಲ್ ಕಂಟಾಜಿಯನ್ ಆಗುವುದು ಒಳ್ಳೆಯದೇ. ಇದು ನಮ್ಮ ಸಾಮಾಜಿಕ ಬಂಧವನ್ನು ತೋರಿಸುತ್ತದೆ. ಒಂದು ಹಂತದವರೆಗೆ ಇತರರ ನೋವು ನಲಿವು ಮತ್ತು ಕಷ್ಟಕ್ಕೆ ಸ್ಪಂದಿಸುವ ಈ ಗುಣ ಎಂಪತಿ ಎಂದೂ ಕರೆಯಬಹುದು. ಒಂದು ಸಮಯದವರೆಗೆ ಇದ ನಮಗೆ ಎಚ್ಚರಿಕೆ ಕೂಡ.

ಆದರೆ ಎಮೋಶನಲ್ ಕಂಟಾಜಿಯನ್ ಅಪಾಯಕಾರಿ ಆಗುವುದು ಯಾವಾಗ ಅಂದರೆ ಇತರರ ಎಮೋಶನ್ ನಮ್ಮಲ್ಲಿ ಅನಗತ್ಯ ಭೀತಿ,ಆತಂಕ, ದ್ವೇಷ ಮತ್ತಿತರ ನೆಗೆಟೀವ್ ಭಾವನೆಗಳನ್ನು ಬಿತ್ತುವ ಕೆಲಸ ಮಾಡತೊಡಗಿದಾಗ.

ನಾವೂ ಆ ಭಾವನೆಗಳನ್ನು ಇನ್ನಷ್ಟು ಬೆರೆಸಿ ಮತ್ತಿತರರಿಗೆ ಹಂಚತೊಡಗಿದಾಗ , ಅದೊಂದು ಸಮೂಹ ಸನ್ನಿಯಾಗಿ ಬದಲಾಗಿ ಯಾವದು ಸತ್ಯ, ಸುಳ್ಳು ಎಂಬ ತಾರ್ಕಿಕ ಅರಿವು ಇಲ್ಲದೆ ಆಕ್ರೋಶವಾಗಿ ಯಾರನ್ನೋ ( ಮಾನಸಿಕವಾಗಿ , ದೈಹಿಕವಾಗಿ)ಬಲಿ ಪಡೆದಾಗ.

ಇಂತಹ ಅಪಾಯಕಾರಿ ಎಮೋಶನಲ್ ಕಂಟಾಜಿಯನ್ ವೈರಸ್ ಅನ್ನು ನಮ್ಮ ಮನಸಿಗೆ ಧಾಳಿ ಮಾಡದ ಹಾಗೆ ಮಾಡಬೇಕೆಂದರೆ

ಯಾವುದೇ ನೆಗೆಟೀವ್ ವಿಷಯಗಳನ್ನು ಓದಿದ, ನೋಡಿದ ಕೂಡಲೆ ಕಿರುಚಿ ,ಕೂಗಾಡಬಯಸುವ ನಮ್ಮ ಚಿಂಪ್ ಮೈಂಡ್ ( ಮಂಗನ ಮನಸು) ಅನ್ನು ಸುಮ್ಮನಿರಿಸಿ ಮನುಷ್ಯನ ಮನಸನ್ನು ಎಬ್ಬಿಸಬೇಕು. ಮನುಷ್ಯನ ಮನಸು ಸರಿ ತಪ್ಪುಗಳ ವಿಶ್ಲೇಷಣೆ ಮಾಡುತ್ತದೆ.

ಚಿಂಪ್ ಮೈಂಡ್ ಅಷ್ಟು ಸುಲಭವಾಗಿ ಸುಮ್ಮನಾಗುವುದಿಲ್ಲ. ಅದನ್ನು ಗಮನಿಸಿ ಅದು ಬದಲಾಗುವ ಹಂತಹಂತದ ಅರಿವು ಮೂಡಿಸಿಕೊಂಡು ನಂತರ ಮಂಗನ ಮನಸಿನ ಆತಂಕಗಳನ್ನು ಪ್ರಶ್ನಿಸಿ ಸವಾಲು ಹಾಕಬೇಕು.

ನಮ್ಮಲ್ಲಿ ಎರಡು ಮನಸ್ಸುಗಳು ಒಂದು ಅನಗತ್ಯ ನೆಗೆಟಿವ್ ಭಾವನೆಗಳಿಗೆ ತೀವ್ರವಾಗಿ ಸ್ಪಂದಿಸುವ ಮನಸು ( ದುರ್ಯೋಧನ ಅಂದುಕೊಳ್ಳಿ) ಮತ್ತು ಆ ಸಮಯದಲ್ಲಿ ಅಷ್ಟು ತೀವ್ರ ಭಾವನೆ ಒಳ್ಳೆಯದೇ ಎಂದು ತೊಳಲಾಡುವ ಮನವು (ಅರ್ಜುನನ ಮನಸು) ಈಗ ಅರ್ಜುನನ ಪ್ರಶ್ನೆ ಗಳಿಗೆ ಉತ್ತರ ಕೊಟ್ಟು ಅವನನ್ನು ಸರಿಯಾದ ಹಾದಿಯಲ್ಲಿ ನಡೆಸುವ ಕೆಲಸ ಕೃಷ್ಣನದು

ಆ ಕೃಷ್ಣ ನೇ ನಮ್ಮ ವಿವೇಕ.

ಆ ವಿವೇಕ ಒಂದು ನಮ್ಮ ಜೊತೆಗೆ ಇದ್ದರೆ ಯಾವುದೇ ಎಮೋಶನಲ್ ಕಂಟಾಜಿಯನ್ ನಮ್ಮ ಮನಸಿನ ಜೊತೆ ಆಟವಾಡಲಾರದು.
ಆದರೆ ಬಹಳಷ್ಟು ಸಮಯಗಳಲ್ಲಿ ನಮ್ಮ ವಿವೇಕವನ್ನು ಬದಿಗೊತ್ತಿ ಯಾರದ್ಧೋ ದ್ವೇಷ, ಆಕ್ರೋಶಗಳ ಭಾವನೆಗಳಿಗೆ ಪಕ್ಕಾಗಿ ಬಲಿಯಾಗಿರುತ್ತೇವೆ. ನಮಗೇ ಗೊತ್ತಿಲ್ಲದೆ ಯಾವದೋ ಗುಂಪಿನ ದಾಳವಾಗಿರುತ್ತೇವೆ.

ಆದ್ದರಿಂದ ವಿಶೇಷವಾಗಿ ಈ ಪ್ಯಾಂಡಿಮಿಕ್ ಸಮಯದಲ್ಲಿ ಕೊರೋನಾ ಸೋಂಕಿನಿಂದ ಮಾತ್ರವಲ್ಲ , ನೆಗೆಟೀವ್ ಭಾವನೆಗಳ ಸೋಂಕನ್ನೂ ದೂರವಿಡೋಣ. ಜನರ ಭಾವನೆಗಳಿಗೆ ನೆಗೆಟೀವ್ ಸೋಂಕು ಹೆಚ್ಚಿಸುವ ಜನ, ಮಾಧ್ಯಮ , ರಾಜಕಾರಣಿ, ಎಲ್ಲವುಗಳಿಂದಲೂ ದೂರವಿರೋಣ.

ಸುರಕ್ಷಿತರಾಗಿರಿ………….


ಎಮ್ ಎಲ್ ಮೀಶಿ, ಮೂಡಲಗಿ

RELATED ARTICLES

Most Popular

error: Content is protected !!
Join WhatsApp Group