spot_img
spot_img

ಬೆಳಗಾವಿ ಜಿಲ್ಲಾ ಕಸಾಪ ಘಟಕದ ವತಿಯಿಂದ ಸರ್ ಮಿರ್ಜಾ ಇಸ್ಮಾಯಿಲ್ ಜನ್ಮದಿನಾಚರಣೆ

Must Read

ಬೆಳಗಾವಿ : ನೆಹರು ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲಿ ಒಬ್ಬರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಜನ್ಮದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಜಿಲ್ಲಾ ಮಹಿಳಾ ಕದಳಿ ವೇದಿಕೆ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಅವರು ಮಾತನಾಡಿ ಕನ್ನಡ ನಾಡು ನುಡಿ, ಭಾಷೆಗೆ ಸಂಬಂಧಿಸಿದಂತೆ ಜಾತ್ಯತೀತವಾಗಿ ಭಾಷೆಯ ಬೆಳವಣಿಗೆಗಾಗಿ ಇಸ್ಮಾಯಿಲ್ ರವರು ಶ್ರಮಿಸಿದರು. ಅವರ ಕಾಲದಲ್ಲಿ ಕನ್ನಡ ಸಾಹಿತ್ಯ ಪರ ಕೆಲಸಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳು ಆದವು ಎಂದು ಭಾಷೆಗಾಗಿ ಮತ್ತು ಕನ್ನಡ ನಾಡಿಗಾಗಿ ಅವರು ಮಾಡಿದ ಅನೇಕ ಕಾರ್ಯಕ್ರಮಗಳನ್ನು ವಿವರಿಸಿದರು.

‘ಕನ್ನಡ ಸಾಹಿತ್ಯ ಪರಿಷತ್ತಿಗೆ ಮಿರ್ಜಾ ಇಸ್ಮಾಯಿಲ್ ಅವರ ಕೊಡುಗೆ’ ಕುರಿತು ಅಂಜುಮನ್ ಮಹಾವಿದ್ಯಾಲಯದ ಪ್ರಾಚಾರ್ಯ ಹೆಚ್. ಆಯ್. ತಿಮ್ಮಾಪುರ ಉಪನ್ಯಾಸ ನೀಡುತ್ತಾ ಮಾತನಾಡಿ, ಇಸ್ಮಾಯಿಲ್ ಅವರು ಕನ್ನಡ ಭಾಷೆ ಜಾತ್ಯತೀತ ವಾದದ್ದು ಎಂದರು ಮುಂದೆ ಅವರು ಪರಿಷತ್ತಿಗೆ ಅನೇಕ ರೂಪುರೇಷೆಗಳನ್ನು ಹಾಕಿಕೊಟ್ಟರು. ಕನ್ನಡವನ್ನು ಮೊದಲಿಗೆ ಆಡಳಿತ ಭಾಷೆಯನ್ನಾಗಿ ಮಾಡುವಲ್ಲಿ ಶ್ರಮಿಸಿದರು. ಅವರು ಮೂಲತಃವಾಗಿ ಜನರಿಗೆ ನೆರವಾಗುವ ಕಾರ್ಯಗಳನ್ನು ಮಾಡಬೇಕು ಹೊರತು ಜಾತಿಗೆ ಅಂಟಿಕೊಂಡು ಇರಬಾರದು ಎಂದು ಕನ್ನಡಕ್ಕೆ ಪ್ರಾಧಾನ್ಯತೆ ನೀಡುತ್ತಾ ಕೆಲಸ ಕಾರ್ಯಗಳನ್ನು ಮಾಡಿದರು ಎಂದರು.

ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ರವರು ಮಾತನಾಡಿ, ಧಾರವಾಡ ದಲ್ಲಿ ಆರಂಭವಾದ ಕಸಾಪ ಬೆಂಗಳೂರಿಗೆ ಸ್ಥಳಾಂತರಗೊಂಡು ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುವಲ್ಲಿ ಇಸ್ಮಾಯಿಲ್ ರವರ ಕೊಡುಗೆ ಅಪಾರವಾದದ್ದು ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಚನಗೌಡ ಪಾಟೀಲ, ಲೇಖಕಿಯರ ಸಂಘದ ಅಧ್ಯಕ್ಷೆ ಜಯಶೀಲ ಬ್ಯಾಕೋಡ, ಭಾರತಿ ಮಠದ, ಸುನೀಲ ಹಲವಾಯಿ ಪ್ರಕಾಶ ಅವಲಕ್ಕಿ, ಸುರೇಶ ಹಂಜಿ, ಶಿವಾನಂದ ತಲ್ಲೂರ,ರಮೇಶ್ ಮಗದುಮ್ ವಿರೂಪಾಕ್ಷ ದೊಡ್ಡಮನಿ, ಬಿ.ಬಿ ಮಠಪತಿ,ಶ್ರೀರಂಗ ಜೋಷಿ ಡಾ. ಅಡಿವೇಶ ಇಟಗಿ ಸೇರಿದಂತೆ ಕ.ಸಾ.ಪ ಪದಾಧಿಕಾರಿಗಳು, ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾ ಕಾರ್ಯದರ್ಶಿ ಎಂ ವೈ ಮೆಣಸಿನಕಾಯಿ ಸ್ವಾಗತಿಸಿದರು ರಾಜೇಶ್ವರಿ ಹಿರೇಮಠ ನಾಡಗೀತೆ ಪ್ರಸ್ತುತಪಡಿಸಿದರು, ಸುಧಾ ಪಾಟೀಲ ನಿರೂಪಿಸಿದರು ಮಲ್ಲಿಕಾರ್ಜುನ ಕೋಳಿ ವಂದಿಸಿದರು.

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!