spot_img
spot_img

ಸಿಂದಗಿಯಲ್ಲಿ ಸಸ್ಯೋದ್ಯಾನ ಕಾಮಗಾರಿಗೆ ಮನಗೂಳಿ ಚಾಲನೆ

Must Read

- Advertisement -

ಸಿಂದಗಿ: ವೇಗವಾಗಿ ಬೆಳೆಯುತ್ತಿರುವ ಸಿಂದಗಿ ನಗರದಲ್ಲಿ 2.34 ಎಕರೆ ಜಾಗದಲ್ಲಿ ಅಂದಾಜು 2 ಕೋಟಿ ಅನುದಾನದಲ್ಲಿ ಸಸ್ಯೋದಾನ (ಟ್ರೀ ಪಾರ್ಕ್) ರೂಪಗೊಂಡು ಯುವಕರಿಗೆ ಹಾಗೂ ವೃದ್ಧರಿಗೆ ವಾಯುವಿಹಾರ ಮತ್ತು ಮಕ್ಕಳ ಕ್ರೀಡಾಭಿಮಾನ ಹೆಚ್ಚಿಸಲು ಸಹಕಾರಿ ಯಾಗಲಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಹೊನ್ನಪ್ಪಗೌಡರ ಲೇಔಟ್‍ನಲ್ಲಿ ಪ್ರಾದೇಶಿಕ ಅರಣ್ಯ ವಿಭಾಗ ವಿಜಯಪುರ ಹಾಗೂ ಪ್ರಾದೇಶಿಕ ಅರಣ್ಯ ವಲಯ ಸಿಂದಗಿ ಸಹಯೋಗದಲ್ಲಿ ಸಸ್ಯೋದ್ಯಾನ(ಟ್ರೀ ಪಾರ್ಕ) ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ಜಾಗೆಯನ್ನು ಅಭಿವೃದ್ಧಿ ಪಡಿಸಿ ಜನತೆಗೆ ಅನುಕೂಲ ಮಾಡಲಾಗುವುದು. ಪ್ರಸ್ತುತ ಕಾಮಗಾರಿಗೆ ರೂ. 1 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಮತ್ತೆ ರೂ.1ಕೋಟಿ ಅನುದಾನ ಸರಕಾರ ನೀಡಲಿದೆ. ಆನಂದ ಟಾಕೀಜ್ ಬಳಿಯ ಹಳೆ ತಹಸೀಲ್ದಾರ ಕಚೇರಿಯನ್ನು ಮೆಗಾ ಮಾರ್ಕೆಟ್ ಮಾಡಲು ಅಂದಾಜು ರೂ. 27 ಕೋಟಿ ವೆಚ್ಚದ ಯೋಜನೆ ಸರ್ಕಾರದ ಮುಂದಿದೆ. ಆಲಮೇಲ ರಸ್ತೆಯಲ್ಲಿನ ಮಿನಿ ವಿಧಾನಸೌಧಕ್ಕೆ ಇನ್ನೂ ರೂ. 5 ಕೋಟಿ ಕೊರತೆ ಇದೆ. ಆ ಅನುದಾನವನ್ನು ಕೂಡಲೇ ನೀಡಿ ಮಿನಿವಿಧಾನ ಸೌಧ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.        

ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ತಹಸೀಲ್ದಾರ್ ಕಚೇರಿಯನ್ನು ಪುರಸಭೆ ಕಾರ್ಯಾಲಯವಾಗಿ ಪರಿವರ್ತಿಸುವ ಯೋಚನೆ ಇದೆ. ಸಿಂದಗಿ ನಗರಕ್ಕೆ ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಪೂರೈಕೆ ಮಾಡಲು ಬಳಗಾನೂರ ಕೆರೆ ಹಾಗೂ ಯರಗಲ್ ಕಾಲುವೆಯಿಂದ ನೀರು ಹರಿದು ಬಂದು ಸಿಂದಗಿ ಕೆರೆ ತುಂಬಿದೆ ಅದರ ನಿರ್ವಹಣೆಯ ಕೊರತೆಯಿಂದ ಇನ್ನೂ ಪಟ್ಟಣದಲ್ಲಿ ನೀರು ಸರಬರಾಜುವಾಗುವಲ್ಲಿ ವಿಳಂಬವಾಗುತ್ತಿದ್ದು ಇನ್ನೊಂದು ಪ್ಲಾಂಟೇಶನ್ ದುರಸ್ತಿಗೊಳಿಸಿ ಕೇವಲ 8 ದಿನಗಳಲ್ಲಿ ಪ್ರತಿ 2 ದಿನಕ್ಕೆ ನೀರು ಬಿಡುವ ವ್ಯವಸ್ಥೆ ಕಲ್ಪಿಸಲಾಗುವುದು ಅಲ್ಲದೆ ಅಮೃತ-2 ಯೋಜನೆಯಡಿ 46 ಕೋಟಿ ಅನುದಾನದಲ್ಲಿ ಮನೆಮನೆಗೆ ಕುಡಿಯುವ ನೀರು ಕಾಮಗಾರಿಯನ್ನು ಆದಷ್ಟು ಶೀಘ್ರದಲ್ಲಿ ಪ್ರಾರಂಭ ಮಾಡುವುದಾಗಿ ತಿಳಿಸಿದರು.

- Advertisement -

ಈ ವೇಳೆ ಪುರಸಭೆ ಆಡಳಿತಾಧಿಕಾರಿ ವ ಇಂಡಿ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಮಾತನಾಡಿ, ಪರಿಸರದ ಸಮತೋಲನ ಕಾಪಾಡುವಲ್ಲಿ ವಿಫಲರಾಗಿರುವ ಕಾರಣ ಇಂದು ನಾವೆಲ್ಲ ಬರ ಅನುಭವಿಸುವಂತಾಗಿದೆ. ಪ್ರತಿಯೊಬ್ಬರು ಮನೆಗೊಂದು ಮರ ಊರಿಗೊಂದು ವನ ಎಂಬ ವಾಕ್ಯ ಅಳವಡಿಕೊಂಡಾಗ ಮಾತ್ರ ಇಂತಹ ಸಮಸ್ಯೆಯಿಂದ ಹೊರ ಬರಲು ಸಾಧ್ಯ ಎಂದರು 

ಸಾನ್ನಿಧ್ಯ ವಹಿಸಿದ್ದ ಸಾರಂಗಮಠದ ಡಾ. ಪ್ರಭು ಸಾರಂಗದೇವ ಸ್ವಾಮೀಜಿ ಮಾತನಾಡಿ, ಅರಣ್ಯ ಇರದಿದ್ದರೆ ಮಳೆ ಬರುವುದಿಲ್ಲ ನಾವೆಲ್ಲ ಮನೆಯಲ್ಲಿ ಉದ್ಯಾನವನ ನಿರ್ಮಾಣ ಮಾಡಿದ್ದಾಗ ಮಾತ್ರ ಮಳೆರಾಯನ ಆಗಮನ ಆಗಬಹುದು ಒಳ್ಳೆಯ ವಾಯು ಪಡೆದುಕೊಳ್ಳಬೇಕಾದರೆ  ಪ್ರತಿಯೊಬ್ಬರು ಮನೆ ನಿರ್ಮಾಣ ಮಾಡುವಾಗ ಕಂಪೌಂಡ ನಿರ್ಮಿಸಿ ಅದರೊಳಗೆ ಉದ್ಯಾನವನ ನಿರ್ಮಿಸಿದರೆ ಅದರಿಂದ  ಆಕ್ಸಿಜನ್ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.

ವಿಜಯಪುರ ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ  ಶಿವಶರಣಯ್ಯ ಮಾತನಾಡಿದರು.

ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ, ಅರಣ್ಯಾಧಿಕಾರಿಗಳಾದ ಭಾಗ್ಯವಂತ ಮಸೂದಿ, ರಾಜು ಬಿರಾದಾರ, ಎಸ್.ಎಸ್.ಬಿರಾದಾರ, ಎಮ್.ವೈ. ಮಲಕಣ್ಣವರ, ಮುಖಂಡರಾದ ಡಾ. ಮುತ್ತು ಮನಗೂಳಿ, ದಯಾನಂದ ಬಿರಾದಾರ, ಮಂಜುನಾಥ ಬಿಜಾಪೂರ, ಮುತ್ತು ಮುಂಡೇವಾಡಗಿ, ಚನ್ನು ಪಟ್ಟಣಶೆಟ್ಟಿ, ರಮೇಶ ಹೂಗಾರ, ರಜತ ತಾಂಬೆ ಸೇರಿದಂತೆ ಅನೇಕರು ಇದ್ದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group