spot_img
spot_img

ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ “ಕನ್ನಡ ನಾಡು ನುಡಿ” ಕುರಿತು – ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆ

Must Read

ಕನ್ನಡ ನಾಡು ರೂಪುಗೊಂಡು ೬೬ ವಸಂತಗಳನ್ನು ಪೂರೈಸುತ್ತಿರುವ ಹೊಸ್ತಿಲಲ್ಲಿ, ನಾಡಿನ ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ಸಾಹಿತ್ಯವನ್ನು ಕುರಿತು ಮೆಲುಕು ಹಾಕುವ ಸದುದ್ದೇಶದಿಂದ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ‌ ಯರಗಟ್ಟಿ ಹಾಗೂ ಸಿ.ಎಂ.ಮಾಮನಿ ‌ಸರಕಾರಿ ಪ್ರಥಮ ದರ್ಜೆ ಕಾಲೇಜು ಯರಗಟ್ಟಿಯ ಕನ್ನಡ ವಿಭಾಗಗಳ‌ ಸಹಯೋಗದಲ್ಲಿ ‘ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ “ಕನ್ನಡ ನಾಡು ನುಡಿ” ಕುರಿತು – ಗೂಗಲ್ ಫಾರ್ಮ್ ಆಧಾರಿತ ರಾಜ್ಯ ಮಟ್ಟದ ಆನ್ ಲೈನ್ ರಸಪ್ರಶ್ನೆ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ.

ಆಸಕ್ತರು ಮುಕ್ತವಾಗಿ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ದಿ: ೨೫.೧೦.೨೦೨೨ರಂದು ಮಧ್ಯಾಹ್ನ ೧೨ ರಿಂದ ೧ರ ವರೆಗೆ ಮಾತ್ರ ಈ ಲಿಂಕ್ ಮೂಲಕ ಸ್ಪರ್ಧೆ ನಡೆಯಲಿದೆ.

ಸ್ಪರ್ಧೆಯಲ್ಲಿ ೫೦ ವಸ್ತುನಿಷ್ಠ ಬಹುಆಯ್ಕೆ ಮಾದರಿಯ ಪ್ರಶ್ನೆಗಳಿವೆ. ಹೆಚ್ಚು ಅಂಕ ಗಳಿಸುವ ಮೊದಲ ಮೂರು ಕನ್ನಡಿಗರಿಗೆ ರಾಜ್ಯೋತ್ಸವದ ದಿನದಂದು ನಡೆಯುವ ಕಾರ್ಯಕ್ರಮದಲ್ಲಿ ಸೂಕ್ತ ಬಹುಮಾನ ನೀಡಲಾಗುವುದು. ಜೊತೆಗೆ ೬೦% ಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ(೩೦) ಸರಿ ಉತ್ತರ ನೀಡುವ ಸ್ಪರ್ಧಾರ್ಥಿಗಳಿಗೆ ಪ್ರಮಾಣಪತ್ರ ದೊರಯಲಿದೆ.

ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಕೆಳಗಿನ ಲಿಂಕ್ ಬಳಸಿರಿ

https://forms.gle/bGepWVY7tXkqWXHeA

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಡಾ. ರಾಜಶೇಖರ ಬಿರಾದಾರ
ಸಹಾಯಕ ಪ್ರಾಧ್ಯಾಪಕರು,
ಸ.ಪ್ರ.ದ. ಕಾಲೇಜು ಯರಗಟ್ಟಿ
ಮೊ. ೯೭೪೦೯೫೪೧೪೦

ತಮ್ಮಣ್ಣ ಕಾಮಣ್ಣವರ
ಅಧ್ಯಕ್ಷರು, ಕ.ಸಾ.ಪ. ಯರಗಟ್ಟಿ
ಮೊ. ೯೪೪೮೨೨೫೪೮೪

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!