spot_img
spot_img

ಸಿಟ್ಟು ಗೆದ್ದವ ವಿವೇಕಿಯಾದ,ಸಿಟ್ಟಿಗೆದ್ದವ ಅವಿವೇಕಿಯಾದ -ಎಲ್.ಎಸ್.ಶಾಸ್ತ್ರೀ

Must Read

- Advertisement -

ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ 24 ರಂದು ಲೇಖಕ ಅಪ್ಪಾಸಾಹೇಬ ಅಲಿಬಾದಿಯವರು ಬರೆದಿರುವ ನಾಲ್ಕು ಕೃತಿಗಳು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ,ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ಅಪ್ಪಾಸಾಹೇಬ ಅಲಿಬಾದಿಯವರ ಸಾಂಸ್ಕೃತಿಕ ಪ್ರತಿಷ್ಠಾನ ಇವರ ಸಂಯುಕ್ತಾಶ್ರಯದಲ್ಲಿ ಲೋಕಾರ್ಪಣೆಗೊಂಡವು.

ಕೃಷ್ಣೆಯ ಮಡಿಲು,ಚುಟುಕು ಚೇತನ,ವಚನ ಬೆಳಕು,ಶ್ರಾವಣ ಸಿಂಚನ ಕೃತಿಗಳ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆವಹಿಸಿ ಮತ್ತು ಕೃತಿಗಳ ಪರಿಚಯಿಸಿ ಮಾತನಾಡಿದ ಬೆಳಗಾವಿ ಹಿರಿಯ ಸಾಹಿತಿ ಎಲ್.ಎಸ್.ಶಾಸ್ತ್ರೀಯವರು, ಸಿಟ್ಟುಗೆದ್ದವ ವಿವೇಕಿಯಾದ,ಸಿಟ್ಟಿಗೆದ್ದವ ಅವಿವೇಕಿಯಾದ ಎನ್ನುತ್ತಾ ಗೊಮ್ಮಟನಂತೆ ಎದೆಯುಬ್ಬಿಸಿ ಬೆತ್ತಲಾಗಿ ನಿಲ್ಲಲು ಧೈರ್ಯ ಬೇಕು,ನಿಜಭಕ್ತನಾದವಗೆ ಶಿವಧ್ಯಾನ ಸಾಕು ಆಡಂಬರದ ಆಚರಣೆಗಳು ಏಕೆ ಬೇಕು ? ಎಂದು ಕೃತಿಗಳ ಅರ್ಥವನ್ನು ವಿವರಿಸಿದರು.

- Advertisement -

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಶಾಸಕ ಎಸ್.ಸಿ.ಮಾಳಗಿಯವರು ಮಾತನಾಡುತ್ತಾ, ಕವನ ಸಂಕಲನಗಳಲ್ಲಿ ಡಾ.ಪಿ.ಬಿ.ಗವಾನಿಯವರು ರಚಿಸಿದ ಚಿತ್ರಗಳು ಕವಿತೆಗಳ ಅರ್ಥವನ್ನು ಗಟ್ಟಿಗೊಳಿಸಿವೆ ಎಂದು ಅಭಿಮಾನಪಟ್ಟರು.

ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪಿ.ಜಿ.ಕೆಂಪನ್ನವರ ಕೃತಿಗಳನ್ನು ಪರಿಚಯಿಸುತ್ತಾ ರೈತರ ಬಾಳಿನಲ್ಲಿ ಬರವೇ ನೀ ಬರದೇ ಇರು,ಬುದ್ಧ ಬೇಕು ಯುದ್ಧ ಬೇಡ ಎನ್ನುವ ಕವನಗಳ ಅರ್ಥವನ್ನು ವಿವರಿಸಿದರು.

ಶ್ರಾಂತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಅಶೋಕ ಮಳಗಲಿಯವರು ಲೇಖಕರ ಕುರಿತು ಅಭಿಮಾನದ ಮಾತುಗಳನ್ನಾಡಿದರು. ಮಹಾನಂದಾ ಪರುಶೆಟ್ಟಿ ಮತ್ತುಅನ್ನಪೂರ್ಣ ಮಳಗಲಿ ಇವರ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.

- Advertisement -

ಕಾರ್ಯಕ್ರಮದಲ್ಲಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಹೇಮಾವತಿ ಸೋನೊಳ್ಳಿಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಎಸ್. ಪಿ .ಪಿ.ಬಿ.ಯಲಿಗಾರ,ಸಾಹಿತಿಗಳಾದ ಸ.ರಾ.ಸುಳುಕೂಡೆ,ಎಮ್.ವಾಯ್. ಮೆನಸಿಣಕಾಯಿ, ಬಸವರಾಜ ಸುಣಗಾರ,ಎಲ್.ವಿ.ಪಾಟೀಲ,ಜಯಪ್ರಕಾಶ ಅಬ್ಬಿಗೇರಿ, ಜಯಶ್ರೀ ನಿರಾಕಾರಿ,ರಾಜನಂದಾ ಗಾರ್ಗಿ,ಜ್ಯೋತಿ ಬದಾಮಿ,ಸುನಂದಾ ಎಮ್ಮಿ,ರೇಣುಕಾ ಮರಾಠೆ,ಡಾ.ಅನ್ನಪೂರ್ಣ ಹಿರೇಮಠ ಅನೇಕ ಗಣ್ಯರು ಉಪಸ್ಥಿತರಿದ್ದರು.

ಆಶಾ ಯಮಕನಮರಡಿ ನಿರೂಪಿಸಿದರು. ಸಾಹಿತಿ ಭಾರತಿ.ಅ.ಅಲಿಬಾದಿ ವಂದಿಸಿದರು.

- Advertisement -
- Advertisement -

Latest News

Shahid Kapoor Birthday: ಈ ಬಾಲಿವುಡ್ ಹೀರೊ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಶಾಹಿದ್ ಕಪೂರ್ ಬಾಲಿವುಡ್ ನ ಬಹು ಬೇಡಿಕೆಯ ನಟರಲ್ಲಿ ಒಬ್ಬರು. ಇಂದು (ಫೆಬ್ರವರಿ 25) ಅವರ ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಎರಡು ದಶಕಗಳಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group