ಮಹಿಳಾ ಆಧಾರಿತ ಚಿತ್ರ “ವೇದ”; ಎಲ್ಲರೂ ನೋಡಿ ಹಾರೈಸಿ – ಶಿವರಾಜ್ ಕುಮಾರ್

0
245

ಬೀದರ – ವೇದ, ಒಂದು ಮಹಿಳಾ ಆಧಾರಿತ ಚಿತ್ರವಾಗಿದ್ದು ಚಿತ್ರ ಚೆನ್ನಾಗಿದೆ ಎಂಬ ಅಭಿಪ್ರಾಯ ಎಲ್ಲರಿಂದ ಬಂದಿದೆ ಎಂದು ಚಿತ್ರನಟ ಶಿವರಾಜ್ ಕುಮಾರ ಹೇಳಿದರು.

ಪ್ರಥಮ ಬಾರಿ ನಿರ್ಮಾಪಕರಾಗಿ ತಾವು ನಟಿಸಿ ಹೊರ ತಂದಿರುವ ಚಿತ್ರ ವೇದ ದ ಬಗ್ಗೆ ಬೀದರನಲ್ಲಿ ಶಿವರಾಜ್ ಕುಮಾರ ಮಾತನಾಡಿದರು.

ಮಹಿಳೆಯರ ಮೇಲೆ ಸಮಾಜದಲ್ಲಿ ಏನು ನಡೆಯುತ್ತಿದೆ ಮುಂದೆ ಏನೇನು ನಡೆಯುತ್ತದೆ ಎಂಬ ಬಗ್ಗೆ ಚಿತ್ರದಲ್ಲಿ ಸಣ್ಣ ಸೂಚನೆ ನೀಡಲಾಗಿದೆ. ಈ ಚಿತ್ರವನ್ನು ಜನ ಮೆಚ್ಚಿದ್ದು ನಮ್ಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಶಿವರಾಜಕುಮಾರ ಹಾಗೂ‌‌ ನಿರ್ಮಾಪಕರಾದ ಗೀತಾ ಶಿವರಾಜಕುಮಾರಗಾಗಿ ಚಿತ್ರ ನೋಡಬೇಡಿ, ನಿಮಗಾಗಿ ಸಿನಿಮಾ ನೋಡಿ. ಈ ಚಿತ್ರದಲ್ಲಿ ಒಂದು ಸಂದೇಶವಿದೆ ಎಂದು ಇದು ನಮ್ಮ ಮನಸ್ಸಿಗೆ ಮುಟ್ಟಿದೆ. ಇಂಥಾ ದೊಡ್ಡವರ ಮಾತಲ್ಲಿ ಬಂದಿದ್ದು ಗ್ರೇಟ್ ಥಿಂಗ್ ಎಲ್ಲರು ಚಿತ್ರ ಮಂದಿರಕ್ಕೆ‌ಬಂದು ಚಿತ್ರ ನೋಡಿ ಎಂದು ಶಿವರಾಜ್ ಕುಮಾರ್ ನುಡಿದರು.

ಅಗಲಿದ ಅಪ್ಪು ಬಗ್ಗೆ ಮಾತನಾಡಿದ ಅವರು, ಬೀದರ್ ಜನರಿಗೆ ಅಪ್ಪು ಮೇಲೆ‌ ಪ್ರೀತಿ ಇದೆ. ಅವರು ತೋರಿಕೆಗಾಗಿ ಪ್ರೀತಿ ತೋರಿಸಲ್ಲ. ಅಪ್ಪು ನಮ್ಮಗಷ್ಟೇ ಮಗು ಅಲ್ಲ ಇಡೀ ಕರ್ನಾಟಕಕ್ಕೆ ಮಗು ಅವನು‌‌‌.ಕರ್ನಾಟಕ ಇರೋ ವರೆಗೂ ಅಪ್ಪು ಹೆಸರು ಅಜರಾಮರ. ಅಪ್ಪು ಸೇರಿದಂತೆ ನಾವು ನಮ್ಮಕೈಲಾದಷ್ಟು ಸಹಾಯ ಜನರಿಗೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ