spot_img
spot_img

ಕನ್ನಡ ಭಾಷೆ ಮತ್ತು ಸಾಹಿತ್ಯ ಕುರಿತ ಕಾರ್ಯಾಗಾರ

Must Read

- Advertisement -

ದಿನಾಂಕ: 21-09-2023 ರಂದು

ಬೆಳಗಾವಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಐ‌.ಕ್ಯೂ.ಎ.ಸಿ ಘಟಕ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ, ಇವರ ಸಹಯೋಗದಲ್ಲಿ “ಕನ್ನಡ ಭಾಷೆ ಮತ್ತು ಸಾಹಿತ್ಯ” ಕುರಿತು, ಕಾಲೇಜಿನ ಕನ್ನಡ  ವಿಭಾಗದಲ್ಲಿ’ ಒಂದು ದಿನದ ಕಾರ್ಯಾಗಾರ’  ಹಮ್ಮಿಕೊಳ್ಳಲಾಯಿತು.       

ಅತಿಥಿಗಳಾಗಿ ಆಗಮಿಸಿದ ಸುರೇಶ ಹಂಜಿ, ಅಧ್ಯಕ್ಷರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಇವರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಆದ್ಯ ಕರ್ತವ್ಯ ನಮ್ಮೆಲ್ಲರದಾಗಿದೆ ಎಂದು ಹೇಳಿದರು. ಇನ್ನೋರ್ವ ಅತಿಥಿಗಳು ಮಹಾಂತೇಶ ವಾಯ್ ಮೆಣಸಿನಕಾಯಿ, ಕಾರ್ಯದರ್ಶಿಗಳು ಜಿಲ್ಲಾ ಸಾಹಿತ್ಯ ಪರಿಷತ್ತು ಬೆಳಗಾವಿ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಪಡೆದು, ಎಲ್ಲರೂ ಸಾಹಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಹೇಳಿದರು.      

- Advertisement -

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮಹಾಂತೇಶ ನಗರದ ರಹವಾಸಿಗಳ ಸಂಘದ, ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ನಿರ್ಮಲಾ ಬಟ್ಟಲ, ಕನ್ನಡ ಭಾಷೆ ಪ್ರಾಚೀನವಾದ ಭಾಷೆಯಾಗಿದೆ, ಕನ್ನಡ ಸಾಹಿತ್ಯ ಅದ್ಭುತವಾಗಿದೆ ಎಂದು ಹೇಳುತ್ತಾ ಭಾಷೆ, ಮತ್ತು ಸಾಹಿತ್ಯದ ಉಗಮ ವಿಕಾಸ, ಮಹತ್ವ ಕುರಿತು ಸವಿಸ್ತಾರವಾಗಿ  ಹೇಳುತ್ತಾ,ಕನ್ನಡ ಸಾಹಿತ್ಯವನ್ನು ಓದುವ ಹಾಗೂ ಬರೆಯುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ರಮೇಶ್ ಮಂಗಳೇಕರ ಅವರು, ಕನ್ನಡ ನಾಡು- ನುಡಿಯನ್ನು ಗೌರವಿಸಬೇಕು ಹಾಗೂ ಮಾತೃಭಾಷೆ ಬಗೆಗೆ ಎಲ್ಲರೂ ಅಭಿಮಾನವನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಸ್ವಾಗತ ಮತ್ತು ಪರಿಚಯ ಪ್ರಕಾಶ ಮಬನೂರ ಮಾಡಿದರು.

- Advertisement -

ಡಾ. ಶ್ರೀಮತಿ ಬಿ.ಎಸ್ ಗಂಗನಳ್ಳಿ, ಕನ್ನಡ ವಿಭಾಗದ ಮುಖ್ಯಸ್ಥರು, ಪ್ರಾಸ್ತಾವಿಕವಾಗಿ ಮಾತನಾಡಿದರು. ವಂದನಾರ್ಪಣೆಯನ್ನು ಡಾ. ಪ್ರವೀಣ ಕೊರ್ಬು ಅವರು ಮಾಡಿದರು. ಕುಮಾರಿ ತಬಸುಮ ನೇಗಿನಾಳ ಕಾರ್ಯಕ್ರಮದ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ವೀರಭದ್ರ ಅಂಗಡಿ, ಜಿಲ್ಲಾ ಸಂಘಟಕರು ಸಾಹಿತ್ಯ ಪರಿಷತ್ತು ಬೆಳಗಾವಿ, ಶಂಕರ ಸೊಂಟಕ್ಕಿ  (ಕನ್ನಡಾಸಕ್ತರು),ಡಾ. ಪಿ .ಎ  ಘಂಟಿ, ಪ್ರೊ. ಎಸ್. ಎಸ್ ತಟಗಾರ, ಪ್ರೊ.  ಶಂಶುದ್ದೀನ ನದಾಫ್ ಮುಂತಾದ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿನಿಯರು  ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ರೇಂಜರ್ಸ್ ತಂಡದವರು ನಿರ್ವಹಿಸಿದರು. ಕಾರ್ಯಕ್ರಮ ವ್ಯವಸ್ಥಿತವಾಗಿ ನೆರವೇರಿತು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group