spot_img
spot_img

ಮಹಿಳೆಯರು ಕೀಳರಿಮೆಯಿಂದ ಹೊರಬರಬೇಕು

Must Read

spot_img
- Advertisement -

ಸಿಂದಗಿ: ಮಹಿಳೆಯರೆಂದರೆ ಶೋಷಿತರು ಎಂಬ ಭಾವನೆ ಈ ಸಮಾಜದಲ್ಲಿದೆ. ಆದರೆ ಈ ಸಂಸ್ಥೆಯಲ್ಲಿ ಎಲ್ಲರಿಗೂ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿ ಮಹಿಳೆಯರು ಶಿಕ್ಷಣವಂತರಾಗಬೇಕು ಎಂಬುದು ಸಂಸ್ಥೆಯ ಉದ್ದೇಶ ಎಂದು ಎಚ್.ಜಿ.ಪಿಯು ಕಾಲೇಜು ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಹೇಳಿದರು.

ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿ ಮಾತನಾಡಿದ ಅವರು, ಮಹಿಳೆಯರು ಸ್ವಯಂ ಉದ್ಯೋಗವನ್ನು ಹುಡುಕುವಂತೆ ಆಗಬಾರದು.

ಬದಲಿಗೆ ಉದ್ಯೋಗವನ್ನು ಸೃಷ್ಟಿಸಿಕೊಳ್ಳುವ ಮನೋಭಾವದವರಾಗಬೇಕು. ಹೆಣ್ಣಿಗೆ ಶಿಕ್ಷಣ ನೀಡಿದರೆ ಇಡೀ ದೇಶಕ್ಕೆ ಶಿಕ್ಷಣವನ್ನು ನೀಡಿದಂತಾಗುತ್ತದೆ. ಹೆಣ್ಣು ಮಕ್ಕಳು ಕೀಳರಿಮೆಯಯಿಂದ ಹೊರ ಬಂದು ಧನಾತ್ಮಕವಾಗಿ ಯೋಚನೆ ಮಾಡಬೇಕು. ಶ್ರೀ ಮಠವು ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳನ್ನು ಆರಂಭಿಸಬೇಕು. ಮಹಿಳೆಯರಿಂದ ಸಣ್ಣ ಕೈಗಾರಿಗೆ, ಗೃಹ ಉಪಯೋಗಿ ಕಾರ್ಯಗಳನ್ನು ಮಾಡುತ್ತಾ ಮಹಿಳೆಯರು ಉದ್ಯಮಿಯಾಗಬೇಕು. ಸರಕಾರವನ್ನು ನಂಬಿಕೊಂಡು ಕೂಡುವುದನು ಕಡಿಮೆ ಮಾಡಿ, ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

- Advertisement -

ಅತಿಥಿ ಸ್ಥಾನವನ್ನು ಅಲಂಕರಿಸಿದ ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಿ. ಮಠ ಮಾತನಾಡಿ,  ಈ ಸಂಸ್ಥೆಯ ನೀಡುವ ಎಲ್ಲ ರೀತಿಯ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಸ್ವ-ಉದ್ಯೋಗಗಳನ್ನು ಮುಂದುವರೆಸಿಕೊಂಡು ಹೋಗಬೇಕು. ಕೀಳರಿಮೆಯನ್ನು ಹೋಗಲಾಡಿಸಿಕೊಂಡು ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಈ ವೇಳೆ ಕಾರ್ಯಕ್ರಮದ ಪಾವನ ಸಾನ್ನಿಧ್ಯ ವಹಿಸಿದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಸಾರಂಗಮಠದ ಚೇರಮನ್ನ್ ಗುರುಕುಲ ಭಾಸ್ಕರ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಪ್ರಾಚಾರ್ಯ ಎಸ್.ಎಂ. ಪೂಜಾರಿ ಅಧ್ಯಕ್ಷೀಯ ಮಾತುಗಳನ್ನಾಡಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕ ಎಂ.ವಿ.ಗಣಾಚಾರಿ, ಉಪನ್ಯಾಸಕರಾದ ಮಹಾಂತೇಶ ನೂಲಾನವರ, ಜಿ.ಎ.ನಂದಿಮಠ, ಜಿ.ಎಸ್.ಕುಲಕರ್ಣಿ, ಪಿ.ಎಮ್ ಮಾಲಿಪಾಟೀಲ್, ಅನೀಲಕುಮಾರ ರಜಪೂತ, ಎಸ್.ಎಮ್. ಹೂಗಾರ, ಎಮ್.ಕೆ. ಬಿರಾದಾರ, ಎಸ್.ಸಿ ದುದ್ದಗಿ, ಎಲ್.ಎಮ್ ಮಾರ್ಸನಳ್ಳಿ, ಹೇಮಾ ಕಾಸರ, ಜಿ.ವಿ ಪಾಟೀಲ್, ವರ್ಷಾ ಪಾಟೀಲ್, ಶ್ರೀದೇವಿ ದುದ್ದಗಿ, ಬಸಮ್ಮ ಧರಿ, ಮಂಗಳಾ ಈಳಗೇರ, ಸತೀಶ ಕಕ್ಕಸಗೇರಿ, ಡಿ.ಎಂ. ಪಾಟೀಲ, ಶಂಕರ ಕುಂಬಾರ, ವಿಜಯಲಕ್ಷ್ಮೀ ಭಜಂತ್ರಿ ಸೇರಿದಂತೆ ಮಾಹಾವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳು ಇದ್ದರು.

- Advertisement -

ಈ ವೇಳೆ ಜಿ.ಎ. ನಂದಿಮಠ ಸ್ವಾಗತಿಸಿದರು. ವಿದ್ಯಾರ್ಥಿ ವಿದ್ಯಾಶ್ರೀ ರುಕುಂಪೂರ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಶೃತಿ ಹೂಗಾರ ವರದಿ ವಾಚಿಸಿದರು. ಪೂಜಾ ಸಾರಂಗಮಠ ಮತ್ತು ನಾಗಮ್ಮ ದೊಡಮನಿ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ವಿದ್ಯಾಶ್ರೀ ನಿಗಡಿ ವಂದಿಸಿದರು.

- Advertisement -
- Advertisement -

Latest News

ಯಶಸ್ವಿ ಪ್ರಯೋಗ ಪ್ರಚಂಡ ರಾವಣ

ಹಾಸನ ಜಿಲ್ಲಾ ಕನ್ನಡ ರಂಗಭೂಮಿ ಕಲಾವಿದರ ಸಂಘದ ಕಲಾವಿದರು ಗಾಡೇನಹಳ್ಳಿ ವೀರಭದ್ರಾಚಾರ್ ನಿರ್ದೇಶನದಲ್ಲಿ ದಿವಂಗತ ಕಣಗಲ್ ಪ್ರಭಾಕರ್ ವಿರಚಿತ ಪ್ರಚಂಡ ರಾವಣ ನಾಟಕ ಪ್ರದರ್ಶಿಸಿದರು. ಈ ನಾಟಕವನ್ನು...
- Advertisement -

More Articles Like This

- Advertisement -
close
error: Content is protected !!
Join WhatsApp Group