ಸ್ಯಾಮ್ ಪಿತ್ರೊಡಾ ಉದ್ದೇಶವೇನು ? ದೇಶ ವಿಭಜನೆಯೇ ?

Must Read

ಮೇಜು ಗುದ್ದಿ ಗುದ್ದಿ ಸಂಸತ್ತಿನಲ್ಲಿ ನೀವು ಆರ್ಯರು ಹೊರಗಿನಿಂದ ಬಂದವರು ಅಂತ ಅರಚಾಡಿದ್ದ ದಕ್ಷಿಣ ಆಫ್ರಿಕಾ ಮೂಲದ ಖರ್ಗೆ ಜಿ ಅವರು ರಾಹುಲ್ ನ ಸ್ಯಾಮ್ ಅಂಕಲ್ ಹೇಳಿದ ಮಾತನ್ನು ಯಾವ ರೀತಿ ಸಮರ್ಥಿಸುವರೊ ಅಂತ ಬಿಳಿಯ ಅಂಟಾನಿಯೋ ಮೈನೊ ಅವರೆ ಬಲ್ಲರು.

ಇತ್ತೀಚೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿತ್ರಾರ್ಜಿತ ಆಸ್ತಿಗಳಿಗೆ 55% ತೆರಿಗೆ ವಿಧಿಸುವುದಾಗಿ ಹೇಳಿಕೆ ನೀಡಿದ್ದ ರಾಜೀವ ಫಿರೊಜ್ ಪರಮಾಪ್ತ ಹಾಗೂ ರಾಹುಲ್ ರಾಜೀವನ ಪ್ರೀತಿಯ ಅಂಕಲ್ ಹಾಗೂ ಮಾರ್ಗದರ್ಶಕ ಸ್ಯಾಮ್ ಪಿತ್ರೊಡಾ   ಈಗ ಭಾರತದ ಪೂರ್ವದ ಜನ ಚೈನಾದವರಂತೆ, ಪಶ್ಚಿಮದ ಜನ ಅರಬರಂತೆ, ಉತ್ತರದ ಜನ ಬಿಳಿಯರಂತೆ, ದಕ್ಷಿಣದ ಜನ ನಿಗ್ರೊಗಳಂತೆ ಕಾಣುತ್ತಾರಂತೆ ಎಂಬ ಭಾರತೀಯ ಎಂಬ ಜನಾಂಗವೆ ಇಲ್ಲ ಇದು ಸರ್ವ ಜನಾಂಗಗಳ ಮಿಶ್ರಿತ ಸಮೂಹ ಎನ್ನವಂತೆ ದೇಶದಲ್ಲಿ ಒಡಕು ಮೂಡುವಂತೆ ಹೇಳಿಕೆ ನೀಡಿದ್ದಾನೆ.

ಇವನ ಈ ಮಾತುಗಳು ಈಗಾಗಲೆ ಅರುಣಾಚಲ ಪ್ರದೇಶ ಸೇರಿದಂತೆ ಈಶಾನ್ಯ ಭಾರತದ ಮೇಲೆ ಹಕ್ಕು ಸಾಧಿಸುತ್ತಿರುವ ಚೀನಾ ಗೆ ನೈತಿಕ ಹಾಗೂ ರಾಜತಾಂತ್ರಿಕ ಬೆಂಬಲ ನೀಡಿದಂತಾಗುತ್ತದೆ. ಈ ಹಿಂದೆ ಇದೇ ಸ್ಯಾಮ್   ಪಿತ್ರೋಡಾ, ಸೋನಿಯಾ, ರಾಹುಲ್ ರ ನೇತೃತ್ವದಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಹಾಗೂ ಚೀನಾದ ಕಮ್ಯೂನಿಷ್ಟ ಪಕ್ಷದೊಂದಿಗೆ ಒಂದು ಒಪ್ಪಂದವಾಗಿತ್ತು. ಈಗ ಬಂದ ಈ ಮಾತುಗಳು ಭಾರತದ ವಿರುದ್ಧ ಇವರು ಮಾಡಿರುವ ಒಳಸಂಚಾ? ಎಂಬ ಶಂಕೆಯಿದೆ.

ಈಗಾಗಲೆ ಅರಬರಂತೆ ವರ್ತಿಸುತ್ತಿದ್ದ ದೇಶದ ಮುಸ್ಲಿಮರು ಇತ್ತೀಚೆಗೆ ನಾವು ಸನಾತನ ಧರ್ಮದಿಂದ ಮತಾಂತರ ಆದವರು ಎಂಬ ಸತ್ಯವನ್ನು ಅರಿತು ಸೌಹಾರ್ದತೆಯೆಡೆಗೆ ಮುಖ ಮಾಡಿದ್ದರು ಆದರೆ ಈತ ನೀಡಿರುವ ಹೇಳಿಕೆಯು ಅವರಲ್ಲಿ ತಾವು ಅರಬ್ ಮೂಲದವರು ಎಂಬ ಭಾವನೆ ಮೂಡುವಂತೆ ಮಾಡಿ ಈ ನೆಲದ ಆಚರಣೆಗಳ ವಿರುದ್ಧ ಮತ್ತಷ್ಟು ಅಸಹನೆ ಬೆಳೆಸಿಕೊಂಡು ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಮೂಡುತ್ತಿದ್ದ ಮತ್ತೊಂದು ವಿಭಜನೆಗೆ ಧ್ವನಿ ಏಳುತ್ತಾ ದೇಶದ ಶಾಂತಿ ನಾಶ ಮಾಡುವ ಪ್ರಯತ್ನವಾ?

ಉತ್ತರ ಹಾಗೂ ದಕ್ಷಿಣ ಭಾಗವನ್ನು ಆರ್ಯ ದ್ರಾವಿಡ ಸಿದ್ಧಾಂತದ ಮೂಲಕ ವಿಭಜಿಸಲು ಪ್ರಯತ್ನಿಸಿ ವಿಫಲರಾಗಿ ಈ ಉತ್ತರದವರು ಬಿಳಿಯರು, ದಕ್ಷಿಣದವರು ಕರಿಯರು ಅಂತ ವರ್ಣ ಭೇದ ನೀತಿಯನ್ನು ಹುಟ್ಟು ಹಾಕುವ ಪ್ರಯತ್ನವಾ? ಜಾತಿ ಅಸ್ಪ್ರಶ್ಯತೆ ಕಡಿಮೆ ಆಗಿರುವ ಈ ಸಮಯದಲ್ಲಿ ವರ್ಣ ಅಸ್ಪ್ರಶ್ಯತೆ ಹುಟ್ಟು ಹಾಕುವ ಪ್ರಯತ್ನವಾ?

ಕಾಂಗ್ರೆಸ್ ಸದಾ ಭಾರತದ ಆಚಾರ ವಿಚಾರ ಸಂಸ್ಕೃತಿ ಸಂಪ್ರದಾಯ ಲೋಕಾರೂಢಿ ಆಚರಣೆಗಳ ವಿರುದ್ಧ ವಿಷ ಕಾರುವುದು ಇದೆ ಕಾರಣಕ್ಕೇನಾ? ದೇಶದಲ್ಲಿ ಹಿಂದೂ ಮುಸ್ಲಿಮ್, ಆರ್ಯ ದ್ರಾವಿಡ, ಹಿಂದುಳಿದ ಮುಂದುವರೆದ ಹೀಗೆ ವಿಭಜಿಸಲು ವಿಫಲವಾಗಿ ಜಾತಿ ಗಣತಿ ಅಂತ ಜಾತಿ ಆಧಾರದಲ್ಲಿ ವಿಭಜನೆಗೆ ಪ್ರಯತ್ನ. ಈಗ ಜನಾಂಗೀಯ ಆಧಾರದ ವಿಭಜನೆಯ ಕುಮ್ಮಕ್ಕು.

ಒಟ್ಟಿನಲ್ಲಿ ಈಗಿರುವ ಅನೇಕ ಸಮಸ್ಯೆಗಳ ನಡುವೆ ದೇಶವನ್ನು ಮತ್ತೆ ನಾಲ್ಕು ಮಾದರಿಯ ಜನಾಂಗೀಯ ಆಧಾರದಲ್ಲಿ ದೇಶದ ಸಾಮಾಜಿಕ ವಿಘಟನೆಯೆಡೆಗೆ ಒಯ್ಯುವ ವಿಕೃತ  ಮಾನಸಿಕತೆಯ ವಿಘಟನೆಯ ಪ್ರಯತ್ನ.

ಜನ ಜಾಗೃತವಾಗಲಿ, ದೇಶ ಉಳಿಯಲಿ.

ಮಲ್ಲಿಕಾರ್ಜುನ ಚೌಕಶಿ, ವಕೀಲರು

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group