spot_img
spot_img

ಮನ ಸೆಳೆದ ಮೈಸೂರು ಸಾಂಪ್ರದಾಯಿಕ ಶೈಲಿಯ ಚಿತ್ರಕಲಾ ಪ್ರದರ್ಶನ

Must Read

- Advertisement -

ಹಾಸನದ ಚಿತ್ಕಲಾ ಫೌಂಡೇಶನ್ ಮತ್ತು ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ, ಗದಗ ಇವರ ವತಿಯಿಂದ ಮೈಸೂರು ಸಾಂಪ್ರದಾಯಿಕ ಶೈಲಿಯ ಚಿತ್ರಕಲಾ ಶಿಬಿರ ಒಂದು ವಾರ ಹಾಸನ ವಿದ್ಯಾನಗರದಲ್ಲಿರುವ ಕಲಾಶ್ರೀ ಆರ್ಟ್ ಗ್ಯಾಲರಿಯಲ್ಲಿ ನಡೆಯಿತು.

ಶಿಬಿರದ ವ್ಯವಸ್ಥಾಪಕರು ಬಿ.ಎಸ್.ದೇಸಾಯಿ ತಮ್ಮ ನಿವಾಸವನ್ನೇ ಕಲಾ ಗ್ಯಾಲರಿಯಾಗಿಸಿದ್ದಾರೆ ನಾನು ಶಿಬಿರ ನಡೆಯುತ್ತಿದ್ದ ನಡುವೆ ಅವರ ಆಹ್ವಾನದ ಮೇರೆ ಹೋದೆನು. ಆಗ ಅವರ ಪೈಂಟಿಂಗ್ಸ್‍ಗಳು ಗೋಡೆಯನ್ನು ಅಲಂಕರಿಸಿದ್ದವು. ಅವುಗಳನ್ನು ವೀಕ್ಷಿಸುತ್ತಿರಲು ‘ಅನಂತರಾಜು, ಭಾನುವಾರ ಶಿಬಿರದ ಕಡೆಯ ದಿನ ಇದೆಲ್ಲವನ್ನು ತೆಗೆದು ಇಲ್ಲಿ ಶಿಬಿರದಲ್ಲಿ ರಚನೆಗೊಳ್ಳುವ ಚಿತ್ರಗಳನ್ನು ಪ್ರದರ್ಶನಕ್ಕೆ ಇರಿಸಲಾಗುವುದು ಎಂದರು.

ಏಪ್ರಿಲ್ 28ಕ್ಕೆ ಆರಂಭವಾದ ಶಿಬಿರ ಮೇ 4ಕ್ಕೆ ಮುಗಿದು ಈ ನಡುವೆ ನಾನು ಹೋದ ವೇಳೆ ಶಿಬಿರದಲ್ಲಿ ಪಾಲ್ಗೊಂಡ ಕಲಾವಿದರು ಚಿತ್ರ ರಚನೆಯಲ್ಲಿ ತಲ್ಲೀನರಾಗಿದ್ದರು. ಚಿತ್ರಕಲಾ ಶಿಕ್ಷಕರು, ನುರಿತ ಕಲಾವಿದರು, ಹೊಸ ವಿದ್ಯಾರ್ಥಿಗಳು ಇದ್ದರು. ಚಿತ್ರಕಲಾ ಶಿಕ್ಷಕರು ಪಳಗಿದ ಕಲಾವಿದರು ಆದ ಚಂದ್ರಕಾಂತ್ ಅರಸೀಕೆರೆ, ಡಿ.ಎಸ್.ಚಂದ್ರಶೇಖರ್ ಉದಯಪುರ, ಹಾಸನದ ಸಿ.ಕೆ.ಭಾರತೀಶ್, ಕೃಷ್ಣಾಚಾರಿ, ಚಂದ್ರಪ್ರಭ, ಮಹಾಲಕ್ಷ್ಮಿ, ರಶ್ಮಿ, ವೈಷ್ಣವಿ, ಕಾರ್ಕಳದಿಂದ ಆಗಮಿಸಿದ್ದ ಶ್ರೇಷ್ಠ ಜಯಪ್ರಕಾಶ್, ತುಮಕೂರಿನ ಸುಪ್ರೀತಾ ಕಾರ್ತಿಕ್ ಜೊತೆಗೆ ಚಿತ್ರಕಲೆಯನ್ನು ಕಲಿಯಲು ಆಸಕ್ತಿಯಿಂದ ಭಾಗವಹಿಸಿದ್ದ ಯುವ ವಿದ್ಯಾರ್ಥಿಗಳು ಯಶಸ್ವಿ, ರಾಶಿ, ತನಿಷ ಹೆಚ್.ಟಿ. ರಿಷಿಕ, ಸಾನ್ವಿ, ಸಂಜನಾ, ಚಿರಂತನ, ನಿಶಾಂತ್, ವೃಷಬ್ ಎಸ್. ಅತ್ರೇಯ, ವರುಣ್, ಲಿಖಿತ್, ನಿರಂತ್, ವರ್ಷಿತ, ಐಶ್ವರ್ಯಶ್ರೀ ಹೀಗೆ ಅಂದಾಜು 30 ಮಂದಿಯ ವಿವಿಧ ವಯೋಮಾನದ ಕಲಾವಿದರ ಸಮ್ಮಿಲನ.

- Advertisement -

ನನ್ನನ್ನು ಎಲ್ಲರಿಗೂ ಪರಿಚಯಿಸಿ ದೇಸಾಯಿ “ಅನಂತರಾಜು, ಇಲ್ಲಿ ಮಾರ್ಗದರ್ಶಕರಾಗಿ ಬಂದಿರುವ ಕಲಾವಿದರು ತುಂಬಾ ಪ್ರತಿಭ್ವಾನಿತರಿದ್ದಾರೆ. ನೀವು ಅವರನ್ನು ಪ್ರತ್ಯೇಕ ಸಂದರ್ಶಿಸಿ ಅವರಿಂದ ವೈಯುಕ್ತಿಕ ಸಾಧನೆ ಕುರಿತ್ತಾಗಿ ಮಾಹಿತಿ ಪಡೆದು ಲೇಖನ ಮಾಡಬಹುದು ಎಂದರು. ನಾನು ಈ ಹಿಂದೆ ಚಿತ್ರಕಲಾ ಪ್ರದರ್ಶನ ಮತ್ತು ಕಲಾವಿದರ ಕುರಿತಾಗಿಯೇ ಪ್ರಕೃತಿ ವಿಕೃತಿ ಕಲಾಕೃತಿ, ಲೋಕ ಸೃಷ್ಟಿ ಕಲಾ ದೃಷ್ಟಿ ಮತ್ತು ಬಣ್ಣದ ಬದುಕು ಯಾಕೂಬ ಪುಸ್ತಕ ಪ್ರಕಟಿಸಿದ್ದೆ. ಮತ್ತೆ ಮತ್ತೇ ಹೊಸ ಹೊಸ ಕಲಾವಿದರನ್ನು ಪರಿಚಯಿಸುವುದು ನನ್ನ ಮನದಾಶಯವು ಹೌದು. ಸರಿ ನಾನು ಈ ಮಾರ್ಗದರ್ಶಕ ಕಲಾವಿದರೊಟ್ಟಿಗೆ ಮಾತನಾಡಿ ಅವರ ಕಲಾಸಾಧನೆಯ ಮಾಹಿತಿ ಕೋರಿದೆ. ಶಿಬಿರದಲ್ಲಿ ಭಾಗವಹಿಸಿದ್ದ ಚಂದ್ರಕಾಂತ್ ನಾಯರ್ ಮತ್ತು ಚಂದ್ರಪ್ರಭರ ಕಲಾ ಪರಿಚಯ ಕುರಿತ್ತಾಗಿ ಈ ಹಿಂದೆ ಬರೆದಿದ್ದೆ. ನಾಯರ್ ಮೈಸೂರು ಸಾಂಪ್ರದಾಯಿಕ ಶೈಲಿಯ ಬಗ್ಗೆ ಒಂದಿಷ್ಟು ಮಾಹಿತಿ ನೀಡಿದರು.

ಮೈಸೂರು ಚಿತ್ರಕಲೆಯು ದಕ್ಷಿಣ ಭಾರತದ ಶಾಸ್ತ್ರೀಯ ಚಿತ್ರಕಲೆಯ ಪ್ರಮುಖ ರೂಪವಾಗಿದ್ದು ಇದು ಹುಟ್ಟಿಕೊಂಡಿದ್ದು ಮೈಸೂರು ನಗರದ ಸುತ್ತಮುತ್ತ. ಮೈಸೂರು ಆಡಳಿತಗಾರರು ಇದನ್ನು ಪ್ರೋತ್ಸಾಹಿಸಿ ಪೋಷಿಸಿದರು. ಮೂಲ ಅಜಂತಾ ಕಾಲದ್ದು. ಕರ್ನಾಟಕದಲ್ಲಿ ಈ ಕಲೆಗೆ ಅದರದೇ ಆದ ಇತಿಹಾಸವಿದೆ. ವಿಜಯನಗರ ರಾಜರು ಆಡಳಿತಗಾರರು ಸಾಮಂತ ರಾಜರುಗಳ ಪ್ರೋತ್ಸಾಹ ಸಾಹಿತ್ಯ ಕಲೆ ವಾಸ್ತು ಶಿಲ್ಪ, ಧಾರ್ಮಿಕ ಮತ್ತು ತತ್ವಶಾಸ್ತ್ರದ ಚರ್ಚೆ ಈ ಹಿನ್ನೆಲೆಯಲ್ಲಿ ವಿಜಯನಗರದಲ್ಲಿ ಬಾರಿ ವರ್ಣಚಿತ್ರಗಳು ಹುಟ್ಟಿಕೊಂಡವು. ತಾಳಿಕೋಟೆ ಕದನದಲ್ಲಿ ವಿಜಯನಗರ ಸಾಮ್ರಾಜ್ಯ ಪತನದ ನಂತರ ರಾಜಮನೆತನದ ಆಶ್ರಯದಲ್ಲಿದ್ದ ಕಲಾವಿದರು ಮೈಸೂರು ತಂಜಾವೂರು ಸುರಪುರ ಮೊದಲಾಗಿ ವಿವಿಧ ಸ್ಥಳಗಳಿಗೆ ವಲಸೆ ಹೋದರು. ಸ್ಥಳೀಯ ಕಲಾತ್ಮಕ ಸಂಪ್ರದಾಯಗಳು ಪದ್ಧತಿಗಳ ಹೀರಿಕೊಳ್ಳುವಿಕೆ ಮೈಸೂರು ತಂಜಾವೂರು ಶಾಲೆಗಳನ್ನು ಒಳಗೊಂಡು ವಿಜಯನಗರ ಚಿತ್ರಕಲೆ ಕ್ರಮೇಣ ದಕ್ಷಿಣ ಭಾರತದಲ್ಲಿ ಅನೇಕ ಶೈಲಿಗಳ ವರ್ಣಚಿತ್ರ ಕಲೆಯಾಗಿ ಪರಿಣಮಿಸಿತು. ಅಂದಹಾಗೆ ದೇಸಾಯಿ ಅವರ ಜನ್ಮಸ್ಥಳವೂ ತಾಳಿಕೋಟೆಯಾಗಿದ್ದು ವಿಜಯನಗರ ಸಾಮ್ರಾಜ್ಯದಲ್ಲಿ ಚಿನ್ನದ ವ್ಯಾಪಾರ ವೈಭವದಲ್ಲಿ ಮೆರೆದ ಹಿನ್ನೆಲೆಯಲ್ಲಿ ಪ್ರಸಿದ್ಧಿಗೆ ಬಂದ ಈ ಕಲೆಯ ಪುನರುತ್ಥಾನ ಆಶಯದಲ್ಲಿ ಮೊದಲ ಬಾರಿಗೆ ಹಾಸನದಲ್ಲಿ ಈ ಕ್ಯಾಂಪ್‍ನ್ನು ಆಯೋಜಿಸಿದ್ದು ಈ ಕಲಾಕೃತಿಗಳ ಪ್ರದರ್ಶನವು ಜೂನ್ 6ರವರೆಗೂ ಇದ್ದು ಸಾರ್ವಜನಿಕರು ಬಂದು ವೀಕ್ಷಿಸಬಹುದಾಗಿದೆ ಎಂದು ಬಿ.ಎಸ್.ದೇಸಾಯಿ ತಿಳಿಸಿದರು.

ಮೈಸೂರು ವರ್ಣಚಿತ್ರಗಳು ತಮ್ಮ ಸೌಂದರ್ಯ ಮ್ಯೂಟ್ ಬಣ್ಣ ವಿವರಗಳಿಂದ ಹೆಸರುವಾಸಿಯಾಗಿದೆ. ಈ ವರ್ಣಚಿತ್ರಗಳ ಹೆಚ್ಚಿನ ವಿಷಯಗಳು ಹಿಂದೂ ದೇವ ದೇವತೆಗಳ ಹಿಂದೂ ಪುರಾಣಗಳ ದೃಶ್ಯಗಳನ್ನು ಒಳಗೊಂಡಿದೆ. ಈ ಐತಿಹಾಸಿಕ ಪರಂಪರೆಯುಳ್ಳ ಕಲಾ ಶೈಲಿಯನ್ನು ಉತ್ತೇಜಿಸುವ ಈ ಶಿಬಿರ ತುಂಬಾ ಉಪಯುಕ್ತವಾಗಿತ್ತೆಂದು ಚಂದ್ರಕಾಂತ್ ತಿಳಿಸಿದರು. ಮೈಸೂರಿನಿಂದ ಆಗಮಿಸಿದ್ದ ಐವರು ಮಾಗದರ್ಶಕ ಕಲಾವಿದರಾದ ತೇಜಸ್ವಿನಿ, ಶಿವಬಾಬು, ಬಸವರಾಜು, ಚೇತನ್, ನಂದನ್ ಇವರು ಮೈಸೂರು ಸಾಂಪ್ರದಾಯಿಕ ಶೈಲಿಯ ಚಿತ್ರಕಲಾಕೃತಿ ರಚನೆಯ ವಿಧಾನ ತಂತ್ರಗಾರಿಕೆ ಬಣ್ಣಗಳ ಬಳಕೆ ಬಗ್ಗೆ ಮಾರ್ಗದರ್ಶನ ಮಾಡಿ ಶಿಬಿರದಲ್ಲಿ ಭಾಗವಹಿಸಿದ ಕಲಾವಿದರಿಂದ ರಚಿತ 27 ಕಲಾಕೃತಿಗಳಿಗೆ ಪೋಟೋ ಪ್ರೇಂ ಹಾಕಿ ಪ್ರದರ್ಶನಕ್ಕೆ ಇರಿಸಲಾಗಿತ್ತು. ಇದೇ ಸಂದರ್ಭ ಮನೆ ಮನೆ ಕವಿಗೋಷ್ಠಿ ವತಿಯಿಂದ ಬಂಗಾಳಿ ಕವಿ ರವೀಂದ್ರನಾಥ್ ಟ್ಯಾಗೋರ್ ಅವರ ಜನ್ಮದಿನ ಹಿನ್ನೆಲೆಯಲ್ಲಿ ಅವರ ಬದುಕು ಮತ್ತು ಸಾಹಿತ್ಯ ಕುರಿತು ಇಲ್ಲಿಯೇ ಉಪನ್ಯಾಸ ಕವಿಗೋಷ್ಠಿ ಏರ್ಪಡಿಸಿದ್ದೆನು. ದಿನಾಂಕ 7-5-1861ರಂದು ಜನಿಸಿದ ರವೀಂದ್ರನಾಥ ಟ್ಯಾಗೋರ್ ಕವಿ, ನಟ, ನಾಟಕಕಾರ, ಕಥೆ ಕಾದಂಬರಿಕಾರರು, ಚಿತ್ರಕಲಾವಿದರು, ಸಂಗೀತಗಾರರು ಆಗಿ ತಮ್ಮ ಸಾಹಿತ್ಯ ಯಾನದಲ್ಲಿ ರವೀಂದ್ರರು 2,233 ಹಾಡುಗಳನ್ನು ಬರೆದಿದ್ದಾರೆ. ಇವರ ಗೀತಾಂಜಲಿ ಕವನ ಸಂಕಲನಕ್ಕೆ 13-11-1913ರಂದು ನೊಬೆಲ್ ಪ್ರಶಸ್ತಿ ಬಂದಿದೆ. ಡಬ್ಲ್ಯೂ ಬಿ. ಏಟ್ಸ್ ಇದನ್ನು ಆಧ್ಯಾತ್ಮಿಕ ಗೀತೆಗಳ ಸಂಕಲನ ಎಂದು ಕರೆದಿದ್ದಾರೆ. ಕವಯಿತ್ರಿ ನೀಲಾವತಿ ಸಿ.ಎನ್. ಡಾಕ್ಟರ್ ಸಿ.ಎನ್.ಜಗದೀಶ್ ಬಿ.ಎಸ್. ದೇಸಾಯಿ ಅವರು ರವೀಂದ್ರನಾಥ್ ಟ್ಯಾಗೋರ್ ಅವರ ಬದುಕು ಸಾಹಿತ್ಯ ಚಿತ್ರಕಲೆ ಕುರಿತು ಮಾತನಾಡಿದರು. ಇದೇ ವೇಳೆ ಗದಗದ ಕವಿ ಕಲಾವಿದ ವಿಜಯ ಕಿರೇಸೂರ ಅವರು ಬೆಂಗಳೂರಿನಿಂದ ಆಗಮಿಸಿದ್ದ ರೂಪದರ್ಶಿ ಪರಿಣಿತರ  ಭಾವಚಿತ್ರ ಚಿತ್ರಿಸುವುದನ್ನು ನೇರ ಪ್ರಾತ್ಯಕ್ಷಿಕೆಯಲ್ಲಿ ನೋಡಿ ಬೆರಗಾದೆವು. ಪ್ರಮುಖವಾಗಿ ಗೋಲ್ಡ್ ಕಲರ್ ವಿನ್ಯಾಸದಲ್ಲಿ ಚಿತ್ರಗಳು ದೇವರ ಚಿತ್ರಪಟಗಳು ಚಿನ್ನದ ಡಿಸೈನ್‍ಗಳಲ್ಲಿ ಲೈಟ್ ಬೆಳಕಿನಲ್ಲಿ ಪಳ ಪಳ ಹೊಳೆಯುತ್ತಿವೆ. ಚಿತ್ಕಲಾ ಹವ್ಯಾಸಿ ಚಿತ್ರಕಲಾ ಶಾಲೆಯ ವಿದ್ಯಾರ್ಥಿ ಕಲಾವಿದೆ ಸಾನ್ವಿಯ ಗಜಲಕ್ಷ್ಮೀ, ಕಲಾವಿದೆ ರಾಶಿ ಎಸ್. ಅರೇಕಲ್ ಅವರು ರಚಿಸಿದ ಕಮಲದ ಮೇಲೆ ಕುಳಿತ ಲಕ್ಷ್ಮಿ, ಚಂದ್ರಕಾಂತ್ ನಾಯರ್ ಅವರ ಪ್ರಭಾವಳೆ ಮಧ್ಯ ಗಣೇಶ, ಶ್ರೇಷ್ಠ ಜಯಪ್ರಕಾಶ್ ಅವರ ಸರಸ್ವತಿ ರಾಧ ಕೃಷ್ಣರ ನವ್ಯ ಭವ್ಯ ವಿನ್ಯಾಸದ ಪೇಂಟಿಂಗ್ಸ್ ಒಳಗೊಂಡು ಎಲ್ಲವೂ ಮನ ಸೆಳೆಯುತ್ತವೆ.

- Advertisement -

ಗೊರೂರು ಅನಂತರಾಜು, ಹಾಸನ.
ಮೊಬೈಲ್: 9449462879.
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

 

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವಿ ಸಿದ್ಧಲಿಂಗಯ್ಯಾ ಹಿರೇಮಠ ಅವರಿಗೆ ಸನ್ಮಾನ

ಗೋಕಾಕ - ಬಸವ ಸಮಿತಿ 2024 ನೇ ಸಾಲಿನ ವಿಶ್ವಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಕವನ ಸ್ಪರ್ದೆಯಲ್ಲಿ ಭಾಗವಹಿಸಿದ ಬೆಳಗಾವಿ ಜಿಲ್ಲೆಯ ಗೋಕಾಕ...
- Advertisement -

More Articles Like This

- Advertisement -
close
error: Content is protected !!
Join WhatsApp Group