ಮೂಡಲಗಿ:-ತಾಲೂಕಿನ ಶಿವಾಪೂರ ಗ್ರಾಮದಲ್ಲಿ ಮಹಿಳಾ ದಿನಾಚರಣೆ ನಿಮಿತ್ತವಾಗಿ ಮಹಿಳೆಯರ ಸ್ವಾವಲಂಬಿ, ಪ್ರಗತಿಯ ಹೆಚ್ಚಿಸುವ ಕಾರ್ಯಕ್ರಮ ಜರುಗಿತು.
ಮಹಿಳೆಯರು ಶಿಕ್ಷಣ, ಕಲೆ, ಸಾಹಿತ್ಯ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬಂದು ಸೇವೆ ಸಲ್ಲಿಸಿ ಮಹತ್ವದ ಕೊಡುಗೆ ನೀಡಿದ್ದಾರೆ ಮತ್ತು ಮಹಿಳಾ ದಿನಾಚರಣೆಯು ಶಾಂತಿ, ನ್ಯಾಯ ಮತ್ತು ಸಮಾನತೆಯ ಸಂಕೇತವಾಗಿದೆ ಎಂದು ಹಳ್ಳೂರ ವಲಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ
ರೇಣುಕಾ ಗುಡದರಿ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಶಿವಾಪೂರ ಇವರ ಸಂಯುಕ್ತ ಆಶ್ರಯದಲ್ಲಿ ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ವಿಶೇಷ ಮಹಿಳಾ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.
ನಂತರ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ಯಮನವ್ವ ಗಿಡ್ಡವ್ವಗೋಳ ,ಅಂಗನವಾಡಿ ಶಿಕ್ಷಕಿಯರಾದ ದಾಕ್ಷಾಯಿಣಿ ಗಿರೆನ್ನವರ ,ಬಾಳವ್ವ ಇಟನಾಳ,ಮಹಾನಂದ ನಂದಗಾವ ಮಠ, ಮೀನಾ ಮುಲ್ಲಾ, ದೇವಕಿ ಕೆಳಗಡೆ, ಆಶಾ ಕಾರ್ಯಕರ್ತೆಯರು ,ಪಂಚಾಯಿತಿ ಸಿಬ್ಬಂದಿಗಳು ,ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.