ಮೂಡಲಗಿ: ಅರಭಾವಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸಂಗನಕೇರಿ ಗ್ರಾಮದಲ್ಲಿ ಬಿಜೆಪಿ ಏಜೆಂಟರು ಬೂತ್ ಒಳಗಡೆ ಬಂದ ಜನರಿಗೆ/ ಮತದಾರರಿಗೆ ಬಿಜೆಪಿಗೆ ಮತ ಹಾಕಿ ಅಂತ ಹೇಳುತ್ತಿದ್ದುದನ್ನು ಕಾಂಗ್ರೆಸ್ ಏಜೆಂಟರು ನಿಲ್ಲಿಸಲು ಹೇಳಿದ್ದಕ್ಕೆ ಮತದಾನ ಮುಗಿದ ಮೇಲೆ ಸಂಜೆ 6 ಗಂಟೆಯ ನಂತರ ಬಿಜೆಪಿ ಕಾರ್ಯಕರ್ತರು,ನಾಲ್ಕು ಜನ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ
ಹಲ್ಲೆಗೊಳಗಾದ ಕಾಂಗ್ರೆಸ್ ಕಾರ್ಯಕರ್ತರು. 1)ಸದ್ದಾಂ ಲೋಳಕರ 2)ಸುಭಾನ ಮುಜಾವರ 3) ಸಮೀರ್ ಜಮಾದಾರ4)ಉಮರ ಮುಲ್ಲಾ ಎಂದು ಗುರುತಿಸಲಾಗಿದೆ.
1)ಭೀಮಶಿ ಮಾಳೇದ 2) ಬಸು ಮಾಳ್ಯಾಗೋಳ 3)ಸಿಂಧೂರ ಅರಭಾವಿ ಸೇರಿದಂತೆ ಇನ್ನೂ 20ಕ್ಕಿಂತ ಹೆಚ್ಚು ಕಲ್ಲೋಳಿ ಮತ್ತು ಗೋಕಾಕ ದಿಂದ ಬಂದವರು ಹಲ್ಲೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಆರೋಪಿಸಿದ್ದಾರೆ.
ಗೋಕಾಕ ಸರ್ಕಾರಿ ಆಸ್ಪತ್ರೆಗೆ ಹೋಗಿ ಹಲ್ಲೆಗೊಳಗಾದವರನ್ನು ವಿಚಾರಿಸಿದ ನಂತರ ಘಟಪ್ರಭಾ ಪೊಲೀಸ್ ಪಿ ಎಸ್ ಐ ಅವರಿಗೂ ವಿಷಯ ತಿಳಿದ್ದೇನೆ ಎಂದು ಅರವಿಂದ ದಳವಾಯಿ ತಿಳಿಸಿದರು.